ಸ್ಟಾರ್ಟಪ್ ಸ್ನೇಹಿ ಪರಿಸರ ನಿರ್ಮಾಣ: ಕರ್ನಾಟಕಕ್ಕೆ ಅಗ್ರ ಸ್ಥಾನ

ಸ್ಟಾರ್ಟಪ್ (ನವ ಉದ್ಯಮ) ಸ್ನೇಹಿ ಪರಿಸರ ನಿರ್ಮಾಣ ವಿಚಾರದಲ್ಲಿ ಕರ್ನಾಟಕ ಅಗ್ರಸ್ಥಾನಕ್ಕೇರಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಸ್ಟಾರ್ಟಪ್ ಶ್ರೇಯಾಂಕ-2019ದಿಂದ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸ್ಟಾರ್ಟಪ್ (ನವ ಉದ್ಯಮ) ಸ್ನೇಹಿ ಪರಿಸರ ನಿರ್ಮಾಣ ವಿಚಾರದಲ್ಲಿ ಕರ್ನಾಟಕ ಅಗ್ರಸ್ಥಾನಕ್ಕೇರಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಸ್ಟಾರ್ಟಪ್ ಶ್ರೇಯಾಂಕ-2019ದಿಂದ ತಿಳಿದುಬಂದಿದೆ.

ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಇಲಾಖೆ (ಡಿಪಿಐಐಟಿ) ಶುಕ್ರವಾರ ಬಿಡುಗಡೆ ಮಾಡಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ಟಾರ್ಟ್ಅಪ್ ಶ್ರೇಯಾಂಕ -2019 ರ ಪ್ರಕಾರ, ಸ್ಟಾರ್ಟ್ ಅಪ್ ಗಳಿಗೆ ಉದ್ಯಮ ಸ್ನೇಹಿ ವ್ಯವಸ್ಥೆಯನ್ನು ಒದಗಿಸುವಲ್ಲಿ ವಿಚಾರದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳು  ಜಂಟಿ ಅಗ್ರಸ್ಥಾನ ಅಲಂಕರಿಸಿವೆ.  

ಇನ್ನು ಶ್ರೇಯಾಂಕದ ಎರಡನೇ ಆವೃತ್ತಿಯಲ್ಲಿ ಗುಜರಾತ್ (ರಾಜ್ಯಗಳ ನಡುವೆ) ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ (ಕೇಂದ್ರಾಡಳಿತ ಪ್ರದೇಶ) ಗಳನ್ನು ಶೇ.100ರಷ್ಚು ಅಂಕಗಳಿಸಿರುವ ಅತ್ಯುತ್ತಮ ಪ್ರದರ್ಶಕ ರಾಜ್ಯಗಳ ಪಟ್ಟಿಗೆ ಸೇರಿಸಲಾಗಿದೆ.  ಸಾಂಸ್ಥಿಕ ಬೆಂಬಲ, ಸರಾಗಗೊಳಿಸುವಿಕೆ, ಸಾರ್ವಜನಿಕ  ಖರೀದಿ ಮಾನದಂಡಗಳಲ್ಲಿ ರಿಯಾಯಿತಿ, ರಕ್ಷಣೆ ನೀಡುವಿಕೆ, ಧನಸಹಾಯ ಮತ್ತು ಸಾಹಸೋದ್ಯಮ ಧನಸಹಾಯ, ಜಾಗೃತಿ ಮತ್ತು ಔಟ್ ರೀಚ್ ಸೇರಿದಂತೆ ಏಳು ನಿಯತಾಂಕಗಳಲ್ಲಿ ರಾಜ್ಯವಾರು ಪ್ರದರ್ಶನಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಒಟ್ಟು 22 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳು  ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದವು. ಇತರೆ ರಾಜ್ಯಗಳನ್ನು ನಾಯಕರು (ಲೀಡರ್ ಸ್ಟೇಟ್ಸ್), ಮಹತ್ವಾಕಾಂಕ್ಷಿ ನಾಯಕರು (aspiring leaders States) ಮತ್ತು ಉದಯೋನ್ಮುಖ ಸ್ಟಾರ್ಟಪ್ ವ್ಯವಸ್ಥೆಗಳು ಎಂದು ವರ್ಗೀಕರಿಸಲಾಗಿದೆ. 

ಸ್ಟಾರ್ಟಪ್ ವಿಭಾಗದಲ್ಲಿ ಗುರುತಿಸಿಕೊಂಡ ಈಶಾನ್ಯ ಭಾರತದ ರಾಜ್ಯಗಳು
ಸ್ಟಾರ್ಟ್ ವಿಭಾಗದಲ್ಲಿ ಬಿಹಾರ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಚಂಡೀಗಢ ರಾಜ್ಯಗಳು ನಾಯಕರು (ಲೀಡರ್ ಸ್ಟೇಟ್ಸ್) ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಹರಿಯಾಣ, ಜಾರ್ಖಂಡ್, ಪಂಜಾಬ್, ತೆಲಂಗಾಣ, ಉತ್ತರಾಖಂಡವನ್ನು ಮಹತ್ವಾಕಾಂಕ್ಷಿ ನಾಯಕರು (aspiring leaders States) ಪಟ್ಟಿಯಲ್ಲಿ  ಸ್ಥಾನ ಪಡೆದಿವೆ. ಇನ್ನು ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್ ಘಡ, ದೆಹಲಿ, ಹಿಮಾಚಲ ಪ್ರದೇಶ, ಉತ್ತರಪ್ರದೇಶ ರಾಜ್ಯಗಳನ್ನು ಲೀಡರ್ ಸ್ಟೇಟ್ಸ್ ಪಟ್ಟಿಗೆ ಸೇರಿಸಲಾಗಿದೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ಚಂಡೀಗಢವನ್ನು ಲೀಡರ್, ನಾಗಾಲ್ಯಾಂಡ್ ಅನ್ನು aspiring leader ಮತ್ತು ಉದಯೋನ್ಮುಖ  ಸ್ಟಾರ್ಟಪ್ ಪರಿಸರ ವ್ಯವಸ್ಥೆಯ ವಿಭಾಗದಲ್ಲಿ ಮಿಜೋರಾಂ ಮತ್ತು ಸಿಕ್ಕಿಂ ಇದೆ. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ನಿಯಮಗಳ ಸರಳೀಕರಣದ ಪರಿಣಾಮ ದೇಶದಲ್ಲಿ ಸ್ಟಾರ್ಟ್ಅಪ್‌ಗಳು ಡಿಪಿಐಐಟಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೋಂದಾಯಿಸಿಕೊಳ್ಳುತ್ತಿವೆ, ಇದು ಕೋವಿಡ್ ಸಾಂಕ್ರಾಮಿಕ ಹೊರತಾಗಿಯೂ  ದೇಶಾದ್ಯಂತ 8,550 ಕಂಪೆನಿಗಳು ಹೆಚ್ಚುವರಿಯಾಗಿ ನೋಂದಣಿಯಾಗಿವೆ.

ಪ್ರಸ್ತುತ, ಪ್ರತಿ ರಾಜ್ಯಗಳೂ ಸರ್ಕಾರದಲ್ಲಿ ನೋಂದಾಯಿತ ಸ್ಟಾರ್ಟಪ್ ಗಳನ್ನು ಹೊಂದಿದ್ದು, ದೇಶದ 580 ಜಿಲ್ಲೆಗಳಲ್ಲಿ ತಲೆ ಎತ್ತಿದ ಇಂತಹ ಹೊಸ ಸಂಸ್ಥೆಗಳ ಸಂಖ್ಯೆ 36,550ರಷ್ಟಿದೆ. ಭಾರತದ ಸ್ಟಾರ್ಟಪ್ ಸ್ನೇಹಿ ವ್ಯವಸ್ಥೆಯನ್ನು ವಿಶ್ವದಲ್ಲೇ ಮೂರನೇ ಉತ್ತಮ ಸ್ನೇಹಿ ವ್ಯವಸ್ಥೆ ಎಂದು ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com