ಮೊದಲ ದಿನ, ಮೈಸೂರಿನಿಂದ 1800 ಪ್ರಯಾಣಿಕರು ರೈಲಿನಲ್ಲಿ ಪ್ರಯಾಣ

ಸೋಮವಾರ ಮೈಸೂರು ರೈಲು ನಿಲ್ದಾಣದಿಂದ ಅನೇಕ ವಿಶೇಷ ರೈಲುಗಳ ಸೇವೆಯನ್ನು ಭಾರತೀಯ ರೈಲ್ವೆ ಆರಂಭಿಸಿದ್ದು, ಮೊದಲ ದಿನ  1869 ಪ್ರಯಾಣಿಕರು ಪ್ರಯಾಣಿಸಿದರು.
ರೈಲಿನ ಚಿತ್ರ
ರೈಲಿನ ಚಿತ್ರ

ಮೈಸೂರು: ಸೋಮವಾರ ಮೈಸೂರು ರೈಲು ನಿಲ್ದಾಣದಿಂದ ಅನೇಕ ವಿಶೇಷ ರೈಲುಗಳ ಸೇವೆಯನ್ನು ಭಾರತೀಯ ರೈಲ್ವೆ ಆರಂಭಿಸಿದ್ದು, ಮೊದಲ ದಿನ  1869 ಪ್ರಯಾಣಿಕರು ಪ್ರಯಾಣಿಸಿದರು.

ಒಟ್ಟಾರೇ 1,060 ಪ್ರಯಾಣಿಕರು ಚಾಮುಂಡಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ತೆರಳಿದರೆ, 460 ಮಂದಿ ಮಂಗಳೂರು- ಬೆಂಗಳೂರು ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸಿದರು. ಉಳಿದವರು ಬೆಂಗಳೂರು ಮೂಲಕ ಸೊಲ್ಲಾಪುರ- ಮೈಸೂರು ಸಂಪರ್ಕಿಸುವ ಗೊಲ್ ಗುಂಬಜ್ ಎಕ್ಸ್ ಪ್ರೆಸ್ ಮತ್ತು ಬೆಂಗಳೂರು ಮಾರ್ಗವಾಗಿ ಮೈಸೂರಿನಿಂದ ಹುಬ್ಬಳ್ಳಿಗೆ ಸಂಚರಿಸುವ ಹಂಪಿ
ಎಕ್ಸ್ ಪ್ರೆಸ್ ಹತ್ತಿದ್ದರು.

ಈ ಮಧ್ಯೆ ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾದರೆ ಸೆಪ್ಟೆಂಬರ್ 12 ರಂದು ಹೆಚ್ಚಿನ ರೈಲುಗಳ ಸೇವೆಯನ್ನು ರೈಲ್ವೆ ಇಲಾಖೆ ಆರಂಭಿಸುವ ಸಾಧ್ಯತೆಯಿದೆ.

ಸೋಮವಾರ ಮೈಸೂರಿನಿಂದ 36 ರೈಲುಗಳು ವಿವಿಧ ಕಡೆಗೆ ತೆರಳಿದವು. ರಿಸರ್ವೇಶನ್  ಮಾಡಿದ್ದ ಪ್ರಯಾಣಿಕರಿಗೆ ಮಾತ್ರ ರೈಲಿನಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿತ್ತು.ನಿಲ್ದಾಣದ ವಿವಿಧ ಕಡೆಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಯಾನಿಟೈಸರ್ ದೊರೆಯುವಂತೆ ವ್ಯವಸ್ಥೆ ಮಾಡಲಾಗಿತ್ತು.  ಆದಾಗ್ಯೂ, ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಸಂಖ್ಯೆಯಲ್ಲಿ ಹೆಚ್ಚಳ ಪ್ರಯಾಣಿಕರು ಆತಂಕಕ್ಕೆ ಕಾರಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com