ಡ್ರಗ್ಸ್ ಪ್ರಕರಣ: ಆದಿತ್ಯ ಆಳ್ವ ಮ್ಯಾನೇಜರ್ ಸಿಸಿಬಿ ವಶಕ್ಕೆ

ಡ್ರಗ್ಸ್ ಪ್ರಕರಣದ ಆರೋಪಿ, ನಾಪತ್ತೆಯಾಗಿರುವ ಮಾಜಿ‌‌ ಸಚಿವ ಸಿ.ಜೀವರಾಜ ಆಳ್ವ ಪುತ್ರ ಆದಿತ್ಯ ಆಳ್ವಾಗೆ ಸೇರಿದ ರೇಸಾರ್ಟ್ ನಲ್ಲಿ ಸಿಸಿಬಿ ದಾಳಿ ಅಂತ್ಯಗೊಂಡಿದ್ದು, ಈಗ ಆದಿತ್ಯ ಮ್ಯಾನೇಜರ್ ರಾಮ್ ದಾಸ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆದಿತ್ಯ ಆಳ್ವ
ಆದಿತ್ಯ ಆಳ್ವ

ಬೆಂಗಳೂರು: ಡ್ರಗ್ಸ್ ಪ್ರಕರಣದ ಆರೋಪಿ, ನಾಪತ್ತೆಯಾಗಿರುವ ಮಾಜಿ‌‌ ಸಚಿವ ಸಿ.ಜೀವರಾಜ ಆಳ್ವ ಪುತ್ರ ಆದಿತ್ಯ ಆಳ್ವಾಗೆ ಸೇರಿದ ರೇಸಾರ್ಟ್ ನಲ್ಲಿ ಸಿಸಿಬಿ ದಾಳಿ ಅಂತ್ಯಗೊಂಡಿದ್ದು, ಈಗ ಆದಿತ್ಯ ಮ್ಯಾನೇಜರ್ ರಾಮ್ ದಾಸ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಾಳಿ ವೇಳೆಯಲ್ಲಿ ರೆಸಾರ್ಟ್ ನಲ್ಲಿ ಮಾದಕ ವಸ್ತು ಪತ್ತೆಯಾಗಿದ್ದು, ಎರಡು ಲ್ಯಾಪ್ ಟಾಪ್, 1 ಕಂಪ್ಯೂಟರ್ ಸೇರಿ ಸಿಸಿಟಿವಿ, ಡಿವಿಆರ್ ಅನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ನಗರದ‌ ಹೆಬ್ಬಾಳದಲ್ಲಿರುವ 4 ಎಕರೆ ಹೌಸ್ ಆಫ್ ಲೈಫ್ ರೆಸಾರ್ಟ್ ಮೇಲೆ ಸಿಸಿಬಿ ಬೆಳಗ್ಗೆ ದಾಳಿ ನಡೆಸಿತ್ತು. ದಾಳಿ ವೇಳೆಯಲ್ಲಿ ತನಿಖಾಧಿಕಾರಿಗಳು ಮೂವರು ಕೆಲಸಗಾರರು ಸೇರಿ ಇಬ್ಬರೂ ಭದ್ರತಾ ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಆರೋಪಿ ಆದಿತ್ಯ ಆಳ್ವಾ ಬಾಲಿವುಡ್ ನಟ ವಿವೇಕ್ ಓಬೇರಾಯ್ ಅವರ ಮೈದುನ. ಬರೋಬ್ಬರಿ ಆರು ಎಕರೆ ವಿಸ್ತೀರ್ಣದಲ್ಲಿ ಆದಿತ್ಯ ಆಳ್ವಾ ಮನೆ ಇದ್ದು. ಇದೇ ಮನೆಯಲ್ಲಿ ವಾರಾಂತ್ಯದ ಪಾರ್ಟಿಗಳು ನಡೆಯುತ್ತಿರುವ ಬಗ್ಗೆ ಆರೋಪಿ ರವಿಶಂಕರ್ ತಪ್ಪೊಪ್ಪಿಕೊಂಡಿದ್ದನು. ಇದಲ್ಲದೆ ಡ್ರಗ್ ಜಾಲದಲ್ಲಿ ಸಿಸಿಬಿ ಅಧಿಕಾರಿಗಳು ಬಂಧಿಸಿರುವ ಆರು ಮಂದಿ ಆರೋಪಿಗಳು ಆದಿತ್ಯ ಆಳ್ವಾ ಹೆಸರನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ. ಡ್ರಗ್ ಜಾಲದಲ್ಲಿ ರವಿಶಂಕರ್ ಬಂಧನವಾಗುತ್ತಿದ್ದಂತೆ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಮುಂಬೈ ಅಥವಾ ದೆಹಲಿಯಲ್ಲಿರುವ ಅನುಮಾನಗಳು ವ್ಯಕ್ತವಾಗಿವೆ.

ಆದಿತ್ಯ ಆಳ್ವಾ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ರಾಜಕಾರಣಿ ಮತ್ತು ಉದ್ಯಮಿಗಳ ಮಕ್ಕಳು ಸೇರಿದಂತೆ ಹಲವು ತಾರೆಯರು ಭಾಗಿಯಾಗುತ್ತಿದ್ದರು ಎನ್ನಲಾಗಿದೆ.

ರವಿಶಂಕರ್ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಆದಿತ್ಯ ಆಳ್ವ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ಮನೆಯಲ್ಲೇ ಗಣ್ಯ ವ್ಯಕ್ತಿಗಳಿಗೆ ಪಾರ್ಟಿ ನಡೆಸಲಾಗುತ್ತಿತು. ಅಲ್ಲಿ ಗಾಂಜಾ ಮಾತ್ರೆ ಸೇವಿಸಲಾಗುತ್ತಿತ್ತು ಎಂದು ಆತ ಮಾಹಿತಿ ನೀಡಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com