ಮನೆಗಳಲ್ಲಿ ಡ್ರಗ್ ಪತ್ತೆಯಾದರೆ ಮಾಲೀಕರು ಹೊಣೆ: ಡಿಜಿಪಿ ಪ್ರವೀಣ್ ಸೂದ್ ಎಚ್ಚರಿಕೆ

ಸ್ಟೇ ಹೋಂಗಳಲ್ಲಿ  ಮಾದಕ ದ್ರವ್ಯಗಳು ಕಂಡು ಬಂದರೆ, ಆ ಮನೆಗಳ ಮಾಲೀಕರು ಅದರ ಹೊಣೆ ಹೊರಬೇಕಾಗುತ್ತದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಪ್ರವೀಣ್ ಸೂದ್
ಪ್ರವೀಣ್ ಸೂದ್

ಚಿಕ್ಕಮಗಳೂರು: ಸ್ಟೇ ಹೋಂಗಳಲ್ಲಿ ಮಾದಕ ದ್ರವ್ಯಗಳು ಕಂಡು ಬಂದರೆ, ಆ ಮನೆಗಳ ಮಾಲೀಕರು ಅದರ ಹೊಣೆ ಹೊರಬೇಕಾಗುತ್ತದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು  ಮಾದಕ ದ್ರವ್ಯಗಳ ಬಗ್ಗೆ ಮನೆಗಳ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದರೆ ಅವರಿಗೆ ಬಹುಮಾನ ನೀಡಲಿದ್ದೇವೆ. ಆದರೆ, ಪ್ರಕರಣ  ಮುಚ್ಚಿಹಾಕಲು ಯತ್ನಿಸಿದರೆ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು. ಡ್ರಗ್ ಕಂಟ್ರೋಲ್ ಮಾಡುವುದು ವಿಶೇಷ ಪಡೆ ಮಾತ್ರವಲ್ಲ, ಪೊಲೀಸರು ಕೂಡ ಡ್ರಗ್ಸ್ ದಂಧೆ ಕಂಟ್ರೋಲ್ ಮಾಡಬೇಕು ಎಂದು ಪ್ರವೀಣ್ ಸೂದ್ ತಿಳಿಸಿದರು.

ಡ್ರಗ್ ಹಾವಳಿ ಹತ್ತಿಕ್ಕುವುದು ವಿಶೇಷ ಪಡೆಗಳ ಕೆಲಸ ಮಾತ್ರವಲ್ಲ, ಮಾದಕ ದ್ರವ್ಯ  ಹಾವಳಿ ನಿಯಂತ್ರಿಸಲು ಪೊಲೀಸರು ನೆರವಾಗಬೇಕು ಎಂದು ಡಿಜಿಪಿ ಪ್ರವೀಣ್  ಸೂದ್ ಸೂಚಿಸಿದರು.

ಈವರೆಗೆ ರಾಜ್ಯದಲ್ಲಿ ಏಳು ಸಾವಿರ ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 55 ಜನ ಸಾನ್ನಪ್ಪಿದ್ದಾರೆ. ಈಗಾಗಲೇ ಶೇಕಡ ನೂರರಷ್ಟು ಪೊಲೀಸ್ ಕೆಲಸ ಆರಂಭವಾಗಿದೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಸುರಕ್ಷತೆಯನ್ನ ಗಮನದಲ್ಲಿ ಇಟ್ಟುಕೊಂಡು ಹೊಸ ತಂತ್ರಜ್ಞಾನದ ಜೊತೆ ಹೇಗೆ ಕೆಲಸ ಮಾಡಬೇಕೆಂದು ಚರ್ಚೆ ಮಾಡಲಾಗಿದೆ ಎಂದು ಪ್ರವೀಣ್ ಸೂದ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com