ರಾಜ್ಯದಲ್ಲಿ ಇಂದು ಕೊರೋನಾಗೆ 129 ಬಲಿ, ಬೆಂಗಳೂರಿನಲ್ಲಿ 3161 ಸೇರಿ 9217 ಮಂದಿಗೆ ಪಾಸಿಟಿವ್

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಗುರುವಾರ ಸಹ ಬರೋಬ್ಬರಿ 9217 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4,30,947ಕ್ಕೆ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಜೊತೆಗೆ ಒಟ್ಟು ಪ್ರಕರಣಗಳ ಸಂಖ್ಯೆ 4.30 ಲಕ್ಷ ತಲುಪಿದೆ.

ಕಳೆದ 24 ಗಂಟೆಗಳಲ್ಲಿ 9217 ಹೊಸ ಪ್ರಕರಣಗಳು ವರದಿಯಾಗಿದ್ದು, 129 ಮಂದಿ ಮೃತಪಟ್ಟಿದ್ದಾರೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,30,947ಕ್ಕೇರಿಕೆಯಾಗಿದೆ.

ಇನ್ನು ರಾಜ್ಯದಲ್ಲಿ ಇಂದು 129 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 6937ಕ್ಕೆ ಏರಿಕೆಯಾಗಿದೆ.

ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 33 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 129 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 3161 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯ ಸೋಂಕಿತರ ಸಂಖ್ಯೆ 1,60,205ಕ್ಕೆ ಏರಿಕೆಯಾಗಿದೆ.

ಇಂದು 7021 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 3,22,454ಕ್ಕೆ ಏರಿಕೆಯಾಗಿದೆ. 1,01537 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 768 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬಾಗಲಕೋಟೆಯಲ್ಲಿ 77, ಬೆಂಗಳೂರು ಗ್ರಾಮಾಂತರದಲ್ಲಿ 77, ಬೀದರ್‌ನಲ್ಲಿ 98, ಚಾಮರಾಜನಗರದಲ್ಲಿ 62, ಕೊಡಗಿನಲ್ಲಿ 61, ವಿಜಯಪುರದಲ್ಲಿ 63 ಪ್ರಕರಣಗಳು ವರದಿಯಾಗಿವೆ.

ಬಳ್ಳಾರಿಯಲ್ಲಿ 375, ಬೆಳಗಾವಿಯಲ್ಲಿ 263, ಚಿಕ್ಕಬಳ್ಳಾಪುರದಲ್ಲಿ 167, ಚಿಕ್ಕಮಗಳೂರಿನಲ್ಲಿ 111, ಚಿತ್ರದುರ್ಗದಲ್ಲಿ 142, ದಕ್ಷಿಣ ಕನ್ನಡದಲ್ಲಿ 350, ದಾವಣಗೆರೆಯಲ್ಲಿ 297, ಧಾರವಾಡದಲ್ಲಿ 264, ಗದಗದಲ್ಲಿ 180, ಹಾಸನದಲ್ಲಿ 218, ಹಾವೇರಿಯಲ್ಲಿ 190, ಕಲಬುರಗಿಯಲ್ಲಿ 243, ಕೋಲಾರದಲ್ಲಿ 104, ಕೊಪ್ಪಳದಲ್ಲಿ 139, ಮಂಡ್ಯದಲ್ಲಿ 249, ಮೈಸೂರಿನಲ್ಲಿ 635, ರಾಯಚೂರಿನಲ್ಲಿ 107, ರಾಮನಗರದಲ್ಲಿ 126, ಶಿವಮೊಗ್ಗದಲ್ಲಿ 549, ತುಮಕೂರಿನಲ್ಲಿ 365, ಉಡುಪಿಯಲ್ಲಿ 227, ಉತ್ತರಕನ್ನಡದಲ್ಲಿ 214, ಯಾದಗಿರಿಯಲ್ಲಿ 103 ಎಂದು ಪ್ರಕರಣಗಳು ವರದಿಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com