ಕ್ಯಾನ್ಸರ್ ನಿಂದ ಗುಣಮುಖಳಾದ 13 ವರ್ಷದ ಬಾಲಕಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೃತಕ ಕಣ್ಣು, ಮುಖದ ಭಾಗ ಜೋಡಣೆ

ಗರಿಮಾ ಕಾಳಿತಾ ಎಂಬ ಬಾಲಕಿಗೆ 1 ವರ್ಷ 9 ತಿಂಗಳು ಪುಟ್ಟ ಮಗುವಿದ್ದಾಗಲೇ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್(fibromyxoid sarcoma) ಕಂಡುಬಂದಿತ್ತು. ನಗರದ ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಶಾ ಕ್ಯಾನ್ಸರ್ ವಿಭಾಗದಲ್ಲಿ ತಪಾಸಣೆ ಮಾಡಿಸಿದ್ದಾಗ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. 
ಗರಿಮಾ ಕಾಳಿತಾ
ಗರಿಮಾ ಕಾಳಿತಾ

ಬೆಂಗಳೂರು: ಗರಿಮಾ ಕಾಳಿತಾ ಎಂಬ ಬಾಲಕಿಗೆ 1 ವರ್ಷ 9 ತಿಂಗಳು ಪುಟ್ಟ ಮಗುವಿದ್ದಾಗಲೇ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್(fibromyxoid sarcoma) ಕಂಡುಬಂದಿತ್ತು. ನಗರದ ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಶಾ ಕ್ಯಾನ್ಸರ್ ವಿಭಾಗದಲ್ಲಿ ತಪಾಸಣೆ ಮಾಡಿಸಿದ್ದಾಗ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. 

ಆಗಿನಿಂದ ಈ 13 ವರ್ಷದ ಅಸ್ಸಾಂ ಮೂಲದ ಬಾಲಕಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ, ದಿನದಿಂದ ದಿನಕ್ಕೆ ಬೆಳೆಯುತ್ತಿದ್ದ ಗಡ್ಡೆಯಿಂದ ಮೂಗು ಮತ್ತು ಮೂಗಿನ ಕುಹರವನ್ನು ನಿರ್ಬಂಧಿಸಿ ಬಾಯಿಯಿಂದ ಉಸಿರಾಡುವ ಪರಿಸ್ಥಿತಿ ಆಕೆಯದಾಗಿತ್ತು. ಮೂಗಿನಿಂದ ನಿರಂತರ ರಕ್ತಸ್ರಾವವಾಗುತ್ತಿತ್ತು, ಇದು ಇಡೀ ದೇಹದ ಬೆಳವಣಿಗೆ ಮೇಲೆ ಪರಿಣಾಮವನ್ನುಂಟುಮಾಡಿತ್ತು.

ಗಡ್ಡೆಯನ್ನು ಸರ್ಜರಿ ಮಾಡಿ 2013,2014 ಮತತು 2015ರಲ್ಲಿ ತೆಗೆಯಲಾಗಿತ್ತು. ಆದರೆ 2017ರಲ್ಲಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತು. ಇದು ಅವಳ ಬಲ ಕಣ್ಣು, ತಲೆಬುರುಡೆಯ ತಳಹದಿಯ ಮೇಲೆ ಪರಿಣಾಮ ಬೀರಿತು ಮತ್ತು ಮೆದುಳಿನ ಹೊರಗಿನ ಹೊದಿಕೆಯಾದ ಡುರಾಕ್ಕೆ ವಿಸ್ತರಿಸಿತು. ಆಕೆ 7 ವರ್ಷವಿದ್ದಾಗ ಕಣ್ಣನ್ನು ತೆಗೆಯಬೇಕಾಗಿ ಬಂತು ಎಂದು ನಾರಾಯಣ ಆಸ್ಪತ್ರೆಯ ಹೆಡ್ ಮತ್ತು ನೆಕ್ ಸರ್ಜಿಕಲ್ ಆಂಕೊಲಾಜಿ ಮತ್ತು ಸಲಹೆಗಾರ್ತಿ ಡಾ ವಿಜಯಾ ಪಿಳ್ಳೈ ಹೇಳುತ್ತಾರೆ. 

ಇತ್ತೀಚೆಗೆ ಆಸ್ಪತ್ರೆಯಲ್ಲಿ ಬಾಲಕಿ ಮೇಲೆ ತಪಾಸಣೆ ಮಾಡಿದಾಗ ಆಕೆಯ ಶ್ವಾಸಕೋಶದಲ್ಲಿ ಸಣ್ಣ ಗಂಟು(ಕ್ಯಾನ್ಸರ್ ಗಡ್ಡೆ) ಪತ್ತೆಯಾಯಿತು, ನಂತರ ಅದನ್ನು ಥೊರಾಕೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಯಿತು. 

ಶಾಲೆಯಲ್ಲಿ ಬಾಲಕಿಗೆ ಬಹಳ ಕಷ್ಟವಾಗುತ್ತಿತ್ತಂತೆ. ಬೇರೆ ಮಕ್ಕಳನ್ನು ಈಕೆಯನ್ನು ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ. ಆಕೆಯನ್ನು ಆಟವಾಡಲು ಸೇರಿಸಿಕೊಳ್ಳುತ್ತಿರಲಿಲ್ಲ. ಒಂದು ಕಣ್ಣು ಇದ್ದುದರಿಂದ ಹೀಯಾಳಿಸುತ್ತಿದ್ದರು. ಪೋಷಕರು ಕೃತಕ ಕಣ್ಣು ಕೊಡಿಸಿ ಎಂದು ವೈದ್ಯರನ್ನು ಮನವಿ ಮಾಡಿಕೊಂಡರು ಎಂದು ಪಿಳ್ಳೈ ಹೇಳುತ್ತಾರೆ.

ಆಗ ಮಜುಂದಾರ್ ಶಾ ನಾರಾಯಣ ಆಸ್ಪತ್ರೆಯ ಡಾ ಪಿ ಸಿ ಜಾಕೋಬ್, ಗರಿಮಾಗೆ ಬಲ ಕಣ್ಣು, ಹಣೆಯ ಭಾಗ ಮತ್ತು ಮೂಗಿನ ಭಾಗ ಅಗತ್ಯವಿರುವ ಪ್ರಾಸ್ಥೆಸಿಸ್ ಚಿಕಿತ್ಸೆ ನೀಡಲು ಮುಂದಾದರು. ಅವಳ ಕಣ್ಣಿಗೆ ಸರಿಹೊಂದುವಂತೆ ಕಸ್ಟಮೈಸ್ ಮಾಡಿದ ಕಣ್ಣಿನ ಚಿಪ್ಪನ್ನು ರಚಿಸಲಾಯಿತು, ಹುಬ್ಬುಗಳು ಮತ್ತು ರೆಪ್ಪೆಗೂದಲುಗಳನ್ನು ತಯಾರಿಸಲು ನೈಸರ್ಗಿಕ ಕೂದಲನ್ನು ಸೇರಿಸಿ ಚಿಕಿತ್ಸೆ ನೀಡಿದೆವು. 
ರಾತ್ರಿಯಲ್ಲಿ ಪ್ರಾಸ್ಥೆಸಿಸ್ ಅನ್ನು ತೆಗೆದುಹಾಕಿ ಮತ್ತು ಬೆಳಿಗ್ಗೆ ಪ್ರಯಾಣಿಸದ ಹೊರತು ಅದನ್ನು ಮರಳಿ ಇರಿಸಿ ಮತ್ತು ಇಂಪ್ಲಾಂಟ್‌ಗಳ ಸುತ್ತಲೂ ಸ್ವಚ್ಛಗೊಳಿಸುವಂತೆ ಗರಿಮಾಗೆ ಸೂಚನೆ ನೀಡಲಾಯಿತು. 15 ದಿನಗಳ ಹಿಂದೆ ಮಾಡಿದ ವಿಧಾನ ಯಶಸ್ವಿಯಾಗಿದ್ದು ನಗುಮೊಗದಿಂದ ಬಾಲಕಿ ಗರಿಮಾ ತನ್ನ ರಾಜ್ಯಕ್ಕೆ ಹಿಂತಿರುಗಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com