ಬೆಳಗಾವಿ: ಅವಶ್ಯಕತೆಯಿರುವವರಿಗೆ ಉಚಿತವಾಗಿ ಆಕ್ಸಿಜನ್ ಪೂರೈಸುತ್ತಿರುವ ಉದ್ಯಮಿ

ಕೊರೋನಾದಿಂದಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೆಳಗಾವಿಯ ಉದ್ಯಮಿಯೊಬ್ಬರು ಉಚಿತವಾಗಿ ಆಕ್ಸಿಜನ್ ಪೂರೈಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಕೊರೋನಾದಿಂದಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೆಳಗಾವಿಯ ಉದ್ಯಮಿಯೊಬ್ಬರು ಉಚಿತವಾಗಿ ಆಕ್ಸಿಜನ್ ಪೂರೈಸುತ್ತಿದ್ದಾರೆ.

ಬೆಳಗಾವಿಯ ಆಕ್ಸಿಜನ್ ಪ್ರೈವೇಟ್ ಲಿಮಿಟೆಡ್ ನ ಮಾಲೀಕ ವೆಂಕಟೇಶ್ ಪಾಟೀಲ್ ಅವಶ್ಯಕತೆಯಿರುವವರಿಗೆ ಖಾಲಿ ಆಕ್ಸಿಜನ್ ಸಿಲಿಂಡರ್ ಗೆ ಉಚಿತವಾಗಿ ಆಕ್ಸಿಜನ್ ತುಂಬಿಸಿಕೊಡುತ್ತಿದ್ದಾರೆ.

ಜಿಲ್ಲೆಯ ಬಡವರು ಹಾಗೂ ಅವಶ್ಯಕತೆಯಿರುವವರು ಉಚಿತವಾಗಿ ಆಕ್ಸಿಜನ್ ಪೂರೈಸುತ್ತಿದ್ದಾರೆ. ಆಮ್ಲಜನಕ ಸೈಲಿನರ್‌ಗಳ ಕೊರತೆಯು ಹಲವಾರು ಕೋವಿಡ್ ರೋಗಿಗಳು ಪ್ರಾಣವನ್ನು ಕಳೆದುಕೊಂಡಿದ್ದರು. ಹಲವು ಎನ್ ಜಿ ಓ ಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಆಕ್ಸಿಜನ್ ಸಿಲಿಂಡರ್ ಗಳನ್ನು ಅವಶ್ಯಕತೆ ಇರುವವರಿಗೆ ನೀಡುತ್ತಿದ್ದಾರೆ. ಒಮ್ಮೆ ಬಳಕೆಯಾದ ಮೇಲೆ ಫಿಲ್ಲಿಂಗ್ ಮಾಡುವುದೇ ದೊಡ್ಡ ಸವಾಲಾಗಿತ್ತು.

ಇದನ್ನು ಅರಿತ ಪಾಟೀಲ್ ಅವರು ಎನ್ ಜಿ ಓಗಳಿಂದ ಆಕ್ಸಿಜನ್ ಸಿಲಿಂಡರ್ ಗಳನ್ನು ಪಡೆದು ಅದನ್ನು ಫಿಲ್ಲಿಂಗ್ ಮಾಡಲು ಮುಂದಾಗಿದ್ದಾರೆ. ಪ್ರತಿ ಸಿಲಿಂಡರ್ ಫಿಲ್ಲಿಂಗ್ ಮಾಡಲು 260 ರು ಹಣ ಬೇಕಾಗುತ್ತದೆ. ಇದುವರೆಗೂ ಪಾಟೀಲ್ 1,882 ಆಕ್ಸಿಜನ್ ಸಿಲಿಂಡರ್  ಅನ್ನು ಉಚಿತವಾಗಿ ತುಂಬಿಸಿಕೊಟ್ಟಿದ್ದಾರೆ. ಹಲವು ಎನ್ ಜಿ ಓಗಳು ಖಾಲಿ ಸಿಲಿಂಡರ್ ನೊಂದಿಗೆ ಪಾಟೀಲ್ ಅವರನ್ನು ಭೇಟಿ ಮಾಡಿ ಆಕ್ಸಿಜನ್ ತುಂಬಿಸಿಕೊಂಡಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com