ಸರ್ಕಾರಿ ವೈದ್ಯರ ಮುಷ್ಕರ ಸೆ.18ವರೆಗೂ ಮುಂದುವರಿಕೆ!

ಸರ್ಕಾರಿ ವೈದ್ಯರ ವೇತನ ಪರಿಷ್ಕರಣೆ, ಬಡ್ತಿ ಸೇರಿದಂತೆ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಸಮ್ಮತಿ ನೀಡಿದ್ದರೂ, ಕೆಲವು ಬೇಡಿಕೆಗಳ ಬಗ್ಗೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಹೀಗಾಗಿ ಮಂಗಳವಾರದಿಂದ ಆರಂಭಿಸಿರುವ ಅಸಹಕಾರ ಮುಷ್ಕರವನ್ನು ಸೆ.18ರವರೆಗೆ ಮುಂದುವರಿಸಲು ಸರ್ಕಾರಿ ವೈದ್ಯರು ನಿರ್ಧರಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸರ್ಕಾರಿ ವೈದ್ಯರ ವೇತನ ಪರಿಷ್ಕರಣೆ, ಬಡ್ತಿ ಸೇರಿದಂತೆ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಸಮ್ಮತಿ ನೀಡಿದ್ದರೂ, ಕೆಲವು ಬೇಡಿಕೆಗಳ ಬಗ್ಗೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಹೀಗಾಗಿ ಮಂಗಳವಾರದಿಂದ ಆರಂಭಿಸಿರುವ ಅಸಹಕಾರ ಮುಷ್ಕರವನ್ನು ಸೆ.18ರವರೆಗೆ ಮುಂದುವರಿಸಲು ಸರ್ಕಾರಿ ವೈದ್ಯರು ನಿರ್ಧರಿಸಿದ್ದಾರೆ. 

ಸಂಧಾನ ಮಾತುಕತೆ ಫಲಪ್ರದ ಎಂದು ಸರ್ಕಾರ ಹೇಳಿದರೆ, ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಸೆ.18ರಂದು ಸಚಿವರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಂತರ ಮುಷ್ಕರ ಮುಂದುವರೆಸಬೇಕೇ ಬೇಡವೇ ಎಂಬ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದೆ. 

ಅಸಹಕಾರ ಮುಷ್ಕರದ ಹಿನ್ನೆಲೆಯಲ್ಲಿ ಕೋವಿಡ್ ಹೊರತು ಪಡಿಸಿ ಉಳಿದ ವಿವಿಧ ಬಗೆಯ ರೋಗಗಳು, ಚಿಕಿತ್ಸೆ ಆರೋಗ್ಯ ಸಮೀಕ್ಷೆ ಮುಂತಾದ ಯಾವುದೇ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಿಲ್ಲ. ಜೊತೆಗೆ ಸರ್ಕಾರ ನಡೆಸುವ ಯಾವುದೇ ಸಭೆಯಲ್ಲಿ ವೈದ್ಯರು ಭಾಗಿಯಾಗದೆ ಬಹಿಷ್ಕರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com