ಮೈಸೂರು ಕಾರ್ಖಾನೆಯಲ್ಲಿ ಕೊರೋನಾ ಸ್ಫೋಟ: 72 ಸಿಬ್ಬಂದಿಗಳಲ್ಲಿ ಸೋಂಕು ಪತ್ತೆ!

ಜ್ಯುಬಿಲಿಯೆಂಟ್ ಔಷಧಿ ಕಾರ್ಖಾನೆ ಹಾಗೂ ಜೆಕೆ ಟೈಯರ್ಸ್ ನಿಂದ ಕೊರೋನಾ ಸ್ಫೋಟಗೊಂಡು ಭಾರೀ ಆತಂಕೃ ಸೃಷ್ಟಿಸಿದ ಬಳಿಕವೂ ಮೈಸೂರಿನ ಹಲವು ಕಂಪನಿಗಳು ಈ ಬೆಳವಣಿಗೆಗಳ ಬಳಿಕವೂ ಎಚ್ಚೆತ್ತುಕೊಂಡಿಲ್ಲ ಎಂದೆನಿಸುತ್ತಿದೆ. ಮೈಸೂರಿನ ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬರೋಬ್ಬರಿ 72 ಮಂದಿ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಜ್ಯುಬಿಲಿಯೆಂಟ್ ಔಷಧಿ ಕಾರ್ಖಾನೆ ಹಾಗೂ ಜೆಕೆ ಟೈಯರ್ಸ್ ನಿಂದ ಕೊರೋನಾ ಸ್ಫೋಟಗೊಂಡು ಭಾರೀ ಆತಂಕೃ ಸೃಷ್ಟಿಸಿದ ಬಳಿಕವೂ ಮೈಸೂರಿನ ಹಲವು ಕಂಪನಿಗಳು ಈ ಬೆಳವಣಿಗೆಗಳ ಬಳಿಕವೂ ಎಚ್ಚೆತ್ತುಕೊಂಡಿಲ್ಲ ಎಂದೆನಿಸುತ್ತಿದೆ. ಮೈಸೂರಿನ ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬರೋಬ್ಬರಿ 72 ಮಂದಿ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. 

ಕಾರ್ಖಾನೆಯಲ್ಲಿ ಜಾಕಿ ಒಳ ಉಡುಪುಗಳನ್ನು ತಯಾರಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಸೋಂಕಿತ ವ್ಯಕ್ತಿಗಳೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವ ಜನರನ್ನು ಕ್ವಾರಂಟೈನ್'ಗೊಳಪಡಿಸದ ಕಂಪನಿಯು, ಇತರೆ ಸಿಬ್ಬಂದಿಗಳೂ ಇವರೊಂದಿಗೆ ಕೆಲಸ ಮಾಡುವಂತೆ ಒತ್ತಡ ಹೇರುತ್ತಿತ್ತು ಎಂಬ ಆರೋಪಗಳು ಕೇಳಿ ಬರುತ್ತಿವೆ. 

ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಮೈಸೂರು ಸಿಟಿ ಕಾರ್ಪೊರೇಶನ್‌ನ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಮತ್ತು ಆರೋಗ್ಯ ಅಧಿಕಾರಿ ಗೋಪಿಯವರು ಕಾರ್ಖಾನೆಗೆ ಭೇಟಿ ನೀಡಿದ್ದು, ಈ ವೇಳೆ ಸಿಬ್ಬಂದಿಗಳು ಕಂಪನಿಗಳ ವಿರುದ್ಧ ಸಾಕಷ್ಟು ದೂರು ನೀಡಿದ್ದಾರೆಂದು ಹೇಳಲಾಗುತ್ತಿದೆ. 

ಕಂಪನಿ ನಿರ್ವಾಹಕರು ಪರೀಕ್ಷೆ ಮಾಡಿಸಿಕೊಳ್ಳಲು ಸೂಕ್ತ ವ್ಯವಸ್ಥೆಗಳನ್ನು ಮಾಡಿಲ್ಲ. ಕ್ವಾರಂಟೈನ್'ನಲ್ಲಿರುವ ಅವಕಾಶ ಕೂಡ ನಮಗೆ ನೀಡಿಲ್ಲ ಎಂದು ಸಿಬ್ಬಂದಿಗಳು ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೋಪಿಯವರು, ಕಾರ್ಖಾನೆಗೆ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಕಾರ್ಖಾನೆಯಲ್ಲಿ ಒಟ್ಟು 1,200 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಕಾರ್ಖಾನೆಯಲ್ಲಿ ಈ ಮಟ್ಟದಲ್ಲಿ ಸೋಂಕು ಸ್ಪೋಟಗೊಂಡಿರುವ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಮೈಸೂರು ಸಿಟಿ ಕಾರ್ಪೊರೇಶನ್‌ನ ಆರೋಗ್ಯ ಅಧಿಕಾರಿ ಡಾ.ನಾಗರಾಜ್ ಮಾತನಾಡಿ, ಸಿಬ್ಬಂದಿಗಳು ಪರೀಕ್ಷೆ ಮಾಡಿಸಿಕೊಳ್ಳಲು ಇದೀಗ ಕಾರ್ಖಾನೆ ವ್ಯವಸ್ಥೆಯನ್ನು ಕಲ್ಪಿಸಿದೆ. ಪರೀಕ್ಷೆಯಲ್ಲಿ ವೈರಸ್ ದೃಢಪಡದವರು ಮಾತ್ರ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com