ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ನಗರ ಪ್ರದಕ್ಷಿಣೆ: ಮೊದಲ ದಿನವೇ ಅಧಿಕಾರಿಗಳಿಗೆ ತರಾಟೆ

ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರು ನಗರದ ವಿವಿಧೆಡೆ ಸಂಚರಿಸಿ ಕಾಮಗಾರಿ ಪರಿಶೀಲಿಸುವ ಮೂಲಕ ಮೊದಲ ದಿನವೇ ಫೀಲ್ಡ್ ಗಿಳಿದಿದ್ದಾರೆ
ಗೌರವ್ ಗುಪ್ತಾ
ಗೌರವ್ ಗುಪ್ತಾ

ಬೆಂಗಳೂರು: ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರು ನಗರದ ವಿವಿಧೆಡೆ ಸಂಚರಿಸಿ ಕಾಮಗಾರಿ ಪರಿಶೀಲಿಸುವ ಮೂಲಕ ಮೊದಲ ದಿನವೇ ಫೀಲ್ಡ್ ಗಿಳಿದಿದ್ದಾರೆ

ಇತ್ತೀಚೆಗೆ ಸುರಿ ಭಾರೀ ಮಳೆಯಿಂದಾಗಿ ರಾಚೇನಹಳ್ಳಿ, ಮಾನ್ಯತಾ ಟೆಕ್‍ಪಾರ್ಕ್ ಸಮೀಪ ಸಂಭವಿಸಿದ ಅನಾಹುತದಿಂದಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜಕಾಲುವೆ ಹೂಳೆತ್ತುವ ಕಾರ್ಯ, ಒಳಚರಂಡಿ ಪರಿಸ್ಥಿತಿಯನ್ನು ಪರಾಮರ್ಶಿಸಿದರು.

ಗೆದ್ದಲಹಳ್ಳಿ ಸಮೀಪ ರಸ್ತೆಗಳು ಸರಿಯಿಲ್ಲದಿರುವ ಬಗ್ಗೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಗುಂಡಿಬಿದ್ದ ರಸ್ತೆಗಳು, ಹಾಳಾದ ರಸ್ತೆಗಳನ್ನು ಕಂಡು ಅಧಿಕಾರಿಗಳ ವಿರುದ್ಧ ಹರಿಹಾಯ್ದ ಗೌರವ್‍ಗುಪ್ತ ಅವರು ಇಷ್ಟು ವರ್ಷದಿಂದ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದೀರಾ ಒಂದು ರಸ್ತೆ ಸರಿಯಾಗಿ ನಿರ್ಮಾಣ ಮಾಡೋದಕ್ಕೆ ಆಗೋದಿಲ್ವಾ ಎಂದು ತರಾಟೆಗೆ ತೆಗೆದುಕೊಂಡರು.

ರಾಜಕಾಲುವೆ ಕಾಮಗಾರಿ ನಡೆಯುತ್ತಿದೆ. ಒತ್ತುವರಿ ತೆರವುಗೊಳಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ನೀರು ಸರಾಗವಾಗಿ ಹರಿದು ಹೋಗುವಂತೆ ಡ್ರೈನ್ ವ್ಯವಸ್ಥೆ ಬಗ್ಗೆ ವಿಶೇಷ ಗಮನ ಹರಿಸಲಾಗುವುದು ಎಂದರು. 

ನಂತರ ಮಾತನಾಡಿದ ಅವರು, ಇಂದು ನಗರದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಸ್ಥಳೀಯರ ಅಹವಾಲು ಕೇಳಿದ್ದೇವೆ. ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇನ್ನು ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಸಂಸದ ಪಿಸಿ ಮೋಹನ್ ಗೌರವ್ ಗುಪ್ತ ಅವರಿಗೆ ಪತ್ರ ಬರೆದಿದ್ದು ರಸ್ತೆ ದುರಸ್ತಿ ಬಗ್ಗೆ ವಿವರಿಸಿದ್ದಾರೆ, ಮಳೆಯಿಂದಾಗಿ ಚಿಕ್ಕಪೇಟೆ ರಸ್ತೆಗಳು ತೀರಾ ಹಾನಿಗೊಳಗಾಗಿವೆ, ಜೊತೆಗೆ ಬಿಡಬ್ಲ್ಯೂ ಎಸ್ ಎಸ್ ಬಿ ಯವರು ಕೂಡ ರಸ್ತೆ ಅಗೆದಿದ್ದು ಅಲ್ಲಿನ ಜನರು ತುಂಬಾ ತೊಂದರೆ ಅನುಭವಿಸುವಂತಾಗಿದೆ ಹೀಗಾಗಿ, ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com