ದೋಹಾ: ಅಂತರ-ಆಫ್ಘನ್‍ ಶಾಂತಿ ಮಾತುಕತೆಯಲ್ಲಿ ಭಾರತ ಭಾಗಿ: ಅಲ್ಪಸಂಖ್ಯಾತರ ಹಿತಾಸಕ್ತಿ ರಕ್ಷಿಸುವಂತೆ ಕರೆ

ಕತಾರ್ ರಾಜಧಾನಿ ದೋಹಾದಲ್ಲಿ ಶನಿವಾರ ಆರಂಭವಾಗಿರುವ ಐತಿಹಾಸಿಕ ಅಂತರ-ಆಫ್ಘನ್‍ ಶಾಂತಿ ಮಾತುಕತೆಗಳಲ್ಲಿ ಭಾರತ ಕೂಡ ಭಾಗಿಯಾಗಿದ್ದು, ಆಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡುವಂತೆ ಕರೆ ನೀಡಿದೆ.
ಎಸ್. ಜೈಶಂಕರ್
ಎಸ್. ಜೈಶಂಕರ್

ನವದೆಹಲಿ: ಕತಾರ್ ರಾಜಧಾನಿ ದೋಹಾದಲ್ಲಿ ಶನಿವಾರ ಆರಂಭವಾಗಿರುವ ಐತಿಹಾಸಿಕ ಅಂತರ-ಆಫ್ಘನ್‍ ಶಾಂತಿ ಮಾತುಕತೆಗಳಲ್ಲಿ ಭಾರತ ಕೂಡ ಭಾಗಿಯಾಗಿದ್ದು, ಆಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡುವಂತೆ ಕರೆ ನೀಡಿದೆ.

ವಿದೇಶಾಂಗ ಸಚಿವ ಡಾ ಎಸ್.ಜೈಶಂಕರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಐತಿಹಾಸಿಕ ಸಭೆಯಲ್ಲಿ ಪಾಲ್ಗೊಂಡು,‘ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ದುರ್ಬಲರ ಹಿತಾಸಕ್ತಿಯನ್ನು ಖಚಿತಪಡಿಸಿಕೊಳ್ಳಬೇಕು. ಶಾಂತಿ ಪ್ರಕ್ರಿಯೆಗಳು ಮತ್ತು ಇತರ ಕ್ರಮಗಳು ಆಫ್ಘನ್‍ ನೇತೃತ್ವದ, ಆಫ್ಘನ್‍ ನಿಯಂತ್ರಿತ ಮತ್ತು ಆಫ್ಘನ್‍ ಮಾಲೀಕತ್ವದ್ದಾಗಿರಬೇಕು ಎಂದರು. 

ಶಾಂತಿ ಪ್ರಕ್ರಿಯೆಯು ಆಫ್ಘಾನಿಸ್ತಾನದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವಂತಿರಬೇಕು.ಅಲ್ಲದೆ, ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ಉತ್ತೇಜಿಸಬೇಕು ಎಂದು ಹೇಳಿದ್ದಾರೆ. 

ಶಾಂತಿ ಮಾತುಕತೆಗಳು ಆಫ್ಘಾನಿಸ್ತಾನದಾದ್ಯಂತ ನಡೆಯುತ್ತಿರುವ ಹಿಂಸಾಚಾರವನ್ನು ಪರಿಣಾಮಕಾರಿಯಾಗಿ ಪರಿಹರಿಸಬೇಕು ಎಂದು ಡಾ ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com