ಮೈಸೂರು: ಆಮ್ಲಜನಕ ಅಗತ್ಯವಿರುವವರಿಗೆ ಸಹಾಯ ಮಾಡಲು ನಾಗರಿಕ ಗುಂಪು ಮುಂದು!

 ಕೋವಿಡ್-19 ರೋಗಿಗಳಿಗೆ ಬಹಳ ಪ್ರಮುಖವಾಗಿರುವ ಆಮ್ಲಜನಕದ ಕೊರತೆ ಹಾಗೂ ಬೆಲೆ ದುಬಾರಿಯ ನಡುವೆ ಸಾಂಸ್ಕೃತಿಕ ನಗರಿಯ ಕೆಲ ನಾಗರಿಕರು ಅಗತ್ಯ ರೋಗಿಗಳಿಗೆ ಉಚಿತವಾಗಿ  ಆಮ್ಲಜನಕ ಸಿಲಿಂಡರ್ ಗಳನ್ನು ಪೂರೈಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಕೋವಿಡ್-19 ರೋಗಿಗಳಿಗೆ ಬಹಳ ಪ್ರಮುಖವಾಗಿರುವ ಆಮ್ಲಜನಕದ ಕೊರತೆ ಹಾಗೂ ಬೆಲೆ ದುಬಾರಿಯ ನಡುವೆ ಸಾಂಸ್ಕೃತಿಕ ನಗರಿಯ ಕೆಲ ನಾಗರಿಕರು ಅಗತ್ಯ ರೋಗಿಗಳಿಗೆ ಉಚಿತವಾಗಿ ಆಮ್ಲಜನಕ ಸಿಲಿಂಡರ್ ಗಳನ್ನು ಪೂರೈಸುತ್ತಿದ್ದಾರೆ.

ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವಂತೆ  ವೈದ್ಯಕೀಯ ಆಮ್ಲಜನಕಕ್ಕೂ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡರಲ್ಲೂ ಆಮ್ಲಜನಕ ಪೂರೈಕೆಯ ಕೊರತೆಯ ಬಗ್ಗೆ ದೂರುಗಳಿವೆ.

ಇಂತಹ ಪರಿಸ್ಥಿತಿಯಲ್ಲಿ ಇಬ್ಬರು ಡಾಕ್ಟರ್ ಸೇರಿದಂತೆ 11 ಮಂದಿಯನ್ನೊಳಗೊಂಡ ತಂಡ ಬಡ ರೋಗಿಗಳ ಮನೆ ಬಾಗಿಲಿಗೆ ಆಕ್ಸಿಜನ್ ಪೂರೈಸುತ್ತಿದ್ದಾರೆ.

ತಮ್ಮ ಕಾರ್ಯವನ್ನು ಮೆಚ್ಚಿ ಸದರ್ನ್ ಗ್ಯಾಸ್ ಲಿಮಿಟೆಡ್ ರಿಯಾಯಿತಿ ದರದಲ್ಲಿ ನೀಡುವ ಸಿಲಿಂಡರ್ ಗಳನ್ನು ಅಗತ್ಯವಿರುವವರಿಗೆ ಉಚಿತವಾಗಿ ನೀಡುತ್ತಿರುವುದಾಗಿ ನಾಗರಿಕ ಗುಂಪಿನ ಸದಸ್ಯ ಮೊಹಮ್ಮದ್ ಅಸಾದುಲ್ಲಾ ಹೇಳಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಜನರಿಗೆ ಆಗಸ್ಟ್ ತಿಂಗಳಲ್ಲಿ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು, ಆಕ್ಸಿಜನ್ ಮಟ್ಟ ಅಪಾಯಕಾರಿ ಹಂತದಲ್ಲಿರುವವರಿಗೆ ಸಹಾಯ ಮಾಡುತ್ತೇವೆ. ಇಲ್ಲಿಯವರೆಗೂ 74 ಕೋವಿಡ್ ರೋಗಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಅಸಾದುಲ್ಲಾ ತಿಳಿಸಿದರು.

ಲಾಕ್ ಡೌನ್ ಸಂದರ್ಭದಲ್ಲಿ 38 ವಿದ್ಯಾರ್ಥಿಗಳಿಗೆ ನೆರವಾಗಿರುವ ಈ ತಂಡ, 105 ಜನರಿಗೆ ಔಷಧವನ್ನು ಕೊಡಿಸಿದೆ. 1 ಸಾವಿರ ಕುಟುಂಬಗಳಿಗೆ ಪಡಿತರವನ್ನು ವಿತರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com