ಅಯೋಧ್ಯೆಯಲ್ಲಿ ವಾಲ್ಮೀಕಿ ದೇವಾಲಯ ಸ್ಥಾಪನೆಯಿಂದ ಸೂಕ್ತ ಗೌರವ ಸಲ್ಲಿಸಿದಂತಾಗುತ್ತದೆ: ಪ್ರಸನ್ನಾನಂದ ಸ್ವಾಮೀಜಿ

ಅಯೋಧ್ಯೆಯಲ್ಲಿ ವಾಲ್ಮೀಕಿ ದೇವಾಲಯ ಸ್ಥಾಪನೆಯಿಂದ ಮಹರ್ಷಿಗಳಿಗೆ ಸೂಕ್ತ ಗೌರವ ಸಲ್ಲಿಸಿದಂತಾಗುತ್ತದೆ ಎಂದು ವಾಲ್ಮೀಕಿ ಗುರುಪೀಠದಪ್ರಸನ್ನಾನಂದ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.
ವಾಲ್ಮೀಕಿ (ಸಂಗ್ರಹ ಚಿತ್ರ)
ವಾಲ್ಮೀಕಿ (ಸಂಗ್ರಹ ಚಿತ್ರ)

ದಾವಣಗೆರೆ: ಅಯೋಧ್ಯೆಯಲ್ಲಿ ವಾಲ್ಮೀಕಿ ದೇವಾಲಯ ಸ್ಥಾಪನೆಯಿಂದ ಮಹರ್ಷಿಗಳಿಗೆ ಸೂಕ್ತ ಗೌರವ ಸಲ್ಲಿಸಿದಂತಾಗುತ್ತದೆ ಎಂದು ವಾಲ್ಮೀಕಿ ಗುರುಪೀಠದಪ್ರಸನ್ನಾನಂದ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.

ರಾಮನ ಹೆಸರು ಹೇಳಿಕೊಂಡು ರಾಜಕಾರಣಿಗಳು ಅಧಿಕಾರಕ್ಕೆ ಬರುತ್ತಾರೆ, ಹೀಗಾಗಿ ರಾಮಾಯಣ ಬರೆದ ವಾಲ್ಮೀಕಿಗೂ ಸೂಕ್ತ ಗೌರವ ಸ್ಥಾನ ಕಲ್ಪಿಸಲು ಕೇಂದ್ರ ಸರ್ಕಾರ ಮತ್ತು ಶ್ರೀರಾಮ ಜನ್ಮ ಭೂಮಿ ಟ್ರಸ್ಟ್ ಗೆ ಆಗ್ರಹಿಸಿದ್ದಾರೆ.

ಇನ್ನು ಪರಿಶಿಷ್ಟ ಪಂಗಡಗಳಿಗೆ ಶೇ.7.5 ರಷ್ಟು ಮೀಸಲಾತಿ ಹೆಚ್ಚಿಸಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ನ್ಯಾ.ನಾಗಮೋಹನ್ ಸಮಿತಿ ಈಗಾಗಲೇ  ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಕಡ್ಡಾಯವಾಗಿ ವರದಿಯನ್ನು ಅನುಷ್ಠಾನಗೊಳಿಸುವಂತೆ ಶಿಫಾರಸು ಮಾಡಿದೆ.

ಸಚಿವರುಗಳಾದ ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ಅವರನ್ನೊಳಗೊಂಡ ತಂಡ ಶೀಘ್ರದಲ್ಲೇ ಈ ಸಂಬಂಧ ಸಿಎಂ ಯಡಿಯೂರಪ್ಪ ಅವರಿಗೆ ಮೀಸಲಾತಿ ಸಂಬಂಧ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com