ಪಟ್ಟಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕೊರೋನಾ : ಅಧಿಕ ಪ್ರಮಾಣದಲ್ಲಿ ಪರೀಕ್ಷೆ ನಡೆಸಲು ಟಾರ್ಗೆಟ್

ರಾಜ್ಯದ ಹಲವು ಪಟ್ಟಣಗಳಲ್ಲಿ ಕೊರೋನಾ ಕೇಸ್ ಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಕಳೆದ 10 ದಿನಗಳಿಂದ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಅಧಿಕ ಪ್ರಮಾಣದಲ್ಲಿ ಕೊರೋನಾ ಪರೀಕ್ಷೆ ಮಾಡಲಾಗುತ್ತಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಹಲವು ಪಟ್ಟಣಗಳಲ್ಲಿ ಕೊರೋನಾ ಕೇಸ್ ಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಕಳೆದ 10 ದಿನಗಳಿಂದ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಅಧಿಕ ಪ್ರಮಾಣದಲ್ಲಿ ಕೊರೋನಾ ಪರೀಕ್ಷೆ ಮಾಡಲಾಗುತ್ತಿದೆ. 

ಕರ್ನಾಟಕದಲ್ಲಿ ಭಾನುವಾರ 9,540 ಹೊಸ ಕೇಸ್ ದಾಖಲಾಗಿವೆ, 6,808 ಸಾವಿನ ಪ್ರಕರಣ ಸೇರಿದಂತೆ ಇದುವರೆಗೂ ರಾಜ್ದಲ್ಲಿ 4,21,730 ಒಟ್ಟು ಪ್ರಕರಣಗಳು ದಾಖಲಾಗಿವೆ, ರಾಜ್ಯದಲ್ಲಿ 11,55,178 ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಸೇರಿದಂತೆ ಒಟ್ಟು 35.31.441 ಪರೀಕ್ಷೆ ಮಾಡಲಾಗಿದೆ.

ಕರ್ನಾಟಕ ಸ್ಟೇಟ್ ಕೋವಿಡ್ -19 ವಾರ್ ರೂಮ್ ವರದಿಯ ಪ್ರಕಾರ, ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಪರೀಕ್ಷೆ ನಡೆದಿದ್ದು, ಪ್ರತಿ ಮಿಲಿಯನ್‌ಗೆ 27,906 ಪರೀಕ್ಷೆಗಳಾಗಿವೆ, ಬಳ್ಳಾರಿಯಲ್ಲಿ ಅತಿ ಕಡಿಮೆ ಅಂದರೆ 4,555 ಟೆಸ್ಟ್ ನಡೆದಿದೆ, ಹಾವೇರಿ 5,417, ಧಾರವಾಡದಲ್ಲಿ 12,274, ಚಿಕ್ಕಬಳ್ಳಾಪುರದಲ್ಲಿ 12,213 ಮತ್ತು ಹಾಸನದಲ್ಲಿ 10,430 ಪರೀಕ್ಷೆ ನಡೆದಿವೆ.

ಬುಧವಾರ ಬಳ್ಳಾರಿಯಲ್ಲಿ 559 ಹೊಸ ಕೇಸ್ ಗಳು ದಾಖಲಾಗುವ ಮೂಲಕ ಇದುವರೆಗೂ 25029 ಪ್ರಕರಣ ಪತ್ತೆಯಾಗಿವೆ, ಪ್ರತಿದಿನ 350ರಿಂದ 400 ಕೇಸ್ ಗಳು ದಾಖಲಾಗುತ್ತಿದ್ದು,ಇದುವರೆಗೂ 2,500 ಪರೀಕ್ಷೆ ನಡೆಸಲಾಗಿದೆ, ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಟೆಸ್ಟ್ ಪ್ರಮಾಣ ಕೂಡ ಕಡಿಮೆಯಾಗಿದೆ ಎಂದು ಬಳ್ಳಾರಿ
ಆರೋಗ್ಯಾಧಿಕಾರಿ ಡಾ.ಎನ್ ಎಲ್ ಜನಾರ್ದನ್ ಹೇಳಿದ್ದಾರೆ.

ಪ್ರತಿದಿನ ಕೊರೋನಾ ಪರೀಕ್ಷಾ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅಧಿಕ ಸಂಖ್ಯೆಯಲ್ಲಿ ಕೊರೋನಾ ಟೆಸ್ಟ್ ಮಾಡಲು ಟಾರ್ಗೆಟ್ ಹೊಂದಿದ್ದೇವೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ಮಾಡಲಾಗುತ್ತಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಸಿಎನ್ ಮಂಜುನಾಥ್ ತಿಳಿಸಿದ್ದಾರೆ. ಸದ್ದ ಪರಿಸ್ಥಿತಿಯಲ್ಲಿ ಕೊರೋನಾ ಪರೀಕ್ಷೆಯೇ ಟಾರ್ಗೆಟ್ ಆಗಿದೆ, ಆದರೆ ಜನ ಪರೀಕ್ಷೆ ಮಾಡಿಸಿಕೊಳ್ಳಲು ಅಧಿಕ ಸಂಖ್ಯೆಯಲ್ಲಿ ಮುಂದೆ ಬರುತ್ತಿಲ್ಲ, ಅವರು ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದ್ದರೂ ಸಹ ಅವರು ಸ್ವಯಂಪ್ರೇರಣೆಯಿಂದ  ಪರೀಕ್ಷೆಗೆ ಬರಬೇಕು ಎಂದು ಅವರು ತಿಳಿಸಿದ್ದಾರೆ, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com