ಕುಂದಾಪುರ: ದನ ಕಳ್ಳಸಾಗಣೆ - 52 ಎಮ್ಮೆಗಳು, 2 ವಾಹನ ವಶ, ನಾಲ್ವರ ಬಂಧನ

ಕುಂದಾಪುರದ ಅಮಾಸೆಬೈಲ್ ಠಾಣೆ ವ್ಯಾಪ್ತಿಯಲ್ಲಿನ  ಪೊಲೀಸ್ ಸಿಬ್ಬಂದಿಗಳ ತಂಡವು ಸೆಪ್ಟೆಂಬರ್ 15ರ ಮಂಗಳವಾರ ಹೊಸಂಗಡಿ ಚೆಕ್ ಪೋಸ್ಟ್ ಬಳಿ ದಾಳಿ ನಡೆಸಿದ್ದು, ಯಾವುದೇ ದಾಖಲೆಗಳಿಲ್ಲದೆ  52 ಎಮ್ಮೆಗಳ ಸಾಗಾಟವನ್ನು ಪತ್ತೆ ಮಾಡಿದೆ.  
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಕುಂದಾಪುರ: ಕುಂದಾಪುರದ ಅಮಾಸೆಬೈಲ್ ಠಾಣೆ ವ್ಯಾಪ್ತಿಯಲ್ಲಿನ  ಪೊಲೀಸ್ ಸಿಬ್ಬಂದಿಗಳ ತಂಡವು ಸೆಪ್ಟೆಂಬರ್ 15ರ ಮಂಗಳವಾರ ಹೊಸಂಗಡಿ ಚೆಕ್ ಪೋಸ್ಟ್ ಬಳಿ ದಾಳಿ ನಡೆಸಿದ್ದು, ಯಾವುದೇ ದಾಖಲೆಗಳಿಲ್ಲದೆ  52 ಎಮ್ಮೆಗಳ ಸಾಗಾಟವನ್ನು ಪತ್ತೆ ಮಾಡಿದೆ.  

ಘಟನೆ ಸಂಬಂಧ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ  ಮೆಹಬೂಬ್ (27), ಬೆಳಗಾವಿ ಜಿಲ್ಲೆ ಬೈಲಹೊಂಗಲದ ಬಾಪು ಸಾಹೇಬ್ (46), ದಾವಣಗೆರೆ ಲ್ಲೆಯ ಚಿಕ್ಕನಾಯಕನಹಳ್ಳಿಯ ಇಮ್ರಾನ್ (29) ಮತ್ತು ಬೆಳಗಾವಿಯ ಬೈಲಹೊಂಗಲ ಮೂಲದ ಆಸಿಫ್ (23)  ಎಂಬುವವರನ್ನು ಪೋಲೀಸರು ಬಂಧಿಸಿದ್ದಾರೆ.

ಎರಡು ಲಾರಿಗಳಲ್ಲಿ ಎಮ್ಮೆಗಳನ್ನು ಸಾಗಿಸಲಾಗುತ್ತಿತ್ತು. ಒಂದರಲ್ಲಿ  24 ಎಮ್ಮೆಗಳಿದ್ದರೆ ಇನ್ನೊಂದರಲ್ಲಿ 28 ಎಮ್ಮೆಗಳು ಪತ್ತೆಯಾಗಿದೆ. ಅಮಾನವೀಯ ರೀತಿಯಲ್ಲಿ ಅವುಗಳನ್ನು ಲಾರಿಗೆ ತುಂಬಿಸಿ ಸಾಗಿಸಲಾಗುತ್ತಿದ್ದ ವೇಳೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಗೋ ಕಳ್ಳ ಸಾಗಣೆ  ತಡೆಗಟ್ಟುವಿಕೆ ಕಾಯ್ದೆಯ ಸೆಕ್ಷನ್ 5, 8 ಮತ್ತು 11 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಕೆಲವು ವಿಭಾಗಗಳಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸಧ್ಯದಲ್ಲೇ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೋಲೀಸ್ ಮೂಲಗಳು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com