ಕೇಂದ್ರದಿಂದ 295 ಕೋಟಿ ರೂ. ನೆರೆ ಪರಿಹಾರ: ಇದೇ 7ರಿಂದ ಕೇಂದ್ರ ತಂಡದಿಂದ ಅಧ್ಯಯನ: ಆರ್ ಅಶೋಕ್
ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಲು ಇದೇ 7ರಿಂದ ಕೇಂದ್ರದ ಆರು ಜನರ ತಂಡ ರಾಜ್ಯಕ್ಕೆ ಭೇಟಿ ನೀಡಲಿದೆ.
Published: 03rd September 2020 07:54 PM | Last Updated: 03rd September 2020 07:54 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಲು ಇದೇ 7ರಿಂದ ಕೇಂದ್ರದ ಆರು ಜನರ ತಂಡ ರಾಜ್ಯಕ್ಕೆ ಭೇಟಿ ನೀಡಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಕೇಂದ್ರದ ಹಿರಿಯ ಅಧಿಕಾರಿ ಕೆ.ವಿ.ಪ್ರತಾಪ್ ನೇತೃತ್ವದ ಕೇಂದ್ರದ 6 ಜನರ ತಂಡ ರಾಜ್ಯಕ್ಕೆ ಭೇಟಿ ನೀಡ ಪರಿಶೀಲನೆ ನಡೆಸಲಿದೆ.
ಸೋಮವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ತಂಡ ಸಭೆ ನಡೆಲಿದ್ದು, 8 ರಂದು ಈ ತಂಡ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ನೆರೆಯಿಂದ ಆಗಿರುವ ಹಾನಿ ಕುರಿತು ಪರಿಶೀಲನೆ ನಡೆಸಲಿದೆ. ಕೊಡಗು, ವಿಜಯಪುರ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಿಗೆ ತೆರಳಿ ವಸ್ತುಸ್ಥಿತಿ ಮಾಹಿತಿ ಸಂಗ್ರಹಿಸಲಿದೆ. ಬಳಿಕ ಕೇಂದ್ರಕ್ಕೆ ಸಮಗ್ರ ವರದಿಸಲ್ಲಿಸಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಮ್ಮ ಇಲಾಖೆಯಿಂದಲೂ ಸಹ ಪ್ರತ್ಯೇಕವಾಗಿ 9 ರಂದು ಕೇಂದ್ರದ ತಂಡದೊಂದಿಗೆ ಸಭೆ ನಡೆಸಿ ಆಗಿರುವ ಹಾನಿ ಕುರಿತು ತಂಡಕ್ಕೆ ವರದಿ ಸಲ್ಲಿಸಲಾಗುವುದು. ಪ್ರಾಥಮಿಕ ಮಾಹಿತಿಯಂತೆ 48೦೦ ಕೋಟಿ ನಷ್ಟವಾಗಿದೆ. ಹಾನಿ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದರು.