ಚಿಕ್ಕಮಗಳೂರಿನಲ್ಲಿ ದ್ರವ ಆಮ್ಲಜನಕ ಸ್ಥಾವರ ಸ್ಥಾಪನೆ ಶೀಘ್ರ!
ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ದ್ರವ ಆಮ್ಲಜನಕ ಘಟಕ ಸ್ಥಾಪಿಸಲು ಯೋಜಿಸುತ್ತಿದೆ, ಒಂದು ವಾರದಲ್ಲಿ ಕಾರ್ಯಾರಂಭ ಮಾಡಲಿದೆ.
Published: 15th September 2020 07:56 AM | Last Updated: 15th September 2020 01:10 PM | A+A A-

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ದ್ರವ ಆಮ್ಲಜನಕ ಘಟಕ ಸ್ಥಾಪಿಸಲು ಯೋಜಿಸುತ್ತಿದೆ, ಒಂದು ವಾರದಲ್ಲಿ ಕಾರ್ಯಾರಂಭ ಮಾಡಲಿದೆ.
ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರಿಗೆ ಆಮ್ಲಜನಕ ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆ ರೂಪುಗೊಳ್ಳುತ್ತಿದೆ. ಈ ಯೋಜನೆಗಾಗಿ ಸುಮಾರು 50 ಲಕ್ಷ ರು ಹಣದ ಅವಶ್ಯಕತೆಯಿದೆ, ಸಸ್ಯದಲ್ಲಿ ಸಂಗ್ರಹವಾಗಿರುವ ದ್ರವ ಆಮ್ಲಜನಕವನ್ನು ಪೈಪ್‌ಗಳ ಮೂಲಕ ವೆಂಟಿಲೇಟರ್‌ಗಳಿಗೆ ಪೂರೈಸುವ ಮೊದಲು ಅದನ್ನು ಅನಿಲವಾಗಿ ಪರಿವರ್ತಿಸಲಾಗುತ್ತದೆ.
ಒಂದು ವೇಳೆ ಸಸ್ಯದಿಂದ ಆಮ್ಲಜನಕ ಸರಿಯಾಗಿ ರೈಕೆಯಾಗದಿದ್ದರೇ ಬಳ್ಳಾರಿ ಅಥವಾ ಬೆಂಗಳೂರಿನಿಂದ ಟ್ಯಾಂಕರ್‌ಗಳ ಮೂಲಕ ಒಂದು ಅಥವಾ ಎರಡು ದಿನಗಳಲ್ಲಿ ಪುನಃ ತುಂಬಿಸಬಹುದಾಗಿದೆ.ಪ್ರಸ್ತುತ, ಪೋರ್ಟಬಲ್ ಸಿಲಿಂಡರ್ ಗಳಲ್ಲಿ ಆಮ್ಲಜನಕವನ್ನು ಪೂರೈಸಲಾಗುತ್ತದೆ ಮತ್ತು ಪ್ರತಿದಿನ 200 ಸಿಲಿಂಡರ್ ಖಾಲಿಯಾಗುತ್ತವೆ.ತುಂಬಿದ ಸಿಲಿಂಡರ್ ಗಳನ್ನು ಭದ್ರಾವತಿಯಿಂದ ತರಿಸಿಕೊಳ್ಳಲಾಗುತ್ತಿದೆ, ಒಂದು ವೇಳೆ ಬೇಡಿಕೆ ಹೆಚ್ಚಾದರೇ ಕಷ್ಟವಾಗುತ್ತದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.
ಈ ಆಮ್ಲಜನಕ ಘಟಕ ಸ್ಥಾಪಿಸುವುದು ಸುಲಭದ ಕೆಲಸ ಎಂದು ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ಹೇಳಿದ್ದಾರೆ. ಆಸ್ಪತ್ರೆಯಲ್ಲಿ 28 ವೆಂಟಿಲೇಟರ್ ಗಳಿವೆ,ಒಮ್ಮೆ ಘಟಕ ಸ್ಥಾಪನೆಯಾದರೇ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಸುಲಭವಾಗುತ್ತದೆ, ಚಿಕ್ಕಮಗಳೂರು, ತರಿಕೆರೆ, ಕಟೂರು, ಮೂಡಿಗೆರೆ ತಾಲೂಕುಗಳಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿವೆ ಎಂದು ಹೇಳಿದ್ದಾರೆ.