ಹಿಂದಿ ದಿವಸ್ ವಿವಾದ: ಎಲ್ಲಾ ಭಾಷೆಗಳ ಆಚರಣೆಗೆ ಕರೆ

ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ದಿವಸ್' ಆಚರಣೆಗೆ ರಾಜಕೀಯ ಪಕ್ಷಗಳ ಮುಖಂಡರು, ಕನ್ನಡ ಪರ ಸಂಘಟನೆಗಳು ಮತ್ತು ನೆಟ್ಟಿಗರಿಂದ ಸೋಮವಾರ ತೀವ್ರ ವಿರೋಧ ವ್ಯಕ್ತವಾಯಿತು.
ಕೆಎಸ್ ಆರ್ ರೈಲು ನಿಲ್ದಾಣ
ಕೆಎಸ್ ಆರ್ ರೈಲು ನಿಲ್ದಾಣ

ಬೆಂಗಳೂರು: ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ದಿವಸ್' ಆಚರಣೆಗೆ ರಾಜಕೀಯ ಪಕ್ಷಗಳ ಮುಖಂಡರು, ಕನ್ನಡ ಪರ ಸಂಘಟನೆಗಳು ಮತ್ತು ನೆಟ್ಟಿಗರಿಂದ ಸೋಮವಾರ ತೀವ್ರ ವಿರೋಧ ವ್ಯಕ್ತವಾಯಿತು.

ಹಿಂದಿ ದಿವಸ್ ಆಚರಣೆಯನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕು, ಕೇವಲ ಹಿಂದಿ ದಿವಸ್ ಆಚರಣೆಯಷ್ಟೇ ಯಾಕೆ? ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳನ್ನು ದೇಶಾದ್ಯಂತ ಆಚರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಮಧ್ಯೆ ಅನೇಕ  ನಟರು ಕೂಡಾ ಹಿಂದಿ ದಿವಸ್ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡಿಗರಾದ ನಾವು ಎಲ್ಲಾ ಭಾಷೆಗಳನ್ನು ಪ್ರೀತಿಸುತ್ತಿವೆ. ಆದರೆ, ಕನ್ನಡ ಪ್ರೀತಿಸುತ್ತೇವೆ. ಹಿಂದಿ ಹೇರಬೇಡಿ ಎಂದು ನಟ ಧನಂಜಯ್ ಕನ್ನಡದಲ್ಲಿ ಸಂದೇಶದೊಂದಿಗೆ ಟೀ ಶರ್ಟ್ ಹಾರಿಸುತ್ತಾ, ಟ್ವೀಟ್ ಮಾಡಿದ್ದಾರೆ.

ನಟ ಪ್ರಕಾಶ್ ರಾಜ್ ಮತ್ತು ಚೇತನ್ ಕೂಡಾ ಇದೇ ರೀತಿಯ ಸಂದೇಶ ನೀಡಿದ್ದಾರೆ. ಕನ್ನಡಪರ ಸಂಘಟನೆಯ ಸದಸ್ಯರು ಆನಂದ್ ರಾವ್ ಮೇಲ್ಸುತುವೆ ಬಳಿ ಪ್ರತಿಭಟನೆ ನಡೆಸಿದರು. ನೆಟ್ಟಿಗರು ಕೂಡಾ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದರು.

ಕನ್ನಡ ರಕ್ಷಣಾ ವೇದಿಕೆಯ ಗುಂಪೊಂದು  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಬೋರ್ಡ್ ನ್ನು ಕಿತ್ತು ಹಾಕಿ ಕಪ್ಪು ಬಣ್ಣ ಬಳಿದರು. ಈ ಸಂಬಂಧ ಎರಡು ಎಫ್ ಐಆರ್ ಗಳು ದಾಖಲಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com