ವಿದೇಶದಲ್ಲಿ ಲಕ್ಷಗಟ್ಟಲೇ ಸಿಗುತ್ತಿದ್ದ ಕೆಲಸಕ್ಕೆ ಗುಡ್ ಬೈ ಹೇಳಿ, ಕೃಷಿ ಆರಂಭಿಸಿದ ಸಾಪ್ಟ್ ವೇರ್ ಎಂಜಿನಿಯರ್!

ಕೃಷಿ ಲಾಭದಾಯಕವಲ್ಲ ಎಂಬ ಮನೋಭಾವದಿಂದ ಅದರಿಂದ ವಿಮುಖವಾಗುತ್ತಿರುವ ಯುವಕರೇ ಹೆಚ್ಚು. ಆದರೆ, ಇಲ್ಲಿನ  ಸಾಪ್ಟ್ ವೇರ್ ಎಂಜಿನಿಯರಿಂಗ್ ಒಬ್ಬರು ವಿದೇಶದಲ್ಲಿ ಲಕ್ಷಗಟ್ಟಲೇ ಸಂಬಳ ಸಿಗುತ್ತಿದ್ದ ಕೆಲಸಕ್ಕೆ ಗುಡ್ ಬೈ ಹೇಳಿ ಹಳ್ಳಿಗೆ ಬಂದು ಕೃಷಿಯನ್ನು ಆರಂಭಿಸಿದ್ದಾರೆ.
ಸಾಪ್ಟ್ ವೇರ್ ಎಂಜಿನಿಯರ್ ಸತೀಶ್ ಕುಮಾರ್
ಸಾಪ್ಟ್ ವೇರ್ ಎಂಜಿನಿಯರ್ ಸತೀಶ್ ಕುಮಾರ್

ಕಲುಬುರಗಿ: ಕೃಷಿ ಲಾಭದಾಯಕವಲ್ಲ ಎಂಬ ಮನೋಭಾವದಿಂದ ಅದರಿಂದ ವಿಮುಖವಾಗುತ್ತಿರುವ ಯುವಕರೇ ಹೆಚ್ಚು. ಆದರೆ, ಇಲ್ಲಿನ  ಸಾಪ್ಟ್ ವೇರ್ ಎಂಜಿನಿಯರಿಂಗ್ ಒಬ್ಬರು ವಿದೇಶದಲ್ಲಿ ಲಕ್ಷಗಟ್ಟಲೇ ಸಂಬಳ ಸಿಗುತ್ತಿದ್ದ ಕೆಲಸಕ್ಕೆ ಗುಡ್ ಬೈ ಹೇಳಿ ಹಳ್ಳಿಗೆ ಬಂದು ಕೃಷಿಯನ್ನು ಆರಂಭಿಸಿದ್ದಾರೆ.

ಸಾಪ್ಟ್ ವೇರ್ ಎಂಜಿನಿಯರ್ ವೃತ್ತಿ ತೊರೆದಿರುವ ಸತೀಶ್ ಕುಮಾರ್, ಕಲಬುರಗಿಯ ಜಿಲ್ಲೆಯ ಶೆಲಾಗಿ ಹಳ್ಳಿಯಲ್ಲಿ ಬೇಸಾಯದಲ್ಲಿ
ನಿರತರಾಗಿದ್ದಾರೆ.ಲಾಸ್ ಎಂಜಲೀಸ್, ಅಮೆರಿಕಾ, ದುಬೈ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾಪ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿರುವ ಸತೀಶ್ ಕುಮಾರ್ ವರ್ಷಕ್ಕೆ 1, 00, 000 ಅಮೆರಿಕನ್ ಡಾಲರ್ ಪಡೆಯುತ್ತಿದ್ದಾಗಿ ತಿಳಿಸಿದ್ದಾರೆ.

ಏಕತನದ ಕೆಲಸ ಮಾಡಿದ್ದರಿಂದ ಅನೇಕ ಸವಾಲುಗಳು ಇರಲಿಲ್ಲ. ಜೊತೆಗೆ ವೈಯಕ್ತಿಕ ಜೀವನದ ಕಡೆಗೆ ಗಮನ ಕೊಡಲು ಆಗುತ್ತಿರಲಿಲ್ಲ. ಆದ್ದರಿಂದ ಹಳ್ಳಿಗೆ ಬಂದು ಕೃಷಿಯನ್ನು ಆರಂಭಿಸಿರುವುದಾಗಿ ತಿಳಿಸಿದ್ದಾರೆ.ಕಳೆದ ತಿಂಗಳು ಜೋಳ ಬೆಳೆಯುವ 2 ಎಕರೆಯನ್ನು ಜಮೀನನ್ನು 2.5 ಲಕ್ಷಕ್ಕೆ ಖರೀದಿಸಿದ್ದು, ಕೃಷಿ ಕಾಯಕದಲ್ಲಿ ಖುಷಿ ಪಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com