ಉಡುಪಿ: 14 ಕೋತಿಗಳ ಶವಪತ್ತೆ; ವಿಷಪ್ರಾಶನ ಶಂಕೆ

ಹೆಬ್ರಿ ತಾಲೂಕಿನ ನಡಪಾಲು ಗ್ರಾಮದ ರಸ್ತೆಯಲ್ಲಿ ಸುಮಾರು 14 ಕೋತಿಗಳು ಶವವಾಗಿ ಪತ್ತೆಯಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉಡುಪಿ: ಹೆಬ್ರಿ ತಾಲೂಕಿನ ನಡಪಾಲು ಗ್ರಾಮದ ರಸ್ತೆಯಲ್ಲಿ ಸುಮಾರು 14 ಕೋತಿಗಳು ಶವವಾಗಿ ಪತ್ತೆಯಾಗಿವೆ.

ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ, ಮರಣೋತ್ತರ ಪರೀಕ್ಷೆಗೆ ಕೋತಿಗಳ ಶವ ಕಳುಹಿಸಲಾಗಿದೆ, ಜೊತೆಗೆ ಸಾವಿಗೆ ಕಾರಣ ಕಂಡು ಹಿಡಿಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಸಮೀಪದ ಎಸ್ಟೇಟ್ ಮಾಲೀಕ. ತಾನು ಬೆಳೆದಿದ್ದ ಬೆಳೆಯನ್ನು ನಾಶ ಪಡಿಸಿದ ಹಿನ್ನೆಲೆಯಲ್ಲಿ ಕೋತಿಗಳನ್ನು ಕೊಂದಿದ್ದಾನೆ ಎಂದು ಹೇಳಲಾಗಿದೆ.ಇನ್ನೂ ಪ್ರಕರಣವನ್ನು ತನಿಖೆ ನಡೆಸುತ್ತಿದ್ದು ಶ್ವಾನದಳದ ಸಹಾದಿಂದ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಕುಂದಾಪುರ ವಿಭಾಗದ ಅರಣ್ಯ ಸಂರಕ್ಷಕ ಆಶೀಶ್ ರೆಡ್ಡಿ ತಿಳಿಸಿದ್ದಾರೆ.

ಮರಣೋತ್ತರ ವರದಿ ಬಂದ ಬಳಿಕ ಕೋತಿಗಳ ಸಾವಿಗೆ ಕಾರಣ ತಿಳಯಲಿದೆ ಎಂದು ಅವರು ತಿಳಿಸಿದ್ದಾರೆ, ವಿವಿಧ ಸ್ಥಳಗಳಲ್ಲಿ ಕೋತಿಗಳನ್ನು ಕೊಲೆ ಮಾಡಿ ನಡಪಾಲು ಗ್ರಾಮದಲ್ಲಿ ಎಸೆಯಲಾಗಿದೆ ಎಂದು ಹೇಳಲಾಗುತ್ತಿದೆ. ಮರಿಗಳು ಸೇರಿ ವಿವಿಧ ವಯಸ್ಸಿನ ಕೋತಿಗಳು ಸಾವನ್ನಪ್ಪಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com