ಕೋವಿಡ್-19: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಏರುತ್ತಿದೆ ಸಾವಿನ ಪ್ರಮಾಣ!

ದಿನೇ ದಿನೇ ಕೊರೋನಾ ಏರುಗತಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸಾವಿನ ಪ್ರಮಾಣ ಸೇ.2.82ಕ್ಕೆ ಏರಿಕೆಯಾಗಿದೆ. ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಈ ಪ್ರಮಾಣ ತುಸು ಹೆಚ್ಚೇ ಆಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ದಿನೇ ದಿನೇ ಕೊರೋನಾ ಏರುಗತಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸಾವಿನ ಪ್ರಮಾಣ ಸೇ.2.82ಕ್ಕೆ ಏರಿಕೆಯಾಗಿದೆ. ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಈ ಪ್ರಮಾಣ ತುಸು ಹೆಚ್ಚೇ ಆಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. 

ಪುತ್ತೂರು ಒಂದರಲ್ಲೇ ಈ ವರೆಗೂ 358 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 23 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಪುತ್ತೂರಿನಲ್ಲಿ ಸಾವಿನ ಪ್ರಮಾಣ ಶೇ.6.42ಕ್ಕೆ ಏರಿಕೆಯಾಗಿದೆ. 

ಮಾರ್ಚ್ 23ರಿಂದ ಸೆ.2ರವರೆಗಿನ ಕೋವಿಡ್ ಸಾವು ಕುರಿತ ಅಂಕಿ ಅಂಶಗಳನ್ನು ಜಿಲ್ಲಾಡಳಿತ ಶುಕ್ರವಾರ ಬಿಡುಗಡೆಗೊಳಿಸಿದ್ದು, ಅದರಲ್ಲಿ ಈ ಅಂಶಗಳ ಕುರಿತು ಮಾಹಿತಿ ನೀಡಲಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರೆಗೂ ಒಟ್ಟು 13,479 ಸೋಂಕಿತರ ಪ್ರಕರಣಗಳು ಹಾಗೂ 381 ಮಂದಿ ಸಾವನ್ನಪ್ಪಿದ್ದಾರೆ. ಮಂಗಳೂರಿನಲ್ಲಿ ಒಟ್ಟು 8,988 ಕೇಸ್ ಪತ್ತೆಯಾಗಿದ್ದರೆ, 218 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿನ ಪ್ರಮಾಣ 2.82ಕ್ಕೆ ತಲುಪಿದೆ. ಕೋವಿಡ್ ಸಾವಿನಲ್ಲಿ 20 ವರ್ಷದೊಳಗೆ 4, 21ರಿಂದ 40ರೊಳಗೆ 30, 41ರಿಂದ 60ರೊಳಗೆ 132, 60ರಿಂದ 80ವರೆಗೆ ಗರಿಷ್ಠ 188 ಮಂದಿ ಹಾಗೂ 80 ವರ್ಷಕ್ಕಿಂತ ಮೇಲ್ಪಟ್ಟು 27 ಮಂದಿ ಮೃತಪಟ್ಟಿದ್ದಾರೆ, ಕೋವಿಡ್ ಅನಾರೋಗ್ಯದಿಂದ 364 (ಶೇ.95.53) ಮಂದಿ ಸಾವಿಗೀಡಾದರೆ, ಕೋವಿಡೇತರ ಅನಾರೋಗ್ಯದಿಂದ ಈ ಅವಧಿಯಲ್ಲಿ 17 (4.46) ಮಂದಿ ಸಾವಿಗೀಡಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com