ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್, ವಾಹನ ಚಾಲಕ, ಭದ್ರತಾ ಸಿಬ್ಬಂದಿಗೂ ಕೊರೋನಾ ಸೋಂಕು

ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌವ್ಹಾಣ್ ಅವರಿಗೆ ಕೋವಿಡ್-19 ಕೊರೊನಾ ಸೋಂಕು ಧೃಡಪಟ್ಟಿದೆ. ವೈದ್ಯರ ಸಲಹೆಯಂತೆ ಬೀದರ್ ನಲ್ಲಿ ಹೋಮ್ ಕ್ವಾರಂಟೈನ್ ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಧ್ಯ ಆರೋಗ್ಯ ಸ್ಥಿರವಾಗಿದೆ.
ಪ್ರಭು ಚೌವ್ಹಾಣ್
ಪ್ರಭು ಚೌವ್ಹಾಣ್

ಬೀದರ್: ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌವ್ಹಾಣ್ ಅವರಿಗೆ ಕೋವಿಡ್-19 ಕೊರೊನಾ ಸೋಂಕು ಧೃಡಪಟ್ಟಿದೆ. ವೈದ್ಯರ ಸಲಹೆಯಂತೆ ಬೀದರ್ ನಲ್ಲಿ ಹೋಮ್ ಕ್ವಾರಂಟೈನ್ ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಧ್ಯ ಆರೋಗ್ಯ ಸ್ಥಿರವಾಗಿದೆ.

ಎರಡು ದಿನಗಳ ಹಿಂದೆಯಷ್ಟೆ ಸಚಿವರ ವಾಹನ ಚಾಲಕನಿಗೆ ಸೋಂಕು ಧೃಢಪಟ್ಟ ಹಿನ್ನೆಲೆಯಲ್ಲಿ ಸಚಿವ ಪ್ರಭು ಚವ್ಹಾಣ್ ನಿನ್ನೆ ಟೆಸ್ಟ್ ಮಾಡಿಸಿದ್ದು ವರದಿಯಲ್ಲಿ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ. 

ಬೆಂಗಳೂರಿನಲ್ಲಿ ಅವರ ಆಪ್ತ ಸಹಾಯಕ ಹಾಗೂ ಬೀದರ್ ನಲ್ಲಿ ಸಚಿವರ ಗನ್ ಮ್ಯಾನ್ ಅವರಿಗೂ ಸೋಂಕು ಧೃಡ ಪಟ್ಟಿದೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸಚಿವರು ವಿನಂತಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com