ಚೀನಾಗಿಂತ ದೇಶೀಯ ಕಾರ್ಖಾನೆ ನಿರ್ಮಿತ ಈ ರೈಲು ಚಕ್ರಗಳು ಅಗ್ಗ...!

ದೇಶದಲ್ಲಿ ಹಂತ ಹಂತವಾಗಿ ಚೀನಾದ ವಸ್ತುಗಳನ್ನು ಬಹಿಷ್ಕರಿಸುತ್ತಿದ್ದಂತೆಯೇ ಇದ್ದ ದೇಶೀಯ ವಸ್ತುಗಳಿಗೆ ಬೇಡಿಕೆಗಳಿ ದಿನಕಳೆದಂತೆ ಬೇಡಿಕೆಗಳು ಹೆಚ್ಚಾಗುತ್ತಿದ್ದು, ಆಕರ್ಷಿತ ದರಗಳಲ್ಲಿ ಮಾರಾಟ ಮಾಡಲು ಕಾರ್ಖಾನೆಗಳು ಮುಂದಾಗುತ್ತಿವೆ. 

Published: 16th September 2020 01:59 PM  |   Last Updated: 16th September 2020 01:59 PM   |  A+A-


Workers at the Rail Wheel Factory in Yelahanka, which turned 37 on Tuesday

ರೈಲ್ವೇ ಗಾಲಿ ಕಾರ್ಖಾನೆ

Posted By : Manjula VN
Source : The New Indian Express

ಬೆಂಗಳೂರು: ದೇಶದಲ್ಲಿ ಹಂತ ಹಂತವಾಗಿ ಚೀನಾದ ವಸ್ತುಗಳನ್ನು ಬಹಿಷ್ಕರಿಸುತ್ತಿದ್ದಂತೆಯೇ ಇದ್ದ ದೇಶೀಯ ವಸ್ತುಗಳಿಗೆ ಬೇಡಿಕೆಗಳಿ ದಿನಕಳೆದಂತೆ ಬೇಡಿಕೆಗಳು ಹೆಚ್ಚಾಗುತ್ತಿದ್ದು, ಆಕರ್ಷಿತ ದರಗಳಲ್ಲಿ ಮಾರಾಟ ಮಾಡಲು ಕಾರ್ಖಾನೆಗಳು ಮುಂದಾಗುತ್ತಿವೆ. 

ನಗರದ ಯಲಹಂಕದಲ್ಲಿರುವ ರೈಲ್ವೇ ಗಾಲಿ ಕಾರ್ಖಾನೆಯು 37ನೇ ವರ್ಷಕ್ಕೆ ಕಾಲಿಡುತ್ತಿದ್ದು, ಈ ಸಾಧನೆಯ ನಡುವಲ್ಲೇ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾರ್ಖಾನೆಯಲ್ಲಿ ಉತ್ಪಾದಿಸಲಾಗುತ್ತಿರುವ ಚಕ್ರಗಳ ವೆಚ್ಚವನ್ನು ಶೇ.13ರಷ್ಟು ಕಡಿತಗೊಳಿಸಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚೀನಾದ ಉತ್ಪಾದಿತ ರೈಲು ಚಕ್ರಗಳಿಗಿಂತಲೂ ಅಗ್ಗದ ದರದಲ್ಲಿ ದೇಶೀಯ ಕಾರ್ಖಾನೆ ನಿರ್ಮಿತ ರೈಲುಗಳ ಚಕ್ರಗಳು ಲಭ್ಯವಾಗಲಿವೆ. 

ಕಾರ್ಖಾನೆಯನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಸೆಪ್ಟೆಂಬರ್ 15, 1984ರಲ್ಲಿ ಉದ್ಘಾಟನೆ ಮಾಡಿದ್ದರು. ಕಾರ್ಖಾನೆಯೂ ಈಗಲೂ ವಿಸ್ತಾರವಾದಂತ ಪ್ರದೇಶದಲ್ಲಿ ಸಂಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಕೊರೋನಾ ಸಾಂಕ್ರಾಮಿಕ ಸಮಯದಲ್ಲೂ ಕಾರ್ಖಾನೆಯಲ್ಲಿ ಪ್ರತಿನಿತ್ಯ 671 ರೈಲು ಚಕ್ರಗಳು ಮತ್ತು 281 ಆ್ಯಕ್ಲಲ್ಗಳನ್ನು ತಯಾರು ಮಾಡಲಾಗುತ್ತಿದೆ. 

ರೈಲ್ವೇ ಗಾಲಿ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ರಾಜೀವ್ ಕುಮಾರ್ ವ್ಯಾಸ್ ಮಾತನಾಡಿ, ಕಾರ್ಖಾನೆಯಲ್ಲಿ ಆರ್‌ಡಬ್ಲ್ಯುಎಫ್ ಎರಡು ರೀತಿಯ ಚಕ್ರಗಳನ್ನು ಉತ್ಪಾದಿಸಲಾಗುತ್ತಿದೆ, ಒಂದು ಸಾಮಾನ್ಯ ರೈಲುಗಳಿಗೆ ಬಳಕೆ ಮಾಡುವ ಚಕ್ರಗಳು(ಬಾಕ್ಸ್ಎನ್), ಮತ್ತೊಂದು ಕಂಟೇನರ್ ವ್ಯಾಗನ್ (ಬಿಎಲ್‌ಸಿ) ಆಗಿದೆ. “ರೈಲ್ವೆ ಇಲಾಖೆ ಜೊತೆಗೆ ಇತರೆ ಗ್ರಾಹಕರಿಗೂ ಆರ್‌ಡಬ್ಲ್ಯುಎಫ್ ಮಾರಾಟ ಮಾಡಲಾಗುತ್ತದೆ. ಬಾಕ್ಸ್ಎನ್ ಚಕ್ರದ ಬೆಲೆ ಇದೀಗ ರೂ. 1,86,936 ಆಗಿದೆ. ಚೀನಾದ ಪ್ರತಿ ಚಕ್ರದ ಬೆಲೆ ರೂ. 2,20,431 ಆಗಿದೆ. ಬಿಎಲ್‌ಸಿ ಚಕ್ರದ ಬೆಲೆ ರೂ.1,68,000 ಇದ್ದು, ಈ ಚಕ್ರವನ್ನು ಚೀನಾ ರೂ.1,76,453ಕ್ಕೆ ಮಾರಾಟ ಮಾಡುತ್ತಿದೆ ಎಂದು ಹೇಳಿದ್ದಾರೆ. 

ಕಾರ್ಖಾನೆಯು 2020ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ತನ್ನದ ಆದ ಮರಳು ಸುಧಾರಣಾ ಘಟಕವನ್ನು ಸ್ಥಾಪನೆ ಮಾಡುವುದರೊಂದಿಗೆ ಈ ಸಾಧನೆಯನ್ನು ಸಾಧಿಸಿದೆ. ಈ ಬೆಳವಣಿಗೆಯು ಚಕ್ರಗಳ ತಯಾರಿಕೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಬಳಸಿದ ಮರಳನ್ನು ಮರಳಿ ಬಳಕೆ ಮಾಡುವ ಪರಿಸರ ಸ್ನೇಹಿ ಘಟಕ ಇದಾಗಿದೆ. ಚಕ್ರಗಳಿಗೆ ಅಚ್ಚು ಸಿದ್ಧಪಡಿಸಿದ ಬಳಿಕ, ಚಕ್ರವನ್ನು ಬಿತ್ತರಿಸಲು ಬಿಸಿಯಾದ ಲೋಕವನ್ನು ಅದರ ಮೇಲೆ ಹಾಕಲು ಮೊದಲು ಮರಳನ್ನು ಬಳಕೆ ಮಾಡಲಾಗುತ್ತದೆ. ಇಲ್ಲಿಯವರೆಗೆ 1,250 ಮೆಟ್ರಿಕ್ ಟನ್ ಗಳಷ್ಟು ಮರಳನ್ನು ಸಿದ್ಧಪಡಿಸಲಾಗಿದೆ. ಮರಳಿಗಾಗಿ ಆಂಧ್ರಪ್ರದೇಶ ರಾಜ್ಯಕ್ಕೆ ನೀಡಲಾಗುತ್ತಿರುವ ಹಣವನ್ನು ಇದರಿಂದ ಉಳಿದಂತಾಗಿದೆ ಎಂದು ತಿಳಿಸಿದ್ದಾರೆ. 

ಈಗಾಗಲೇ ಕಾರ್ಖಾನೆಯಲ್ಲಿ ಬಳಕೆ ಮಾಡಿದ 5,000ಮೆಟ್ರಿಕ್ ಟನ್ ಹೆಚ್ಚುವರಿಯಾಗಿ ಉಳಿದಿದೆ. ಘಟಕ ಸ್ಥಾಪನೆಯಿಂದ ನಮ್ಮ ಮರಳನ್ನೇ ಶೇ.90ರಷ್ಟು ಮಾಡಿಕೊಳ್ಳುವಂತಾಗಿದೆ. ಹಣಕಾಸು ವರ್ಷದ ಆರಂಭದಿಂದ 5 ತಿಂಗಳಲ್ಲಿ ಚಕ್ರಗಳ ದರವನ್ನು ಇಳಿಕೆ ಮಾಡಿರುವುದು ಸಾಧನೆಯಾಗಿದೆ. ಇದೀಗ ನೂತನವಾಗಿ ರೂ.329 ಕೋಟಿ ವೆಚ್ಚದಲ್ಲಿ ಆಕ್ಸಲ್ ಫೋರ್ಜಿಂಗ್ ಕಾಂಪ್ಲೆಕ್ಸ್ ಅನ್ನು ಸ್ಥಾಪಿಸಲಾಗುತ್ತಿದ್ದು, ಈ ಕಾರ್ಯ 2021 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದಿದ್ದಾರೆ. 

Stay up to date on all the latest ರಾಜ್ಯ news
Poll
Parliament_House1

ಕೋವಿಡ್-19 ಹರಡುವಿಕೆ ಕಾರಣ ಸಂಸತ್ತಿನ ಮುಂಗಾರು ಅಧಿವೇಶನ ಅವಧಿಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp