ಕೋವಿಡ್-19: ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಿಗೆ ಮತ್ತೆ 2 ಆಂಬುಲೆನ್ಸ್ ನೀಡಿದ ಎಚ್ಎಎಲ್

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವಂತೆಯೇ ಇತ್ತ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಿಲಿಕಾನ್ ಸಿಟಿ ಬೆಂಗಳೂರಿನ ಮತ್ತೆ ಎರಡು ಸರ್ಕಾರಿ ಆಸ್ಪತ್ರೆಗಳಿಗೆ ಆ್ಯಂಬುಲೆನ್ಸ್ ಗಳನ್ನು ನೀಡಿದೆ.

Published: 16th September 2020 10:28 AM  |   Last Updated: 16th September 2020 10:28 AM   |  A+A-


Bengaluru hospitals-HAL

ಎಚ್ಎಎಲ್ ಆ್ಯಂಬುಲೆನ್ಸ್

Posted By : Srinivasamurthy VN
Source : The New Indian Express

ಬೆಂಗಳೂರು: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವಂತೆಯೇ ಇತ್ತ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಿಲಿಕಾನ್ ಸಿಟಿ ಬೆಂಗಳೂರಿನ ಮತ್ತೆ ಎರಡು ಸರ್ಕಾರಿ ಆಸ್ಪತ್ರೆಗಳಿಗೆ ಆ್ಯಂಬುಲೆನ್ಸ್ ಗಳನ್ನು ನೀಡಿದೆ.

ಕೊರೊನಾ ಸೋಂಕಿತರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಹಾಗೂ ವಿವಿಧ ವೈದ್ಯಕೀಯ ಸೇವೆಗಳಿಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಮತ್ತೆ ಎರಡು ಆಂಬುಲೆನ್ಸ್‌ಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮಂಗಳವಾರ ಹಸ್ತಾಂತರಿಸಿದೆ. 

ವಿಕ್ಟೋರಿಯಾ ಆಸ್ಪತ್ರೆ ಆವರಣದ ನೆಪ್ರೊ ಯುರಾಲಜಿ ಸಂಸ್ಥೆಗೆ ಒಂದು ಹಾಗೂ ಇಂದಿರಾನಗರದ ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಗೆ ಎಚ್ ಎಎಲ್ ಒಂದು ಆಂಬುಲೆನ್ಸ್‌ ನೀಡಿದೆ. ಇದೇ ಎಚ್ಎಎಲ್ ಕೆಲ ದಿನಗಳ ಹಿಂದಷ್ಟೇ ಆಂದರೆ ಆಗಸ್ಟ್ 6ರಂದು ಸಂಸ್ಥೆಯು ಎರಡು ಆಂಬುಲೆನ್ಸ್‌ ಗಳನ್ನು ಬೌರಿಂಗ್  ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಹಸ್ತಾಂತರಿಸಿತ್ತು. 

ಇನ್ನು ಎಚ್ಎಎಲ್ ನೀಡಿರುವ ಈ ಆಂಬುಲೆನ್ಸ್‌ಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ, ಬೇಸಿಕ್ ಲೈಫ್ ಸಪೋರ್ಟ್ ಸಿಸ್ಟಮ್, ಅನಲಾಗ್ ಆಮ್ಲಜನಕ ವಿತರಣಾ ವ್ಯವಸ್ಥೆ, ಆಟೋ ಲೋಡರ್ ಸ್ಟ್ರೆಚರ್ ಟ್ರಾಲಿ, ಪ್ರತ್ಯೇಕ ವೈದ್ಯರ ಆಸನ ಸೇರಿದಂತೆ ವಿವಿಧ ಸೌಲಭ್ಯಗಳಿವೆ. ಪ್ರಮುಖವಾಗಿ ಆಸ್ಪತ್ರೆಗೆ ರೋಗಿಗಳನ್ನು  ಸಾಗಿಸುವ ವೇಳೆ ವೈದ್ಯಕೀಯ ಮೇಲ್ವಿಚಾರಣೆಯ ಅಗತ್ಯವಿರುವ ರೋಗಿಗಳಿಗೆ ಈ ಆಂಬುಲೆನ್ಸ್‌ಗಳು ವಿಶೇಷವಾಗಿ ಉಪಯುಕ್ತವಾಗಿವೆ.

Stay up to date on all the latest ರಾಜ್ಯ news
Poll
Parliament_House1

ಕೋವಿಡ್-19 ಹರಡುವಿಕೆ ಕಾರಣ ಸಂಸತ್ತಿನ ಮುಂಗಾರು ಅಧಿವೇಶನ ಅವಧಿಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp