ಬಿಬಿಎಂಪಿ ಮೇಯರ್, ಉಪ ಮೇಯರ್ ಅಧಿಕಾರ ಅವಧಿ ಹೆಚ್ಚಳ: ಎರಡೂವರೆ ವರ್ಷಕ್ಕೆ ಏರಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಅವರ ಆಡಳಿತ ಅವಧಿಯನ್ನು ಈಗಿರುವ ಒಂದು ವರ್ಷದ ಬದಲಿಗೆ 30 ತಿಂಗಳು ( ಎರಡೂವರೆ) ವರ್ಷಗಳಿಗೆ   ಹೆಚ್ಚಿಸಲಾಗಿದೆ. ನಗರದಲ್ಲಿನ ವಾರ್ಡ್ ಗಳ ಸಂಖ್ಯೆಯನ್ನು 198ರಿಂದ 225ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ.
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಅವರ ಆಡಳಿತ ಅವಧಿಯನ್ನು ಈಗಿರುವ ಒಂದು ವರ್ಷದ ಬದಲಿಗೆ 30 ತಿಂಗಳು ( ಎರಡೂವರೆ) ವರ್ಷಗಳಿಗೆ  ಹೆಚ್ಚಿಸಲಾಗಿದೆ. ನಗರದಲ್ಲಿನ ವಾರ್ಡ್ ಗಳ ಸಂಖ್ಯೆಯನ್ನು 198ರಿಂದ 225ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ.

ಜಂಟಿ ವಿಧಾನಸಭೆ ಬೃಹತ್ ಮಹಾನಗರ ಪಾಲಿಕೆ ಪುನರಚನಾ ಸಮಿತಿ ಮಾಡಿದ್ದ ಈ ಶಿಫಾರಸ್ಸುಗಳಿಗೆ ರಾಜ್ಯ ಸರ್ಕಾರ ಸೋಮವಾರ ಅನುಮೋದನೆ ನೀಡಿದೆ.

ಇದಲ್ಲದೇ, ಬಿಬಿಎಂಪಿ ಆಯುಕ್ತರನ್ನು ಇನ್ನು ಮುಂದೆ ಮುಖ್ಯ ಆಯುಕ್ತರು ಎಂದು ಕರೆಯಲಾಗುತ್ತದೆ.  ಪ್ರಸ್ತುತ ಇರುವ 8 ವಲಯಗಳನ್ನು  ಐದು  ಅಥವಾ 10-12ಕ್ಕೆ ಪ್ರತ್ಯೇಕಿಸುವ ಸಂಬಂಧ ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ
ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

12 ಸ್ಥಾಯಿ ಸಮಿತಿಗಳ ಬದಲಿಗೆ 8 ಸ್ಥಾಯಿ ಸಮಿತಿಗಳಿಗೆ ಇಳಿಸಲು ನಿರ್ಧರಿಸಲಾಗಿದೆ. ವಿಧಾನ ಪರಿಷತ್ ಸದಸ್ಯರು ಕೂಡಾ ಬಿಬಿಎಂಪಿ ಕೌನ್ಸಿಲ್ ನಲ್ಲಿ ಮತ ಚಲಾಯಿಸುವ ಹಕ್ಕನ್ನು ಪಡೆಯಲು ಸರ್ಕಾರ ಅನುಮತಿ ನೀಡಿದೆ.

ಪ್ರಸ್ತುತವಿರುವ ಮೇಯರ್ ಮತ್ತು ಪಾಲಿಕೆ ಸದಸ್ಯರ ಅವಧಿ ಸೆಪ್ಟೆಂಬರ್ 10ಕ್ಕೆ ಮುಗಿಯಲಿದೆ. ಮುಂದಿನ ಚುನಾವಣೆಯ ನಂತರ ಇದು ಜಾರಿಗೆ ಬರಲಿದೆ. ಕಳೆದ ವಾರ ನಡೆದ ಮೊದಲ ಸಭೆಯಲ್ಲಿ ಚರ್ಚೆ ಮಾಡಿದ ರೀತಿಯಲ್ಲಿ ಸೋಮವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.ಇನ್ನಿತರ ಅನೇಕ ವಿಚಾರಗಳ ಕುರಿತಂತೆ ಚರ್ಚೆ ನಡೆಸಲಾಗಿದೆ ಎಂದು ಬಿಬಿಎಂಪಿ ಪುನರ್ ರಚನಾ ಸಮಿತಿ ಅಧ್ಯಕ್ಷ ಎಸ್ ರಘು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಹೊಸ ಕಾನೂನುಗಳ ಜಾರಿಗೆ ಬಂದ ನಂತರ 1976ರ ಕೆಎಂಸಿ ಕಾಯ್ದೆ ಬೆಂಗಳೂರಿಗೆ ಧೀರ್ಘಕಾಲದವರೆಗೂ ಅನ್ವಯವಾಗಲ್ಲ, ಆದರೆ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ ಮತ್ತು ಮೈಸೂರು ನಗರಗಳಿಗೆ ಅನ್ವಯವಾಗಲಿದೆ.  ಹೊಸ ಕಾಯ್ದೆ ಅಂತಿಮಗೊಳಿಸುವ
ಮುನ್ನ ಮುಂದಿನ ವಾರ ನಡೆಯಲಿರುವ ಸರ್ಕಾರದ ಜೊತೆಗಿನ ಸಭೆಯಲ್ಲಿ ಅನೇಕ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ರಘು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com