ಡ್ರಗ್ಸ್ ದಂಧೆ ಪ್ರಕರಣ: ನಟಿ ರಾಗಿಣಿಗೆ ಜೈಲಿನಲ್ಲಿ ನಿದ್ದೆ ಇಲ್ಲ, ಮಧ್ಯರಾತ್ರಿವರೆಗೂ ಕಣ್ಣೀರು ಹಾಕಿದ ಬೆಡಗಿ!

ಹಲವು ವರ್ಷಗಳಿಂದ ಕನ್ನಡ ಚಲನಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದ ನಟಿ ರಾಗಿಣಿ ದ್ವಿವೇದಿ, ಇದೀಗ ಮಾದಕ ವಸ್ತು ಮಾರಾಟ ಜಾಲದ ಆರೋಪ ಹೊತ್ತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಾಮಾನ್ಯ ವಿಚಾರಣಾಧೀನ ಕೈದಿಯಾಗಿ ಮೊದಲ ದಿನ ಕಳೆದಿದ್ದಾರೆ. 

Published: 16th September 2020 12:51 PM  |   Last Updated: 16th September 2020 01:35 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ಹಲವು ವರ್ಷಗಳಿಂದ ಕನ್ನಡ ಚಲನಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದ ನಟಿ ರಾಗಿಣಿ ದ್ವಿವೇದಿ, ಇದೀಗ ಮಾದಕ ವಸ್ತು ಮಾರಾಟ ಜಾಲದ ಆರೋಪ ಹೊತ್ತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಾಮಾನ್ಯ ವಿಚಾರಣಾಧೀನ ಕೈದಿಯಾಗಿ ಮೊದಲ ದಿನ ಕಳೆದಿದ್ದಾರೆ. 

ಜೈಲಿನಲ್ಲಿ ಬೆಳಗಿನ ತಿಂಡಿ ಸೇವನೆ ಮಾಡಲು ರಾಗಿಣಿ ನಿರಾಕರಿಸಿದ್ದು, ನಂತರ ಬೆನ್ನು ನೋವು ಎಂದು ಹೇಳಿದ್ದಾರೆ. ಮಧ್ಯಾಹ್ನ ಊಟ ಸೇವನೆ ಮಾಡಿದ ಅವರು, ಕೆಲ ಕಾಲ ನಿದ್ರೆ ಮಾಡಿದ್ದಾರೆ. ಬಳಿಕ ಕಾರಾಗೃಹಕ್ಕೆ ಕರೆತರುವ ವೇಳೆ ಇತರೆ ಕೈದಿಗಳು ಅವರನ್ನು ಮಾತನಾಡಿಸಲು ಮುಂದಾಗಿದ್ದಾರೆ. ಆದರೆ, ಅವರಾರೊಂದಿಗೂ ರಾಗಿಣಿ ಮಾತನಾಡಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ನಡುವೆ ಜೈಲಿನ ಭದ್ರತಾ ಸಿಬ್ಬಂದಿಗಳು ಮುಂಜಾಗ್ರತಾ ಕ್ರಮವಾಗಿ ಹೆಚ್ಚು ಸಿಬ್ಬಂದಿಗಳನ್ನು ನಿಯೋಜನೆಗೊಳಿಸಿದ್ದಾರೆಂದು ಹೇಳಲಾಗುತ್ತಿದೆ. 

ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ ಬಳಿಕ ಸೋಮವಾರ ರಾತ್ರಿ ಕಣ್ಣೀರಿಡುತ್ತಲೇ ಜೈಲು ಸೇರಿದ ನಟಿ ರಾಗಿಣಿಯವರು, ಕಾರಾಗೃಹ ಆವರಣದ ಹೊಸ ಕಟ್ಟಡದ ಬ್ಯಾರಕ್ ನಲ್ಲಿ 21 ದಿನಗಳ ಕಡ್ಡಾಯ ಕ್ವಾರಂಟೈನ್ ನಲ್ಲಿದ್ದಾರೆ. 

ಕೊರೋನಾ ಪರೀಕ್ಷೆಯಲ್ಲಿ ಸೋಂಕು ಇಲ್ಲ ಎಂದು ದೃಢಪಟ್ಟಿದ್ದೇ ಆದರೆ, ಬಳಿಕ ಅವರನ್ನು ಸಾಮಾನ್ಯ ಕೈದಿಗಳ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ನಡುವೆ ನಟಿ ರಾಗಿಣಿಯವರನ್ನು ಭೇಟಿಯಾಗಲು ಅವರ ಪೋಷಕರು ವಕೀಲಕರೊಂದಿಗೆ ಕಾರಾಗೃಹಕ್ಕೆ ಬೇಟಿ ನೀಡಿದ್ದಾರೆ. ಆದರೆ, ಜೈಲಿನ ಅಧಿಕಾರಿಗಳು ಭೇಟಿಗೆ ಅನುಮತಿ ನೀಡಲು ನಿರಾಕರಿಸಿದ್ದಾರೆ. ಅಲ್ಲದೆ, ಭೇಟಿ ಮಾಡಲು ಇನ್ನೂ ಕೆಲ ದಿನಗಳ ಕಾಲ ಕಾಯಬೇಕೆಂದು ತಿಳಿಸಿದ್ದಾರೆನ್ನಲಾಗುತ್ತಿದೆ. 

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಗಿಣಿಯವರ ತಾಯಿ, ಹಲವು ವರ್ಷಗಳಿಂದ ಚಲನಚಿತ್ರ ರಂಗದಲ್ಲಿ ಮಗಳು ಇದ್ದಾಳೆ. ಯಾವತ್ತೂ ಕೆಟ್ಟ ಹೆಸರು ಬಂದಿಲ್ಲ. ನಮ್ಮ ಆಸ್ತಿಪಾಸ್ತಿ ವಿಚಾರವಾಗಿ ಇಡಿಗೆ ಮಾಹಿತಿ ಕೊಟ್ಟಿದ್ದೇವೆ. ನಮ್ಮ ಬಳಿಯಿರುವುದು ಒಂದೇ ಫ್ಲ್ಯಾಟ್, ರಾಗಿಣಿ ಹೆಣ್ಣು ಸಿಂಹ ಇದ್ದಂತೆ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿದ್ದಾರೆ. 

Stay up to date on all the latest ರಾಜ್ಯ news
Poll
Parliament_House1

ಕೋವಿಡ್-19 ಹರಡುವಿಕೆ ಕಾರಣ ಸಂಸತ್ತಿನ ಮುಂಗಾರು ಅಧಿವೇಶನ ಅವಧಿಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp