ಸೋಮವಾರದಿಂದ ಮೆಟ್ರೋ ರೈಲು ಸಂಚಾರ ಪುನರಾರಂಭ

ಕಳದೆ ಮಾರ್ಚ್ ನಿಂದ ಕೊರೋನ ಕಾರಣಕ್ಕಾಗಿ ನಿಂತು ಹೋಗಿದ್ದ ಮೆಟ್ರೋ ರೈಲು ಸಂಚಾರ ಬರುವ ಸೋಮವಾರದಿಂದ ಮತ್ತೆ ಆರಂಭವಾಗಲಿದೆ.
ನಮ್ಮ ಮೆಟ್ರೋ
ನಮ್ಮ ಮೆಟ್ರೋ

ಬೆಂಗಳೂರು: ಕಳದೆ ಮಾರ್ಚ್ ನಿಂದ ಕೊರೋನ ಕಾರಣಕ್ಕಾಗಿ ನಿಂತು ಹೋಗಿದ್ದ ಮೆಟ್ರೋ ರೈಲು ಸಂಚಾರ ಬರುವ ಸೋಮವಾರದಿಂದ ಮತ್ತೆ ಆರಂಭವಾಗಲಿದೆ.

ಬೆಳಗ್ಗೆ 8 ರಿಂದ 11ರ ತನಕ ಹಾಗೂ ಸಂಜೆ 4.30ರಿಂದ ರಾತ್ರಿ 7.30ರ ತನಕ ಪ್ರತಿ ಐದು ನಿಮಿಷಗಳಿಗೊಮ್ಮೆ ಸಂಚರಿಸಲಿದ್ದು, ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಪ್ರಕಾರ, ಪರ್ಪಲ್ ಲೈನ್ ರೈಲುಗಳು ಇದೆ . 7ರಿಂದ. ಹಸಿರು ಲೈನ್ ನಲ್ಲಿ ಸಂಚಾರ ಇದೆ 9 ರಿಂದ ಆರಂಭವಾಗಲಿದೆ.  ಮೆಟ್ರೋ ರೈಲು ನಿಲ್ದಾಣ ಮತ್ತು ರೈಲಿನ ಒಳಗೆ ಪ್ರಯಾಣಿಕರು ನಿಲ್ಲಲು ಮಾರ್ಕ್ ಮಾಡಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸರಕಾರದ ಸೂಚನೆಗೆ ಮುಂಚಿತವಾಗಿ ಮೆಟ್ರೋ ಸಂಚಾರ ಆರಂಭಕ್ಕೆ ಈಗಾಗಲೇ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದು, ರೈಲು ನಿಲ್ದಾಣ ಪ್ರವೇಶಿಸುವ ಮೊದಲು  ಪ್ರತಿ ಪ್ರಯಾಣಿಕರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತದೆ. 

ಈ ಬಗ್ಗೆ ಮಾಹಿತಿ ನೀಡಿರುವ ಬಿಎಂಆರ್‌ಸಿಎಲ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್‌ ಅವರು, 'ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ನಿಲ್ದಾಣದೊಳಗೆ, ಪ್ಲಾಟ್‌ಫಾರಂನಲ್ಲಿ ಮಾರ್ಕಿಂಗ್‌ ಮಾಡಲಾಗುತ್ತಿದೆ. ಈ ಮಾರ್ಕ್ ನಲ್ಲೇ ಪ್ರಯಾಣಿಕರು ನಿಲ್ಲಬೇಕು. ಆರು ಕೋಚ್‌ಗಳ ರೈಲಿನಲ್ಲಿ 345  ಜನರಿಗೆ ಅವಕಾಶ ಕಲ್ಪಿಸಲಾಗುತ್ತದೆ. ನಿಲ್ದಾಣದಲ್ಲಿ ಮಾತ್ರವಲ್ಲದೇ ರೈಲಿನ ಒಳಗೂ ಮಾರ್ಕಿಂಗ್‌ ಇರುತ್ತದೆ. ನಿಗದಿತ ಸ್ಥಳದಲ್ಲಿ ಪ್ರಯಾಣಿಕರು ನಿಲ್ಲಬೇಕು ಮತ್ತು ಕುಳಿತು ಕೊಳ್ಳಬೇಕು. ಮಾಸ್ಕ್‌ ಕಡ್ಡಾಯ ಮಾಡಲಾಗಿದ್ದು, ನಿಲ್ದಾಣದಲ್ಲಿ ಪ್ರಯಾಣದ. ಟೋಕನ್‌ ವಿತರಿಸುವುದಿಲ್ಲ. ಅಂತೆಯೇ ಟೋಕನ್‌ಗಳನ್ನು  ಮುಟ್ಟುವುದನ್ನು ತಪ್ಪಿಸಲು ಕೇವಲ ಸ್ಮಾರ್ಟ್‌ ಕಾರ್ಡ್‌ಗಳ ಬಳಕೆಗೆ ಅವಕಾಶ ಕಲ್ಪಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ರೈಲು ಸಂಚಾರ ನಿಂತಿದ್ದರೂ ನಿರ್ವಹಣೆ ನಿರಂತರವಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವೇಳೆ ಒಂದು ಬಾರಿ ಎಲ್ಲ ಮಾರ್ಗದಲ್ಲೂ ಖಾಲಿ ರೈಲು ಸಂಚರಿಸುತ್ತಿವೆ. ಮೆಟ್ರೋ ರೈಲು ಪುನರಾರಂಭದ ಕುರಿತು ಕೇಂದ್ರ ನಗರ ವ್ಯವಹಾರಗಳ ಸಚಿವಾಲಯದಿಂದ ಎಸ್‌ಒಪಿ ಬಿಡುಗಡೆ ಮಾಡಲಾಗುತ್ತದೆ. ಅದರಲ್ಲಿ  ಯಾವುದಾದರೂ ಬದಲಾವಣೆಗಳು ಇದ್ದಲ್ಲಿ ಮಾಡಿಕೊಂಡು ರೈಲು ಸಂಚಾರ ಆರಂಭಿಸುತ್ತೇವೆ ಎಂದು ಚೌಹಾಣ್‌ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com