ದಕ್ಷಿಣ ಕನ್ನಡ: ಡ್ರಗ್ಸ್ ಪಾರ್ಟಿ-ಮಾಂಸ ದಂಧೆ? ಲಾಡ್ಜ್, ಹೋಮ್ ಸ್ಟೇ, ರೆಸಾರ್ಟ್ ಮೇಲೆ ಪೊಲೀಸರ ಹದ್ದಿನ ಕಣ್ಣು!

ಹೋಂ ಸ್ಟೇ, ರೆಸಾರ್ಟ್ ಮತ್ತು ಲಾಡ್ಜ್ ಗಳಲ್ಲಿ ಡ್ರಗ್ಸ್ ಪಾರ್ಟಿ, ಮಾಂಸ ದಂಧೆ ಮುಂತಾದ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತವೆ ಎಂಬ ಹಿನ್ನೆಲೆಯಲ್ಲಿ ಪೊಲೀಸರು ಮತ್ತಷ್ಟು ಟೈಟ್ ಸೆಕ್ಯೂರಿಟಿ ಹೆಚ್ಚಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಹೋಂ ಸ್ಟೇ, ರೆಸಾರ್ಟ್ ಮತ್ತು ಲಾಡ್ಜ್ ಗಳಲ್ಲಿ ಡ್ರಗ್ಸ್ ಪಾರ್ಟಿ, ಮಾಂಸ ದಂಧೆ ಮುಂತಾದ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತವೆ ಎಂಬ ಹಿನ್ನೆಲೆಯಲ್ಲಿ ಪೊಲೀಸರು ಮತ್ತಷ್ಟು ಟೈಟ್ ಸೆಕ್ಯೂರಿಟಿ ಹೆಚ್ಚಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಅನೈತಿಕ ಚಟುವಟಿಕೆಗಳು ನಡೆಯಬಹುದೆಂದು ಊಹಿಸಿರುವ ಕಮರ್ಷಿಯಲ್ ಸ್ಥಳಗಳ ಪಟ್ಟಿ ಮಾಡಿದ್ದಾರೆ. ಸ್ಥಳೀಯ ಪೊಲೀಸರು ಅವರಿಗೆ ಪ್ರತಿದಿನ ಕರೆ ಮಾಡಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ ಎಂದು ಎಸ್ ಪಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.

ಎಲ್ಲಾ ಹೋಮ್ ಸ್ಟೇ ಮತ್ತು ರೆಸಾರ್ಟ್ ಮತ್ತು ಕೆಲವು ಶಂಕಾಸ್ಪದ ವಸತಿಗೃಹಗಳನ್ನು ಇದರ ವ್ಯಾಪ್ತಿಗೆ ತರಲಾಗಿದೆ, ಆದರೆ ಸದ್ಯ ಕೊರೋನಾ ಭಯದಿಂದ ಯಾವುದೇ ಹೋಮ್ ಸ್ಟೇ ಮತ್ತು ರೆಸಾರ್ಟ್ ಗಳು ತೆರೆದಿಲ್ಲ, ಹೀಗಿದ್ದರೂ ನಾವು ಲಾಡ್ಜ್ ಮತ್ತು ನೋಂದಣಿಯಾಗದ ಹೋಮ್ ಸ್ಟೇ ಗಳ ಮೇಲೆ ನಿಗಾವಹಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ನಗರದಿಂದ ಹೊರವಲಯದಲ್ಲಿರುವ ಹೋಮ್ ಸ್ಟೇ ಮತ್ತು ರೆಸಾರ್ಟ್ ಗಳು ಅನೈತಿಕ ಚಟುವಟಿಕೆಗಳ ಸ್ವರ್ಗವಾಗಿವೆ, ಇಲ್ಲಿ ಡ್ರಗ್ಸ್ ಪಾರ್ಟಿ, ಮಾಂಸ ದಂಧೆ ಮತ್ತು ಜೂಜು ನಡೆಯುತ್ತದೆ, ಬಹುತೇಕ ಹೋಮ್ ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಿಲ್ಲ,  ಇಂತಹುಗಳು ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳುತ್ತಿವೆ.

ಹತ್ತಾರು ಎಕರೆ ಪ್ರದೇಶಗಳಲ್ಲಿ ಮತ್ತು ದಪ್ಪ ಹಸಿರಿನ ಹೊದಿಕೆಯಡಿಯಲ್ಲಿ ವಿಶಾಲವಾದ ಪ್ರದೇಶಗಳಲ್ಲಿ ರೆಸಾರ್ಟ್ ಹೋಮ್ ಸ್ಟೇಗಳಿರುತ್ತವೆ, ಹೀಗಾಗಿ ಇದು ಪೊಲೀಸರ ಕೆಲಸವನ್ನು ಕಷ್ಟಕರವಾಗಿಸುತ್ತದೆ. ಈ ಸಂಬಂಧ ಇಲ್ಲಿಯವರೆಗೆ ನಮಗೆ ಯಾವುದೇ ದೂರು ಬಂದಿಲ್ಲ, ಆದರೆ ಈ ರೆಸಾರ್ಟ್ ಮತ್ತು ಹೋಮ್ ಸ್ಟೇ ಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.

ಜಿಲ್ಲೆಯ ಎಲ್ಲಾ ಹೋಂಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಲು ಮತ್ತು ಸ್ಥಳೀಯ ಸಂಸ್ಥೆಗಳು ಮತ್ತು ನ್ಯಾಯವ್ಯಾಪ್ತಿ ಪೊಲೀಸರಿಂದ ಎನ್ ಓಸಿ ಪಡೆದುಕೊಳ್ಳುವಂತೆ ಡಿಸಿ ಕೆವಿ ರಾಜೇಂದ್ರ ಸೂಚಿಸಿದ್ದಾರೆ.

ಹೋಮ್ ಸ್ಟೇ ಮತ್ತು ಲಾಡ್ಜ್ ಗಳಲ್ಲಿ ಅನೈತಿಕ ಚಟುವಟಿಕೆ ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ 32 ಹೋಮ್ ಸ್ಟೇಗಳು ಮಾತ್ರ ನೋಂದಣಿಯಾಗಿವೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com