ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಗಂಟಲಿನ ಸೋಂಕು ನಿವಾರಣೆಗೆ ರಾಮಬಾಣ ಈ 'ಕಾಚು'!

ಕಾಚುವನ್ನು ಕಗ್ಗಲಿ ಮರದಿಂದ ತಯಾರಿಸಲ್ಪಡಲಾಗುತ್ತದೆ. ಕಗ್ಗಲಿ ಉಷ್ಣವಾಸಿ ವೃಕ್ಷ ಇದಾಗಿದ್ದು, ಈ ಮರ ಮುಳ್ಳುಗಳಿಂದ ಕೂಡಿದೆ. ಸುಮಾರು 15 ಅಡಿ ಎತ್ತರ ಬೆಳೆಯುವ ಈ ರದ ತೊಗದೆ ಕಂದು ಬಣ್ಣ ಇರಲಿದೆ. ಎಲೆಗಳು ಅತ್ಯಂತ ಸಣ್ಣದಾಗಿ ಗರಿಗಳ ರೀತಿ ಇರಲಿದ್ದು, ಹೂವುಗಳು ಹಳದಿ ಬಣ್ಣದಲ್ಲಿರುತ್ತದೆ. ಕಾಯಿಗಳು ಸುಮಾರು 10 ಬೀಜಗಳನ್ನು ಹೊಂದಿರುತ್ತದೆ...
ಕಾಚುವನ್ನು ತಯಾರು ಮಾಡುತ್ತಿರುವ ಮಹಿಳೆ
ಕಾಚುವನ್ನು ತಯಾರು ಮಾಡುತ್ತಿರುವ ಮಹಿಳೆ

ಕಾಚುವನ್ನು ಕಗ್ಗಲಿ ಮರದಿಂದ ತಯಾರಿಸಲ್ಪಡಲಾಗುತ್ತದೆ. ಕಗ್ಗಲಿ ಉಷ್ಣವಾಸಿ ವೃಕ್ಷ ಇದಾಗಿದ್ದು, ಈ ಮರ ಮುಳ್ಳುಗಳಿಂದ ಕೂಡಿದೆ. ಸುಮಾರು 15 ಅಡಿ ಎತ್ತರ ಬೆಳೆಯುವ ಈ ರದ ತೊಗದೆ ಕಂದು ಬಣ್ಣ ಇರಲಿದೆ. ಎಲೆಗಳು ಅತ್ಯಂತ ಸಣ್ಣದಾಗಿ ಗರಿಗಳ ರೀತಿ ಇರಲಿದ್ದು, ಹೂವುಗಳು ಹಳದಿ ಬಣ್ಣದಲ್ಲಿರುತ್ತದೆ. ಕಾಯಿಗಳು ಸುಮಾರು 10 ಬೀಜಗಳನ್ನು ಹೊಂದಿರುತ್ತದೆ. ಈ ಮರದ ಚಕ್ಕೆಯನ್ನು ಬಟ್ಟಿ ಇಳಿಸಿ, ಒಣಗಿಸಿ ತಯಾರು ಮಾಡಿದ್ದನ್ನು ಕಾಚು ಎಂದು ಕರೆಯಲಾಗುತ್ತದೆ. 

ಈ ಕಾಚು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಸಾಕಷ್ಟು ಆಯುರ್ವೇದ ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದೀಗ ಚಳಿಗಾಲ ಆರಂಭವಾಗಿದ್ದು, ಕೊರೋನಾ ವೈರಸ್ ನಂತಹ ಸಾಂಕ್ರಾಮಿಕ ಸಂದರ್ಭದಲ್ಲಿ ಕಾಚುವಿಗೆ ಬೇಡಿಕೆಗಳು ಹೆಚ್ಚಾಗತೊಡಗಿದೆ. 

ಕಗ್ಗಲಿ ಮರದ ಕಾಂಡದ ಮಧ್ಯಭಾಗದಲ್ಲಿನ ತಿರುಳನ್ನು ಕದಿರ ಎಂದು ಕರೆಯಲಾಗುತ್ತದೆ. ಇದರ ಕಷಾಯವನ್ನು ಸೇವನೆ ಮಾಡುವುದರಿಂದ ಚರ್ಮದ ವ್ಯಾದಿ ವಾಸಿಯಾಗುತ್ತದೆ. ಕಷಾಯವನ್ನು ಮುಕ್ಕಳಿಸುವುದರಿಂದ ಬಾಯಿಹುಣ್ಣು ಕೂಡ ಗುಣವಾಗುತ್ತದೆ. ಅಲ್ಲದೆ, ಶೀತ ಹಾಗೂ ಕೆಮ್ಮು, ಅಸ್ತಮಾ, ಉಸಿರಾಟ ಸಮಸ್ಯೆ, ಅತೀವ್ರ ಜ್ವರ, ಗಂಟಲಿನ ಊತ, ಗಂಟಲಿನಲ್ಲಿ ಉಂಟಾಗುವ ಅನೇಕ ಸಮಸ್ಯೆಗಳು ಗುಣವಾಗುತ್ತದೆ. ಗರ್ಭಿಣಿಯರಲ್ಲಿ ಕೆಮ್ಮು ಹಾಗೂ ಶೀತದಂತಹ ಸಮಸ್ಯೆಯುಂಟಾದರೆ ಕಾಚುವನ್ನು ತೆಗೆದುಕೊಳ್ಳುವಂತೆ ತಿಳಿಸಲಾಗುತ್ತದೆ. ಇನ್ನು ಮಕ್ಕಳಲ್ಲಿ ಉಸಿರಾಟ ಸಮಸ್ಯೆ ಉಂಟಾದರೆ, ಬಿಸಿ ಹಾಲಿನೊಂದಗೆ ಕಾಚುವನ್ನು ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾದೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯರಿಗೆ ಮರದ ಎಲೆಗಳನ್ನು ಸೇವನೆ ಮಾಡುವಂತೆ ತಿಳಿಸಲಾಗುತ್ತದೆ. 

ಇಂತಹ ಅನೇಕ ಔಷಧೀಯ ಗುಣಗಳುಳ್ಳ ಕಾಚುವನ್ನು ತಯಾರಿಸಿ ಮಾರಾಟ ಮಾಡುವ ಸಂಪ್ರದಾಯ ಗದಗದಲ್ಲಿರುವ ಹವನೂರ್ ಎಂಬ ಕುಟುಂಬವೊಂದು ಈಗಲೂ ಮುಂದುವರೆಸಿಕೊಂಡು ಬರುತ್ತಿದೆ. ಕೊರೋನಾದಂತಹ ಈ ಸಂದರ್ಭದಲ್ಲಿ ಕಾಚುವಿಗೆ ಬೇಡಿಕೆಗಳು ರಾಜ್ಯದಲ್ಲಿ ಅಷ್ಟೇ ಅಲ್ಲದೆ, ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲೂ ಬೇಡಿಕೆಗಳು ಹೆಚ್ಚಾಗಿವೆ. 

ಕಾಚುವನ್ನು ಹವನೂರ್ ಕುಟುಂಬ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. 100ಗ್ರಾಂ ಕಾಚು ಇರುವ ಬಾಕ್ಸ್'ನ್ನು ರೂ.6ಕ್ಕೆ ಮಾರಾಟ ಮಾಡುತ್ತಿದ್ದಾರೆ. ಕಾಚುವನ್ನು ತಾಂಬೂಲಗಳಲ್ಲಿ ಬಳಕೆ ಮಾಡಲಾಗುತ್ತದೆ. ಒಂದು ಬಾರಿ ಕಾಚುವನ್ನು ಖರೀದಿ ಮಾಡಿದರೆ ಸುಮಾರು 3 ತಿಂಗಳಕಾಲ ಬಳಕೆ ಮಾಡಬಹುದಾಗಿದೆ. 

ಹವನೂರ್ ಕುಟುಂಬದ ಕಬೀರ್ದಾಸ್ (68) ಎಂಬುವವರು ತಮ್ಮ ಪುತ್ರ ಹಾಗೂ ಸೊಸೆಗೆ ಕಾಚು ತಯಾರು ಮಾಡಿ ಸಂಪ್ರದಾಯ ಮುಂದುವರೆಸಿಕೊಂಡು ಹೋಗುವಂತೆ ಮಾಡಿದ್ದಾರೆ. 

ಪ್ರತೀ ವರ್ಷ ಮಳೆಗಾಲದಲ್ಲಿ ಕಾಚುವಿಗಾಗಿ ಬೇಡಿಕೆಗಳು ಹೆಚ್ಚಾಗುತ್ತವೆ. ಗುಣಮಟ್ಟ ಹಾಗೂ ಬೆಲೆ ಆಕರ್ಷಕವಾಗಿರುವುದರಿಂದ ಜನರು ಹೆಚ್ಚು ಹೆಚ್ಚಾಗಿ ಖರೀದಿ ಮಾಡಲು ಮುಂದೆ ಬರುತ್ತಾರೆ. ಬೇರೆ ಬೇರೆ ರಾಜ್ಯಗಳಿಂದರೂ ಜನರು ಖರೀದಿಗೆ ಬರುತ್ತಿದ್ದಾರೆ. ಆದರೆ, ಇತ್ತೀಚೆಗೆ ಲಾಕ್ಡೌನ್ ಮಾಡಿದ್ದ ಪರಿಣಾಮ ನಷ್ಟ ಎದುರಾಗಿತ್ತು. ಆದರೀಗ ನಿಧಾನಗತಿಯಲ್ಲಿ ವ್ಯಾಪಾರಗಳು ಸುಗಮವಾಗಿ ಸಾಗುತ್ತಿವೆ. ಗಂಟಲಿನಲ್ಲಿ ಸೋಂಕು ಉಂಟಾದರೆ, ಗುಣಪಡಿಸಲು ಕಾಚು ಅತ್ಯುತ್ತಮ ಔಷಧಿ. ಕೊರೋನಾ ಭೀತಿಯಿಂದಾಗಿ ಇದೀಗ ಕಾಚುವಿಗಾಗಿ ಬೇಡಿಕೆ ಹೆಚ್ಚಾಗಿದೆ ಎಂದು ಕಬೀರ್ದಾಸ್ ಅವರು ಹೇಳಿದ್ದಾರೆ. 

ಮನೆಯಿಂದಲೇ ನಾವು ಕಾಚುವನ್ನು ಮಾರಾಟ ಮಾಡುತ್ತಿದ್ದೇವೆ. ಬೆಂಗಳೂರು, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲೂ ಕಾಚುವನ್ನು ಮಾರಾಟ ಮಾಡುತ್ತಾರೆ. ಆದರೆ, ಗುಣಮಟ್ಟ ಹಾಗೂ ಆಕರ್ಷಕ ಬೆಲೆಯಿರುವುದರಿಂದ ಜನರು ನಮ್ಮ ಬಳಿಯೇ ಹೆಚ್ಚಾಗಿ ಬರುತ್ತಾರೆ. ಬೇಡಿಕೆ ಹೆಚ್ಚಾಗಿದೆ ನಾವು ಗುಣಮಟ್ಟದಲ್ಲಿ ಎಂದಿಗೂ ರಾಜಿಯಾಗಿಲ್ಲ. ಯಂತ್ರಗಳಲ್ಲಿ ನಾವು ಕಾಚುವನ್ನು ಸಿದ್ಧಪಡಿಸುವುದಿಲ್ಲ. ಕೈಗಳಿಂದಲೇ ಮಾಡುತ್ತೇವೆ. ಬಿಸಿಲಿನಲ್ಲಿ ಒಣಗಿಸಿ ನಂತರ ಪ್ಯಾಕ್ ಮಾಡುತ್ತೇವೆಂದು ಹವನೂರ್ ಕುಟುಂಬದ ಸದಸ್ಯೆ ಪಾರ್ವತಿಯವರು ಹೇಳಿದ್ದಾರೆ. 

ಹಿರಿಯರ ಸಂಪ್ರದಾಯವನ್ನು ನಾವು ಮುಂದುವರೆಸುತ್ತಿದ್ದೇವೆ. ಆದರೆ, ನಮ್ಮ ಮುಂದಿನ ಪೀಳಿಗೆ ಅದನ್ನು ಅನುಸರಿಸಿಕೊಂಡು ಹೋಗುತ್ತಾರೆಯೇ ಎಂಬ ಭಯ ನಮಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com