ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಂಕಷ್ಟದಲ್ಲಿರುವ ಎಸ್ಕಾಂಗೆ ಸಾಲ, ಪ್ರವಾಸೋದ್ಯಮ ನೀತಿಗೆ ಸಂಪುಟ ಒಪ್ಪಿಗೆ

ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಎಸ್ಕಾಂಗಳ ಆರ್ಥಿಕ ಪರಿಸ್ಥಿತಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ಸಾಲ ಪಡೆದುಕೊಳ್ಳಲು ಸರ್ಕಾರ ಖಾತ್ರಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ರೂ.55745 ಕೋಟಿ ದೀರ್ಘಾವಧಿ ಸಾಲ ಪಡೆದುಕೊಳ್ಳಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಬೆಂಗಳೂರು: ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಎಸ್ಕಾಂಗಳ ಆರ್ಥಿಕ ಪರಿಸ್ಥಿತಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ಸಾಲ ಪಡೆದುಕೊಳ್ಳಲು ಸರ್ಕಾರ ಖಾತ್ರಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ರೂ.55745 ಕೋಟಿ ದೀರ್ಘಾವಧಿ ಸಾಲ ಪಡೆದುಕೊಳ್ಳಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. 

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಧುಸ್ವಾಮಿ ಮಾತನಾಡಿ, ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಮಾಹಿತಿ ನೀಡಿದ್ದಾರೆ. 

ರಾಜ್ಯದ ಎಸ್ಕಾಂಗಳಿಗೆ ಸಹಾಯ ಮಾಡಲು .55745 ಕೋಟಿ ದೀರ್ಘಾವಧಿ ಸಾಲ ಪಡೆದುಕೊಳ್ಳಲು ನಿರ್ಧಾರ ಕೈಗೊಳ್ಳಲಿದೆ. ಇದರಿಂದ ತಡವಾದ ಮರುಪಾವತಿ ಮೇಲೆ ವಿಧಿಸುವ ರೂ.730 ಕೋಟಿ ಉಳಿಯಲಿದೆ. ಇದಲ್ಲದೆ, ಸಂಪುಟ ಸಭೆಯಲ್ಲಿ ನೂತನ ಪ್ರವಾಸೋದ್ಯಮ ನೀತಿಗೂ ಒಪ್ಪಿಗೆ ನೀಡಲಾಗಿದೆ. ಈ ಕುರಿತ ಹೊಸ ನೀತಿಯನ್ನು ಸೆಪ್ಟೆಂಬರ್ 27 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕೃತವಾಗಿ ಮಾಹಿತಿ ನೀಡಲಿದ್ದಾರೆ. 

2011 ನೇ ಸಾಲಿನ ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೆಷನರ್ಸ್‌ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರ ಮ ಸಂಬಂಧ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಮತ್ತು ೯ ಮಂದಿ ಮಾಜಿ ಸದಸ್ಯರನ್ನು ಅಭಿಯೋಜನೆ(ಪ್ರಾಸಿಕ್ಯೂಷನ್) ಕುರಿತಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಕಾನೂನು ಸಚಿವರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ ಮಾಡಿ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.

ಮಾಜಿ ಅಧ್ಯಕ್ಷರು ಮತ್ತು ಸದಸ್ಯರನ್ನು ಪ್ರಾಷಿಕ್ಯೂಷನ್‌ಗೆ ಒಳಪಡಿಸುವ ಸಂಬಂಧ ರಾಷ್ಟ್ರಪತಿಗೆ ಶಿಫಾರಸ್ಸು ಮಾಡಬೇಕೇ? ಅಥವಾ ಬೇಡವೇ? ಎಂಬುದರ ಕುರಿತು ಅಧ್ಯಯನ ನಡೆಸುವ ಸಂಬಂ ಧ ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ. ಉಪಸಮಿತಿ ನೀಡುವ ವರದಿ ಆಧಾರದ ಮೇಲೆ ಸಚಿವ ಸಂಪುಟ ಮುಂದಿನ ಕ್ರಮ ಜರುಗಿಸಲಿದೆ ಎಂದು ತಿಳಿಸಿದ್ದಾರೆ. 

ರಾಜ್ಯದ ಬಳ್ಳಾರಿ ಜಿಲ್ಲೆಯ ದೋಣಿಮಲೈ ಪ್ರದೇಶದಲ್ಲಿನ ಎನ್‌ಎಂಡಿಸಿ ಸಂಸ್ಥೆಯ ಗಣಿಗಾರಿಕೆ ಗುತ್ತಿಗೆ ಅವಧಿ ನವೀಕರಣ ಸಮಸ್ಯೆ ಬಗೆಹರಿದಿರುವ ಹಿನ್ನೆಲೆಯಲ್ಲಿ ಮತ್ತೆ ಗಣಿಗಾರಿಕೆ ನಡೆಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಇತ್ತೀಚೆಗೆ ಮುಖ್ಯಮಂತ್ರಿಗಳು ಮತ್ತು ಕೇಂದ್ರದ ಗಣಿಗಾರಿಕೆ ಸಚಿವರು ಸಭೆ ನಡೆಸಿ ಎನ್‌ಎಂಡಿಸಿ ಸಂಸ್ಥೆಯ ಗಣಿಗಾರಿಕೆ ಗುತ್ತಿಗೆ ಅವಧಿ ನವೀಕರಣ ಸಂಬಂಧ ಇದ್ದ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ರಾಜ್ಯ ಕ್ಕೆ ನೀಡಲಾಗುತ್ತಿರುವ ಶೇ.15ರಷ್ಟು ರಾಯಲ್ಟಿಯನ್ನು ಶೇ.22.5ರಷ್ಟು ನೀಡುವಂತೆ ಮನವಿ ಮಾಡಲಾಗಿತ್ತು.ಇದಕ್ಕೆ ಕೇಂದ್ರವು ಸಕಾರಾತ್ಮಕವಾಗಿ ಸ್ಪಂದಿ ಸಿದೆ. ದೋಣಿಮಲೈನ 6೦೦ ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ಆರಂಭಿಸಲು ನಿರ್ಧರಿಸಲಾಗಿದೆ. ಇದರಿಂದ 647 ಕೋಟಿ ರು. ಆದಾಯ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.

ಎನ್‌ಎಂಡಿಸಿ ಕಂಪನಿಯ ಗಣಿಗಾರಿಕೆ ಗುತ್ತಿಗೆಯ 50 ವರ್ಷಗಳ ಅವಧಿ 2018ಕ್ಕೆ ಮುಕ್ತಾಯ ಗೊಂಡಿದೆ. ನವೀಕರಣ ಬಗ್ಗೆ ಸ್ಪಷ್ಟತೆ ಇರಲಿಲ್ಲ. 2020ರ ನಂತರ ಯಾವುದೇ ಗಣಿಯನ್ನು ವಹಿಸಿದರೆ ಕೇಂದ್ರ ಸರ್ಕಾರ ನಿಗದಿ ಮಾಡಿದ ಪ್ರೀಮಿಯಂ ದರವನ್ನು ಸಲ್ಲಿಸಬೇಕು.ನವೀಕರಣಕ್ಕೆ ಯಾವುದೇ ಅವಕಾಶ ಇರಲಿಲ್ಲ.ಈ ಬಗ್ಗೆ ಮುಖ್ಯಮಂತ್ರಿ ಮತ್ತು ಕೇಂದ್ರ ಗಣಿಗಾರಿಕೆ ಸಚಿವರ ಜತೆ ಇತ್ತೀಚೆಗೆ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಸಾರ್ವಜನಿಕ ವಲಯದ ಉದ್ದಿಮೆ ಗಳಿಗೆ ಹಂಚಿಕೆಯ ಮೂಲಕ ಗಣಿ ಗುತ್ತಿಗೆ ಮಂಜೂರು ಮಾಡಬಹುದಾಗಿದ್ದು, ಕೇಂದ್ರ ಸರ್ಕಾರವೇ ಇದಕ್ಕೆ ರಾಯಲ್ಟಿ ಗಿಂತ ಮಿಗಿಲಾದ ಪ್ರೀಮಿಯಂ ಅನ್ನು ನಿಗದಿ ಮಾಡಲಿದೆ. ಪ್ರೀಮಿಯಂ ಮೊತ್ತದ ಬಗ್ಗೆ ರಾಜ್ಯದ ಆಕ್ಷೇಪ ಇತ್ತು. ಹೀಗಾಗಿ ಕೇಂದ್ರ ಗಣಿ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಯಿತು ಎಂದು ತಿಳಿಸಿದರು. 

ಇದಲ್ಲದೆ, ಬೆಂಗಳೂರು ನಗರ ಹಾಗೂ ನಗರ ಪ್ರದೇಶದ ವ್ಯಾಪ್ತಿಯಲ್ಲಿದ್ದ ಬಿ ಖರಾಬು ಭೂಮಿಯನ್ನು ಒತ್ತುವರಿ ಭೂಮಿ, ನಿವೇಶನಗಳ ಮಧ್ಯಮದಲ್ಲಿರುವ ಭೂಮಿಯನ್ನು ವಿಲೇ ವಾರಿ ಮಾಡಲು ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಭೂ ಕಂದಾಯ ಕಾಯ್ದೆಗೆ 64,ಕಲಂ 2 ತಿದ್ದುಪಡಿ ತರಲು ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಬೆಂಗಳೂರು ನಗರದ ವ್ಯಾಪ್ತಿಯ 18 ಕಿ.ಮೀ ವ್ಯಾಪ್ತಿಯಲ್ಲಿರುವ ಬಿ ಖರಾಬು ಭೂಮಿಯನ್ನು ಖುಲ್ಲಾಪಡಿಸಲು ಸಾಧ್ಯವಿಲ್ಲ. ಕೆಲ ವೆಡೆ ಕಟ್ಟಡಗಳು,ನಿವೇಶನ ಮಧ್ಯಮದಲ್ಲಿ ಸಿಲುಕಿದೆ,ಹೆಚ್ಚುವರಿ ಭೂಮಿ ಉಳಿದುಕೊಂಡಿದ್ದು ಅದನ್ನು ಮಾರು ಕಟ್ಟೆ ದರದ ನಾಲ್ಕು ಪಟ್ಟು ಶುಲ್ಕ ವಿಧಿಸಿ ಸಕ್ರಮೀಕರಣ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.ಕೆಲವೆಡೆ ಸರ್ಕಾರದ ಯಾವುದೇ ಯೋಜನೆಗೆ,ಅಥವಾ ಬಳಕೆಯಾಗದೆ ಉಳಿದಿರುವ ಭೂಮಿಯನ್ನು ಬಿಟ್ಟರೆ ಯಾವುದೇ ಪ್ರಯೋಜನವಾಗದೆ ಒತ್ತುವರಿದಾರರ,ಖಾಸಗಿ ಸಂಸ್ಥೆಗಳ ಪಾಲಾಗಲಿದೆ.ಹೀಗಾಗಿ ಅನಿವಾರ್ಯವಾಗಿ ಸಕ್ರಮೀಕರಣಕ್ಕೆ ಸರ್ಕಾರ ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com