ಕಲಬುರಗಿ : ಗಾಂಜಾ ಪ್ರಕರಣದಲ್ಲಿ ಕರ್ತವ್ಯಲೋಪ, ಪಿಎಸ್ಐ  ಸೇರಿ ನಾಲ್ವರು ಪೋಲೀಸ್ ಅಧಿಕಾರಿಗಳು ಅಮಾನತು

ಕಲಬುರಗಿಯ ಕಾಳಗಿ ಬಳಿಯ ಲಕ್ಷ್ಮಣನಾಯಕ ತಾಂಡಾದ ಕುರಿ ಫಾರ್ಮ್ ಹೌಸ್​ನಲ್ಲಿ ಪತ್ತೆಯಾದ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ಕಾಳಗಿ ಠಾಣೆ ಪಿಎಸ್ಐ ಸೇರಿದಂತೆ ನಾಲ್ವರು ಪೋಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆ ನಾಲ್ವರನ್ನು ಅಮಾನತುಗೊಳಿಸಿ ಎಸ್​​​ಪಿ ಸಿಮಿ ಮರಿಯಮ್ ಜಾರ್ಜ್​ ಆದೇಶಿಸಿದ್ದಾರೆ.
ಕಲಬುರಗಿ : ಗಾಂಜಾ ಪ್ರಕರಣದಲ್ಲಿ ಕರ್ತವ್ಯಲೋಪ, ಪಿಎಸ್ಐ  ಸೇರಿ ನಾಲ್ವರು ಪೋಲೀಸ್ ಅಧಿಕಾರಿಗಳು ಅಮಾನತು

ಕಲಬುರಗಿ: ಕಲಬುರಗಿಯ ಕಾಳಗಿ ಬಳಿಯ ಲಕ್ಷ್ಮಣನಾಯಕ ತಾಂಡಾದ ಕುರಿ ಫಾರ್ಮ್ ಹೌಸ್​ನಲ್ಲಿ ಪತ್ತೆಯಾದ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ಕಾಳಗಿ ಠಾಣೆ ಪಿಎಸ್ಐ ಸೇರಿದಂತೆ ನಾಲ್ವರು ಪೋಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆ ನಾಲ್ವರನ್ನು ಅಮಾನತುಗೊಳಿಸಿ ಎಸ್​​​ಪಿ ಸಿಮಿ ಮರಿಯಮ್ ಜಾರ್ಜ್​ ಆದೇಶಿಸಿದ್ದಾರೆ.

ಅಮಾನತುಗೊಂಡವರನ್ನು ಪಿಎಸ್ಐ ಬಸವರಾಜ ಚಿತಕೋಟೆ, ಎಎಸ್ಐ ನೀಲಕಂಠಪ್ಪ ಹೆಬ್ಬಾಳ, ಮತ್ತು ಬೀಟ್ ಪೊಲೀಸ್ ಕಾನ್ಸ್​ಟೇಬಲ್​​​ಗಳಾದ ಶರಣಪ್ಪ ಹಾಗೂ ಅನಿಲ್ ಭಂಡಾರಿ ಎಂದು ಗುರುತಿಸಲಾಗಿದೆ.

ಕಾಳಗಿ ಪೋಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮಣನಾಯಕ್ ತಾಂಡಾದ ಕುರಿ ಫಾರ್ಮ್ ಹೌಸ್​ನಲ್ಲಿ 6 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆಯಾಗಿದ್ದ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com