ಹಿರಿಯ ಯಕ್ಷಗಾನ ಕವಿ, ಅರ್ಥಧಾರಿ ಅಂಬಾತನಯ ಮುದ್ರಾಡಿಗೆ ಪಾರ್ತಿಸುಬ್ಬ ಪ್ರಶಸ್ತಿ

ಹಿರಿಯ ಯಕ್ಷಗಾನ ಕವಿ, ಅರ್ಥಧಾರಿ ಅಂಬಾತನಯ ಮುದ್ರಾಡಿ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ ಒಲಿದು ಬಂದಿದೆ. 
ಅಂಬಾತನಯ ಮುದ್ರಾಡಿ
ಅಂಬಾತನಯ ಮುದ್ರಾಡಿ

ಬೆಂಗಳೂರು: ಹಿರಿಯ ಯಕ್ಷಗಾನ ಕವಿ, ಅರ್ಥಧಾರಿ ಅಂಬಾತನಯ ಮುದ್ರಾಡಿ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ ಒಲಿದು ಬಂದಿದೆ. 

2019ನೇ ಸಾಲಿನ ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡಮಿ ವಾರ್ಷಿಕ ಪ್ರಶಸ್ತಿಗಳು ಘೋಷಣೆಯಾಗಿದ್ದು ಯಕ್ಷಗಾನದ ಬಗೆಗೆ  ಹಲವಾರು ಕೃತಿಗಳನ್ನೂ ಪ್ರಕಟಿಸಿರುವ ಅಂಬಾತನಯ ಮುದ್ರಾಡಿಯವರನ್ನು ಪಾತ್ರಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

ಈ ಸಾಲಿನ ಯಕ್ಷಗಾನ ಅಕಾಡಮಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದವರ ವಿವರ ಹೀಗಿದೆ-

ಯಕ್ಷಗಾನ ವಿದ್ವಾಂಸರಾದ ಡಾ, ಚಂದ್ರಶೇಖರ್ ದಾಮ್ಲೆ, ಡಾ. ಆನಂದರಾಮ ಉಪಾಧ್ಯ, ಯಕ್ಷಗಾನ ಕಲಾವಿದರು ಮತ್ತು ವಿದ್ವಾಂಸ ಡಾ. ರಾಮಕೃಷ್ಣ ಗುಂದಿ, ಮೂಡಲಪಾಯ ಯಕ್ಷಗಾನ ಕಲಾವಿದ ಮತ್ತು ಸಂಘಟಕ ಕೆ.ಸಿ ನಾರಾಯಣ, ಮೂಡಲಪಾಯ ಯಕ್ಷಗಾನ ತಜ್ಞ ಡಾ. ಚಂದ್ರು ಕಾಳೇನಹಳ್ಳಿ  ಅವರುಗಳುಗೆ ಗೌರವ ಪ್ರಶಸ್ತಿ

ಯಕ್ಷಗಾನ ಮದ್ದಲೆ ವಾದಕ ನಲ್ಲೂರು ಜನಾರ್ಧನ ಆಚಾರ್, ಯಕ್ಷಗಾನ ಗುರುಗಳು ಮತ್ತು ವೇಷಧಾರಿ ಉಬರಡ್ಕ ಉಮೇಶ ಶೆಟ್ಟಿ, ಹಿರಿಯ ಭಾಗವತ ಕುರಿತ ಗಣಪತಿ ಶಾಸ್ತ್ರಿ, ಕಲಾವಿದರಾದ ಆರ್ಗೋಡು ಮೋಹನ್ ದಾಸ್ ಶೆಣೈ, ಮಹಮ್ಮದ್ ಗೌಸ್, ಪ್ರಸಾಧನ ಕಲಾವಿದ ಮೂರುರು ರಾಮಚಂದ್ರ ಹೆಗಡೆ, ತಾಳಮದ್ದಳೆ ಅರ್ಥಧಾರಿ ಎಂ ಎನ್ ಹೆಗಡೆ ಹಳವಳ್ಳಿ, ಯಕ್ಷಗಾನ ವೇಷಧಾರಿ ಹಾರಾಡಿ ಸರ್ವೋತ್ತಮ ಗಾಣಿಗ, ಮೂಡಲಪಾಯ ಯಕ್ಷಗಾನ ಮುಖವೀಣೆ ಕಲಾವಿದ ಬಿ. ರಾಜಣ್ಣ, ಮೂಡಲಪಾಯ ಯಕ್ಷಗಾನದ ಸ್ತ್ರೀ ವೇಷಧಾರಿ ಎ ಜಿ ಅಶ್ವಥ ನಾರಾಯಣ ಅವರುಗಳಿಗೆ ಯಕ್ಷಸಿಇರಿ ವಾರ್ಷಿಕ ಪ್ರಶಸ್ತಿ

ಯಕ್ಷಗಾನ ವೀರಾಂಜನೇಯ ವೈಭವ ಪುಸ್ತಕಕ್ಕೆ ಹೊಸ್ತೋಟ ಮಂಜುನಾಥ್ ಭಾಗವತ, ಅಗರಿ ಮಾರ್ಗ ಪುಸ್ತಕಕ್ಕೆ ಕೃಷ್ಣಪ್ರಕಾಶ ಉಳಿತ್ತಾಯ, ಮೂಡಲಪಾಯ ಯಕ್ಷಗಾನ ಬಯಲಾಟ- ಒಂದು ಅಧ್ಯಯನ ಸಂಶೋಧನಾ ಕೃತಿಗೆ ಡಾ. ಚಿಕ್ಕಣ್ಣ ಯೆಣ್ಣೆಕಟ್ಟೆ ಅವರುಗಳಿಗೆ ಪುಸ್ತಕ ಬಹುಮಾನ ದೊರಕಿದೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com