ಕರ್ನಾಟಕ ಪ್ರವಾಹದಿಂದ 8ಸಾವಿರ ಕೋಟಿ ಹಾನಿ:  ಕೇಂದ್ರದಿಂದ ಕೇವಲ 600 ಕೋಟಿ ರು. ಪರಿಹಾರ?

ನವದೆಹಲಿಯಿಂದ ಆಗಮಿಸಿದ ಆರು ಸದಸ್ಯರ ಕೇಂದ್ರ ತಂಡವು ಮಂಗಳವಾರ ಪ್ರವಾಹ ಪೀಡಿತ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆಗಳಲ್ಲಿ ಪ್ರವಾಹದಿಂದ ಹಾನಿಯ ಸಮೀಕ್ಷೆ ನಡೆಸಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನವದೆಹಲಿಯಿಂದ ಆಗಮಿಸಿದ ಆರು ಸದಸ್ಯರ ಕೇಂದ್ರ ತಂಡವು ಮಂಗಳವಾರ ಪ್ರವಾಹ ಪೀಡಿತ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆಗಳಲ್ಲಿ ಪ್ರವಾಹದಿಂದ ಹಾನಿಯ ಸಮೀಕ್ಷೆ ನಡೆಸಿತು.

ರಾಜ್ಯ ಸರ್ಕಾರ 8000 ಕೋಟಿ ರು ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಕೇಂದ್ರ ತಂಡ 600 ಕೋಟಿ ಪರಿಹಾರ ಧನ ನೀಡಲು ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರು ಅಧಿಕಾರಿಗಳ ತಂಡ ವಿಭಜನೆಯಾಗಿ ಆರು ಜಿಲ್ಲೆಗಳಿಗೆ ತೆರಳಿ ಸಮೀಕ್ಷೆ ನಡೆಸಿತು.ಜೊತೆಗೆ ಮಾಡಿ ನಷ್ಟವನ್ನು ನಿರ್ಣಯಿಸಲು ಮತ್ತು ಪರಿಹಾರವನ್ನು ನಿಗದಿಪಡಿಸಿದೆ.   ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್. ಅಶೋಕ್ ರಾಜ್ಯದಲ್ಲಿ ಮಳೆಯಿಂದ ಸುಮಾರು  5,500 ಕೋಟಿ ರು ಬೆಳೆ ಮತ್ತು 2,500 ಕೋಟಿ ರು ಮೌಲ್ಯದ ಮೂಲಭೂತ ಸೌಕರ್ಯ ಹಾನಿಗೊಳಗಾಗಿದೆ. ಒಟ್ಟು ರಾಜ್ಯದಲ್ಲಿ ಸುಮಾರು 8000 ಕೋಟಿ ನಷ್ಟ ಉಂಟಾಗಿದೆ ಎಂದು ಹೇಳಿದ್ದರು, ಆದರೆ ಕೇಂದ್ರದಿಂದ ಕೇವಲ 600 ರಿಂದ 800
ಕೋಟಿ ರು ಮಾತ್ರ ಪರಿಹಾರ ಸಿಗುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಾನಿಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾನದಂಡಗಳ ಅಡಿಯಲ್ಲಿ ಕೆಲವು ಅಡೆತಡೆಗಳಿವೆ ಎಂದು ತಿಳಿಸಿದ್ದಾರೆ. ಇನ್ನು ಕೇಂದ್ರ ತಂಡವು ಬುಧವಾರ ವಾಪಸ್ ತೆರಳಲಿದ್ದು, ದೆಹಲಿಗೆ ಹೋಗುವ ಮುನ್ನ ಸುದ್ದಿಗೋಷ್ಠಿ ನಡೆಸಿ ಕೇಂದ್ರ ತಂಡವು ಮಾಹಿತಿ ನೀಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com