ಬೆಂಗಳೂರು ಗಲಭೆ ಪೂರ್ವ ಯೋಜಿತ, ಕೋಮು ಪ್ರೇರಿತ: ವರದಿ

ಇತ್ತೀಚೆಗೆ ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿಯಲ್ಲಿ ನಡೆದ ಗಲಭೆ "ಪೂರ್ವ ಯೋಜಿತ ಮತ್ತು ಸಂಘಟಿತ". ಇದು "ನಿಸ್ಸಂದೇಹವಾಗಿ ಕೋಮು ಪ್ರೇರಿತವಾಗಿದೆ" ಎಂದು ಸಿಟಿಜನ್ಸ್ ಫಾರ್ ಡೆಮಾಕ್ರಸಿ ತನ್ನ ಸತ್ಯ ಶೋಧನಾ ವರದಿಯಲ್ಲಿ ತಿಳಿಸಿದೆ.
ಸತ್ಯ ಶೋಧನಾ ಸಮಿತಿಯಿಂದ ಮುಖ್ಯಮಂತ್ರಿಗೆ ವರದಿ ಸಲ್ಲಿಕೆ
ಸತ್ಯ ಶೋಧನಾ ಸಮಿತಿಯಿಂದ ಮುಖ್ಯಮಂತ್ರಿಗೆ ವರದಿ ಸಲ್ಲಿಕೆ

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿಯಲ್ಲಿ ನಡೆದ ಗಲಭೆ "ಪೂರ್ವ ಯೋಜಿತ ಮತ್ತು ಸಂಘಟಿತ". ಇದು "ನಿಸ್ಸಂದೇಹವಾಗಿ ಕೋಮು ಪ್ರೇರಿತವಾಗಿದೆ" ಎಂದು ಸಿಟಿಜನ್ಸ್ ಫಾರ್ ಡೆಮಾಕ್ರಸಿ ತನ್ನ ಸತ್ಯ ಶೋಧನಾ ವರದಿಯಲ್ಲಿ ತಿಳಿಸಿದೆ.

ಸಿಟಿಜನ್ಸ್ ಫಾರ್ ಡೆಮಾಕ್ರಸಿ ತನ್ನ ವರದಿಯನ್ನು ಶುಕ್ರವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸಲ್ಲಿಸಿದೆ. 

ಆಗಸ್ಟ್ 11 ರ ರಾತ್ರಿ ನಡೆದ ಗಲಭೆಯ ಸಮಯದಲ್ಲಿ ಜನಸಮೂಹವು ಈ ಪ್ರದೇಶದ ಕೆಲವು ಪ್ರಮುಖ ಹಿಂದೂಗಳನ್ನು ನಿರ್ದಿಷ್ಟವಾಗಿ ಗುರಿಯಾಗಿಸಿತ್ತು ಮತ್ತು ಇಡೀ ಘಟನೆಯು "ರಾಜ್ಯದ ವಿರುದ್ಧದ ಸಾಮಾನ್ಯ ಜನರ ನಂಬಿಕೆಯನ್ನು ಕಡಿಮೆ ಮಾಡುವ" ಉದ್ದೇಶದಿಂದ "ಸರ್ಕಾರದ ವಿರುದ್ಧದ ಗಲಭೆ"ಯಾಗಿ ಪರಿವರ್ತನೆಯಾಗಿದೆ ಎಂದು ವರದಿ ತಿಳಿಸಿದೆ.

ನಿವೃತ್ತ ಜಿಲ್ಲಾ ನ್ಯಾಯಾಧೀಶ ಶ್ರೀಕಾಂತ್ ಡಿ ಬಾಬಲಾಡಿ ನೇತೃತ್ವದ ಸತ್ಯ ಶೋಧನಾ ಸಮಿತಿಯು ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್, ನಿವೃತ್ತ ಐಎಫ್ಎಸ್ ಅಧಿಕಾರಿ ಆರ್ ರಾಜು, ಪತ್ರಕರ್ತರು, ವಕೀಲರು, ಪ್ರಾಧ್ಯಾಪಕರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡಿತ್ತು.

ಮದನ್ ಗೋಪಾಲ್ ನೇತೃತ್ವದ ಸಮಿತಿ ಸದಸ್ಯರು ಇಂದು ವರದಿಯನ್ನು ಯಡಿಯೂರಪ್ಪ ಅವರಿಗೆ ಸಲ್ಲಿಸಿದರು. ಹಿಂಸಾಚಾರದಲ್ಲಿ ಸುಮಾರು 36 ಸರ್ಕಾರಿ ವಾಹನಗಳು, ಸುಮಾರು 300 ಖಾಸಗಿ ವಾಹನಗಳು ಮತ್ತು ಅನೇಕ ಮನೆಗಳು ನಾಶವಾಗಿವೆ ಎಂದು ಅಂದಾಜಿಸಲಾಗಿದೆ ಎಂದು ಸಮಿತಿ ಹೇಳಿದೆ, ಹಾನಿಯು ಸುಮಾರು 10 ರಿಂದ 15 ಕೋಟಿ ರೂ. ಎಂದು ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com