ಹುಬ್ಬಳ್ಳಿ-ಬೆಳಗಾವಿ ನಡುವಿನ ಹೊಸ ಮಾರ್ಗಕ್ಕೆ ರೈಲ್ವೆ ಮಂಡಳಿ ಅನುಮೋದನೆ

ಕಿತ್ತೂರು ಮತ್ತು ಧಾರವಾಡದ ಮಾರ್ಗವಾಗಿ ಬೆಳಗಾವಿ ಮತ್ತು ಹುಬ್ಬಳ್ಳಿ ನಡುವಿನ 73 ಕಿಲೋಮೀಟರ್ ಉದ್ದದ ಹೊಸ ರೈಲ್ವೆ ಮಾರ್ಗದ ಯೋಜನೆಗೆ ರೈಲ್ವೆ ಮಂಡಳಿ ಅನುಮೋದಿಸಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ಕಚೇರಿ ಸೋಮವಾರ ಪ್ರಕಟಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಕಿತ್ತೂರು ಮತ್ತು ಧಾರವಾಡದ ಮಾರ್ಗವಾಗಿ ಬೆಳಗಾವಿ ಮತ್ತು ಹುಬ್ಬಳ್ಳಿ ನಡುವಿನ 73 ಕಿಲೋಮೀಟರ್ ಉದ್ದದ ಹೊಸ ರೈಲ್ವೆ ಮಾರ್ಗದ ಯೋಜನೆಗೆ ರೈಲ್ವೆ ಮಂಡಳಿ ಅನುಮೋದಿಸಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ಕಚೇರಿ ಸೋಮವಾರ ಪ್ರಕಟಿಸಿದೆ.

ಇದರಂತೆ, ಹೊಸ ಮಾರ್ಗ ಬೆಳಗಾವಿ-ಹುಬ್ಬಳ್ಳಿ ನಡುವಿನ ಪ್ರಯಾಣದ ಸಮಯವನ್ನು ಕನಿಷ್ಠ ಒಂದು ಗಂಟೆಯವರೆಗೆ ಕಡಿಮೆ ಮಾಡುವ ಸಾಧ್ಯತೆಯಿದೆ. ರಸ್ತೆ ಮಾರ್ಗಕ್ಕೆ ಹೋಲಿಸಿದರೆ ಇದು ಸುಮಾರು 31 ಕಿಲೋಮೀಟರ್ ದೂರವನ್ನು ಕಡಿಮೆ ಮಾಡುತ್ತದೆ.

ಧಾರವಾಡ ಮತ್ತು ಬೆಳಗಾವಿ ನಡುವೆ ಹನ್ನೊಂದು ಹೊಸ ನಿಲ್ದಾಣಗಳನ್ನು ಉದ್ದೇಶಿಸಲಾಗಿದೆ. ಇದರಲ್ಲಿ ನಾಲ್ಕು ನಿಲ್ದಾಣಗಳು ಅಂದರೆ ಧಾರವಾಡ, ಕ್ಯಾರಕೊಪ್ಪ, ಬೆಳಗಾವಿ ಮತ್ತು ದೇಸೂರ್ ಈಗಾಗಲೇ ಸ್ಥಾಪಿತವಾಗಿವೆ.

ಇತರ ಹೊಸ ನಿಲ್ದಾಣಗಳಾದ ಮಮ್ಮಿಗಟ್ಟಿ, ತೇಗೂರು, ಕಿತ್ತೂರು, ಹುಲಿಕಟ್ಟಿ, ಎಂ ಕೆ ಹುಬ್ಬಳ್ಳಿ, ಬಾಗೇವಾಡಿ ಮತ್ತು ಕನ್ವಿಕರ್ವಿನ್‍ಕೊಪ್ಪ ಸೇರಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com