'ಸಂಸದ್ ಉದ್ಯೋಗ ಮಿತ್ರ' ಕಾರ್ಯಯೋಜನೆಯ ಉದ್ಘಾಟನೆ

ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ ನೇತೃತ್ವದಲ್ಲಿ, ಫಿಡಿಲಿಟಸ್ ಕಾರ್ಪ್ , ಶಿಲ್ಪಾ ಫೌಂಡೇಶನ್ ಮತ್ತು ಆಕ್ಟ್ ಫೌಂಡೇಶನ್ ಸಹಯೋಗದೊಂದಿಗೆ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 'ಸಂಸದ್ ಉದ್ಯೋಗ ಮಿತ್ರ' ಎನ್ನುವ ನೂತನ ವೇದಿಕೆ ಆರಂಭಿಸಲಾಗಿದೆ.
'ಸಂಸದ್ ಉದ್ಯೋಗ ಮಿತ್ರ' ಕಾರ್ಯಯೋಜನೆಯ ಉದ್ಘಾಟನೆ
'ಸಂಸದ್ ಉದ್ಯೋಗ ಮಿತ್ರ' ಕಾರ್ಯಯೋಜನೆಯ ಉದ್ಘಾಟನೆ

ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ನೇತೃತ್ವದಲ್ಲಿ, ಫಿಡಿಲಿಟಸ್ ಕಾರ್ಪ್, ಶಿಲ್ಪಾ ಫೌಂಡೇಶನ್ ಮತ್ತು ಆಕ್ಟ್ ಫೌಂಡೇಶನ್ ಸಹಯೋಗದೊಂದಿಗೆ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 'ಸಂಸದ್ ಉದ್ಯೋಗ ಮಿತ್ರ' ಎನ್ನುವ ನೂತನ ವೇದಿಕೆ ಆರಂಭಿಸಲಾಗಿದೆ.

ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಪಡೆಯಬಹುದು. 6 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಸಂದರ್ಶನ ನಡೆಯಲಿದ್ದು, ಉದ್ಯೋಗಾಕಾಂಕ್ಷಿಗಳು https://tejasvisurya.in/sansad_udyoga_mitra/ ನಲ್ಲಿ ತಮ್ಮ ಬಯೋಡೇಟಾ, ಶೈಕ್ಷಣಿಕ ವಿವರಗಳನ್ನು ಅಪ್ ಲೋಡ್ ಮಾಡಿದಲ್ಲಿ, ವಿದ್ಯಾರ್ಹತೆಗೆ ತಕ್ಕಂತೆ ಸೂಕ್ತ ಉದ್ಯೋಗ ಪಡೆಯಲು ಅನುಕೂಲ ಕಲ್ಪಿಸಲಾಗಿದೆ.

ಸಮಾರಂಭದಲ್ಲಿ ಮಾತನಾಡಿ,ಪ್ರತಿಷ್ಠಿತ ಕಂಪನಿಗಳು, ಎನ್ ಜಿ ಓ ಗಳು, ಸರ್ಕಾರಿ (ಸ್ಕಿಲ್ ಇಂಡಿಯಾ) ಯೋಜನೆಗಳು ಮತ್ತು ಉದ್ಯೋಗಾಕಾಂಕ್ಷಿಗಳ ನಡುವೆ 'ಸಂಸದ್ ಉದ್ಯೋಗ ಮಿತ್ರ' ಸೇತುವೆಯಂತೆ ಕಾರ್ಯನಿರ್ವಹಿಸಲಿದ್ದು, ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ ರವರು ಕರೆ ನೀಡಿರುತ್ತಾರೆ.

'ಸಂಸದ್ ಉದ್ಯೋಗ ಮಿತ್ರ' ಕಾರ್ಯಯೋಜನೆಯು ಲಾಭವನ್ನು ಉದ್ಯೋಗಾಕಾಂಕ್ಷಿಗಳು ಪಡೆಯಬೇಕೆಂದು ಬೆಂಗಳೂರು ದಕ್ಷಿಣ ಸಂಸದರ ಕಚೇರಿ, ಫಿಡಿಲಿಟಸ್ ಕಾರ್ಪ್, ಶಿಲ್ಪಾ ಫೌಂಡೇಶನ್ ಮತ್ತು ಆಕ್ಟ್ ಫೌಂಡೇಶನ್ ಸಂಸ್ಥೆಯ ಪ್ರಕಟಣೆ ತಿಳಿಸಿರುತ್ತದೆ.

ಈ ಸಂದರ್ಭದಲ್ಲಿ ಫಿಡಿಲಿಟಸ್ ಕಾರ್ಪ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅಚ್ಯುತ್ ಗೌಡ, ತಿಪ್ಪೇಸ್ವಾಮಿ (ಮಾನ್ಯ ಕ್ಷೇತ್ರೀಯ ಕಾರ್ಯವಾಹರು, ಆರ್ ಎಸ್ ಎಸ್)  ಶ್ರೀ ಸಂದೀಪ್ ರವಿ (ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರು,ಬೆಂಗಳೂರು ದಕ್ಷಿಣ), ಶಾಂತಮಲ್ಲಪ್ಪ (ಎ ಸಿ ಪಿ), ಮಾಜಿ ಕಾರ್ಪೊರೇಟರ್ ಗಳಾದ ನಾಗರತ್ನ ರಾಮಮೂರ್ತಿ,ಮಾಲತಿ ಚಂದ್ರಶೇಖರ್,  ನಿಖಿಲ್ ಕಾಮತ್, ಸಹ ಸಂಸ್ಥಾಪಕರು. ( ಝೀರೋಧಾ ) ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com