ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಕೌನ್ಸಿಲಿಂಗ್ ಮಾಡಲು ಬಿಬಿಎಂಪಿ ನಿರ್ಧಾರ

ಒಂದೆಡೆ ಕೊರೋನಾ ಸೋಂಕು ಭಯ ಮತ್ತೊಂದೆಡೆ ಸಾಮಾಜಿಕ ಬಹಿಷ್ಕಾರ ಎರಡೂ ಭೀತಿ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮಾನಸಿಕ ರೋಗಗಳನ್ನು ಆರಂಭಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸೋಂಕಿನಿಂದ ಗುಣಮುಖರಾದ ಜನರಿಗೆ ಕೌನ್ಸಿಲಿಂಗ್ ಮಾಡಲು ಬಿಬಿಎಂಬಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಒಂದೆಡೆ ಕೊರೋನಾ ಸೋಂಕು ಭಯ ಮತ್ತೊಂದೆಡೆ ಸಾಮಾಜಿಕ ಬಹಿಷ್ಕಾರ ಎರಡೂ ಭೀತಿ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮಾನಸಿಕ ರೋಗಗಳನ್ನು ಆರಂಭಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸೋಂಕಿನಿಂದ ಗುಣಮುಖರಾದ ಜನರಿಗೆ ಕೌನ್ಸಿಲಿಂಗ್ ಮಾಡಲು ಬಿಬಿಎಂಬಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ. 

ಕೌನ್ಸಿಲಿಂಗ್ ವೇಳೆ ಸೋಂಕಿನಿಂದ ಗುಣಮುಖರಾದವರಿಗೆ ಪ್ಲಾಸ್ಮಾ ದಾನ ಕುರಿತಂತೆ ಮಾಹಿತಿ ನೀಡಿ ಜನರು ಪ್ಲಾಸ್ಮಾ ದಾನ ಮಾಡಲು ಪ್ರೇರೇಪಿಸುವ ಕಾರ್ಯಗಳೂ ನಡೆಯಲಿದೆ. ಪ್ಲಾಸ್ಮಾ ಚಿಕಿತ್ಸೆ ಪರಿಣಾಮಕಾರಿಯಾಗಿದೆ ಎಂದು ಐಸಿಎಂಆರ್ ಹೇಳದೇ ಹೋದರೂ ರಾಜ್ಯದಲ್ಲಿ ಈ ಚಿಕಿತ್ಸೆಗೆ ಉತ್ತಮ ಫಲಿತಾಂಶ ಬರುತ್ತಿದ್ದು, ಈ ಚಿಕಿತ್ಸೆಮುಂದುವರೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರು ಹೇಳಿದ್ದಾರೆ. 

ಕೊರೋನಾ ಪಾಸಿಟಿವ್ ಬಂದ ಕೂಡಲೇ ಜನರು ಹೆಚ್ಚೆಚ್ಚು ಭೀತಿಗೊಳಗಾಗುತ್ತಿದ್ದಾರೆ. ಅಂತಹವರಿಗೆ ಸೂಕ್ತ ಕೌನ್ಸಿಲಿಂಗ್ ನಡೆಸುವ ಅಗತ್ಯವಿದೆ. ಸೋಂಕಿನಿಂದ ಗುಣಮುಖರಾದ ಬಳಿಕ ವ್ಯಕ್ತಿ ಪ್ಲಾಸ್ಮಾ ದಾನ ಮಾಡಬಹುದಾಗಿದೆ. ಇದು ಇತರೆ ಸೋಂಕಿತರು ಗುಣಮುಖರಾಗಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ. 

ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾತನಾಡಿ, ಕೊರೋನಾ ಸೋಂಕು ದೃಢಪಡುತ್ತಿದ್ದಂತೆಯೇ ಸೋಂಕಿತರುಮನೆಯಲ್ಲಿಯೇ ಇರಲಿ, ಕೋವಿಡ್ ಕೇರ್ ಕೇಂದ್ರ ಅಥವಾ ಆಸ್ಪತ್ರೆಯಲ್ಲಿ ಸಾಮಾಜಿಕ ಬಹಿಷ್ಕಾರ ಕುರಿತು ಭೀತಿಗೊಳಗಾಗುತ್ತಿದ್ದಾರೆ. ಹೀಗಾಗಿ ಗುಣಮುಖರಾದ ಬಳಿಕ ಇತರರಿಗೆ ಸಹಾಯ ಮಾಡಲು ಮುಂದಾಗುತ್ತಿಲ್ಲ ಎಂದು ಹೇಳಿದ್ದಾರೆ. 

ಪ್ಸಾಸ್ಮಾ ದಾನ ಮಾಡಲು ಇಂತಹವರಿಗೆ ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಗಟ್ಟಿಗೊಳ್ಳುವಂತೆ ಮಾಡಬೇಕು. ಪ್ಲಾಸ್ಮಾ ದಾನ ಮಾಡಿದರೆ, ನಿಮ್ಮ ಕುಟುಂಬ ಸದಸ್ಯರಿಗೂ ಕೂಡ ಸಹಾಯವಾಗಲಿದೆ ಎಂಬುದನ್ನು ಕೌನ್ಸಿಲಿಂಗ್ ವೇಳೆ ತಿಳಿಸುತ್ತೇವೆ. ಸೋಂಕಿನಿಂದ ಗುಣಮುಖರಾದವರೊಂದಿಗೆ ಆರೋಗ್ಯಾಧಿಕಾರಿಗಳು ಮಾತುಕತೆ ನಡೆಸಲಿದ್ದು, ಈ ವೇಳೆ ಅವರ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ನೀಡಿ, ಉದ್ಯೋಗ, ಜೀವನ, ಕುಟುಂಬದ ಕುರಿತು ಎಲ್ಲಾ ರೀತಿಯಲ್ಲಿ ಸ್ನೇಹಯುತದಿಂದ ಮಾತನಾಡುತ್ತಾರೆ. ಬೆಳಗಿನ ಸಮಯದಲ್ಲಿ ವಾಕಿಂಗ್ ಹೋಗುವಂತೆ ಹಾಗೂ ಇತರೆ ಜನರನ್ನು ನೋಡಿ ಅವರು ನಿಮಗೆ ತಿಳಿಯದ ವ್ಯಕ್ತಿಯಾದರೂ ನಗುಮುಖದಿಂದ ತೋರಿಸುವಂತೆ ಸೂಚಿಸುತ್ತೇವೆ. ನಿಮ್ಮ ದೈಹಿಕ ಬಲವನ್ನು ಅರ್ಥೈಸಿಕೊಂಡು ಕೆಲಸವನ್ನು ಮಾಡುವಂತೆ ಇದೇ ವೇಳೆ ಸಲಹೆಯನ್ನೂ ನೀಡುತ್ತೇವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com