ಬರ-ಪ್ರವಾಹ, ದರ ಕುಸಿತ: ಬೇಗ ಹಣ ಸಂಪಾದನೆಯ ಆಸೆ ಗಾಂಜಾ ಬೆಳೆಯಲು ರೈತರಿಗೆ ಪ್ರೇರಣೆ!

ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದ ಹಿನ್ನೆಲೆಯಲ್ಲಿ ಅತಿ ಬೇಗ ಹಣ ಸಂಪಾದಿಸುವ ಆಸೆಯಿಂದ ರೈತರು ಗಾಂಜಾ ಬೆಳೆ ಬೆಳೆಯಲು ಮುಂದಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದ ಹಿನ್ನೆಲೆಯಲ್ಲಿ ಅತಿ ಬೇಗ ಹಣ ಸಂಪಾದಿಸುವ ಆಸೆಯಿಂದ ರೈತರು ಗಾಂಜಾ ಬೆಳೆ ಬೆಳೆಯಲು ಮುಂದಾಗಿದ್ದಾರೆ.

ಕಳೆದ 1 ವರ್ಷದಲ್ಲಿ ರೈತರ ವಿರುದ್ಧ ರಾಜ್ಯದಲ್ಲಿ ಸುಮಾರು 100 ಕೇಸ್ ಗಳು ದಾಖಲಾಗಿವೆ, ರಾಜ್ಯ ಅಬಕಾರಿ ಇಲಾಖೆಯ ಮಾಹಿತಿಯ ಪ್ರಕಾರ, 1,060 ಗಾಂಜಾ ಗಿಡ ಸೀಜ್ ಮಾಡಿದ್ದಾರೆ. ಪ್ರತಿ ಗಿಡ 6 ರಿಂದ 7ಕೆಜಿ ಗಾಂಜಾ ನೀಡುತ್ತದೆ, ಬರ ಮತ್ತು ಪ್ರವಾಹ, ಕೃಷಿ ಉತ್ಪನ್ನಗಳ ಬೆಲೆಗಳ ಏರಿಳಿಕೆಯಿಂದಾಗಿ ಹಣದಾಸೆಯಿಂದ ಕೆಲವು ರೈತರು ಗಾಂಜಾ ಗಿಡ ಬೆಳೆಯಲು ಮುಂದಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈತರಿಗೆ ಡ್ರಗ್ ಪೆಡ್ಲರ್ ಳಿಂದ ಗಾಂಜಾ ಬೀಜ ಸರಬರಾಜು ಆಗುತ್ತಿದೆ, ಇನ್ನು ಕೆಲವು ಕೇಸ್ ಗಳಲ್ಲಿ ರೈತರಿಂದ ಜಮೀನನ್ನು ಲೀಸ್ ಗೆ ಪಡೆದು ಅದರಲ್ಲಿ ಗಾಂಜಾ ಬೆಳೆಯಲಾಗುತ್ತದೆ, ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಪೊಲೀಸರು ಇದನ್ನು ಪತ್ತೆ ಹಚ್ಚಿ ಭೂ ಮಾಲೀಕರ ವಿರುದ್ಧ ಕೇಸ್ ದಾಖಲಿಸುತ್ತಿದ್ದಾರೆ. ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ತಮ್ಮ ಭೂಮಿಯನ್ನು ಬಳಸಲು ಅನುಮತಿಸದಂತೆ ರೈತರನ್ನು ಜಾಗೃತಗೊಳಿಸಲು ಕೃಷಿ ಇಲಾಖೆ ಈಗ ಕ್ರಮ ಕೈಗೊಳ್ಳುತ್ತಿದೆ. 

ಈ ಸಂಬಂಧ ಪ್ರತಿಕ್ರಿಯಿಸಿರು ಕೃಷಿ ಸಚಿವ ಬಿಸಿ ಪಾಟೀಲ್, ಕೃಷಿ ಇಲಾಖೆಯ ಎಲ್ಲಾ ಜಂಟಿ ನಿರ್ದೇಶಕರಿಗೂ ಸುತ್ತೋಲೆ ಕಳುಹಿಸಿದ್ದು, ರೈತರಿಗೆ ಅರಿವು ಮೂಡಿಸುವಂತೆ ತಿಳಿಸಿದ್ದಾರೆ. ಎಲ್ಲಾ ರೈತರು ಗಾಂಜಾ ಬೆಳೆಯುತ್ತಾರೆ ಎಂದು ಜನರಲೈಸ್ ಮಾಡದಂತೆ ಪಾಟೀಲ್ ಮನವಿ ಮಾಡಿದ್ದಾರೆ. ಹಲವು ರೈತರು ಹಗಲು ರಾತ್ರಿ ಕಷ್ಟಪಟ್ಟು ದುಡಿಯುತ್ತಾರೆ ಎಂದು ಹೇಳಿದ್ದಾರೆ.

ರೈತರು ತಮ್ಮ ಭೂಮಿಯನ್ನು ಭೋಗ್ಯಕ್ಕೆ ನೀಡುವಾಗ ಲೀಸ್ ಪಡೆದುಕೊಳ್ಳುವವರ ಹಿನ್ನೆಲೆ ತಿಳಿದು ಕೊಂಡು ನೀಡಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ಜಮೀನು ನೀಡುವ ಮೊದಲು ಅವರಿಂದ ಕೆಲವು ದಾಖಲಾತಿಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com