ಮೈಸೂರು: ಡೆಡ್ಲಿ ವೈರಸ್ ನಿಂದ ರಕ್ಷಿಸಲು ದಸರಾ ಆನೆಗಳಿಗೂ ಕೊರೋನಾ ಪರೀಕ್ಷೆ?

ಮನುಷ್ಯರಿಂದ ಆನೆಗಳಿಗೆ ಸೋಂಕು ತಗುಲುತ್ತದೆಯೇ ಎಂಬ ಪ್ರಶ್ನೆಗೆ ಅರಣ್ಯಾಧಿಕಾರಿಗಳಲ್ಲಿ ಉತ್ತರವಿಲ್ಲ, ಹೀಗಾಗಿ ಆನೆಗಳಿಗೂ ಕೊರೋನಾ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಮನುಷ್ಯರಿಂದ ಆನೆಗಳಿಗೆ ಸೋಂಕು ತಗುಲುತ್ತದೆಯೇ ಎಂಬ ಪ್ರಶ್ನೆಗೆ ಅರಣ್ಯಾಧಿಕಾರಿಗಳಲ್ಲಿ ಉತ್ತರವಿಲ್ಲ, ಹೀಗಾಗಿ ಆನೆಗಳಿಗೂ ಕೊರೋನಾ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಈ ವರ್ಷ ನಡೆಯುವ ಸರಳ ದಸರಾ ಆಚರಣೆಯಲ್ಲಿ ಡೆಡ್ಲಿ ವೈರಸ್ ನಿಂದ ಆನೆಗಳನ್ನು ರಕ್ಷಿಸಲು ಮುಂಜಾಗ್ರತಾ ಕ್ರ ಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಮೈಸೂರು ಅರಮನೆಯಲ್ಲಿರುವ ದಸರಾ ಆನೆಗಳನ್ನು ನೋಡಲು ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ, ಜೊತೆಗೆ ಆನೆಗಳಿರುವ ಸ್ಥಳಕ್ಕೆ ಪದೇ ಪದೇ ಹೋಗದಂತೆ ಮಾವುತರಿಗೂ ಸೂಚನೆ ನೀಡಲಾಗಿದೆ.

ದಸರಾ ಆಚರಣೆ ಮುಗಿದ ನಂತರ ಅವುಗಳಿಗೆ ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಆನೆಗಳು ಶಿಬಿರಕ್ಕೆ ತೆರಳುವ ಮುನ್ನ ಕೊರೋನಾ ಪರೀಕ್ಷೆ   ನಡೆಸಲಾಗುವುದು ಎಂದು ಅರಣ್ಯ ಉಪ ಸಂರಕ್ಷಕ ಅಲೆಕ್ಸಾಂಡರ್ ತಿಳಿಸಿದ್ದಾರೆ. ಇನ್ನೂ ಆನೆಗಳ ಜೊತೆ ಬಂದಿರುವ ಮಾವುತರು ಮತ್ತು ಕಾವಾಡಿಗರಿಗೂ ಆರೋಗ್ಯ ತಪಾಸಣೆ ಮಾಡಿಸಲು ನಿರ್ಧರಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com