ಬೆಂಗಳೂರು: ಕ್ವೆಸ್ಟ್ ಗ್ಲೋಬಲ್ ಅಂಡ್ ನಾಸ್ಕಾಮ್ ಫೌಂಡೇಶನ್ ನಿಂದ ಬೆಳ್ಳಂದೂರಿನ ಲೇಔಟ್ ದತ್ತು!

ಬೆಳ್ಳಂದೂರಿನ ಮಿಥುನ್ ರೆಡ್ಡಿ ಲೇ ಔಟ್ ನ್ನು ಕ್ವೆಸ್ಟ್ ಗ್ಲೋಬಲ್ ಅಂಡ್ ನಾಸ್ಕಾಮ್ ಫೌಂಡೇಶನ್ ದತ್ತು ಪಡೆದುಕೊಂಡಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಇಲ್ಲಿ ಜೀವನ ಸಾಗಿಸಲು ಕಷ್ಟವಾಗಿರುವ ನಿರ್ಗತಿಕರಿಗೆ ಸಹಾಯ ಮಾಡಲು ವರ್ಷದವರೆಗೆ ಫೌಂಡೇಶನ್ ಅಭಿಯಾನ ಕೈಗೊಂಡಿದೆ.
ಮಿಥುನ್ ರೆಡ್ಡಿ ಲೇ ಔಟ್ ನಿವಾಸಿಗಳು
ಮಿಥುನ್ ರೆಡ್ಡಿ ಲೇ ಔಟ್ ನಿವಾಸಿಗಳು

ಬೆಂಗಳೂರು: ಬೆಳ್ಳಂದೂರಿನ ಮಿಥುನ್ ರೆಡ್ಡಿ ಲೇ ಔಟ್ ನ್ನು ಕ್ವೆಸ್ಟ್ ಗ್ಲೋಬಲ್ ಅಂಡ್ ನಾಸ್ಕಾಮ್ ಫೌಂಡೇಶನ್ ದತ್ತು ಪಡೆದುಕೊಂಡಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಇಲ್ಲಿ ಜೀವನ ಸಾಗಿಸಲು ಕಷ್ಟವಾಗಿರುವ ನಿರ್ಗತಿಕರಿಗೆ ಸಹಾಯ ಮಾಡಲು ವರ್ಷದವರೆಗೆ ಫೌಂಡೇಶನ್ ಅಭಿಯಾನ ಕೈಗೊಂಡಿದೆ. ಫೌಂಡೇಶನ್ ನ ಕಂಪೆನಿ ಸಾಮಾಜಿಕ ಜವಾಬ್ದಾರಿ(ಸಿಎಸ್ ಆರ್)ನಡಿ ಇಲ್ಲಿನ 400ಕ್ಕೂ ಹೆಚ್ಚು ಕುಟುಂಬಗಳ ಸುಮಾರು 2 ಸಾವಿರ ಮಂದಿ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

ದೇಶದ ಈಶಾನ್ಯ ಭಾಗದಿಂದ ಮತ್ತು ನೇಪಾಳದಿಂದ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಳ್ಳಂದೂರಿಗೆ ಬಂದು ನೆಲೆಸುತ್ತಾರೆ. ದೊಡ್ಡಮ್ಮ ದೇವಸ್ಥಾನದ ಹತ್ತಿರ ತಿಮ್ಮ ರೆಡ್ಡಿ ಲೇ ಔಟ್ ನಲ್ಲಿ ಟಿನ್ ಹೌಸ್ ನಲ್ಲಿ ಹಲವರು ಬದುಕುತ್ತಿದ್ದಾರೆ.ಕಳಪೆ ಮೂಲಭೂತ ಸೌಕರ್ಯವಿದ್ದರೂ ಕೂಡ ಈ ಮನೆಗಳಿಗೆ 5ರಿಂದ 6 ಸಾವಿರ ರೂಪಾಯಿ ನೀಡಬೇಕು. ಎಸ್ ಎಸ್ ಎಲ್ ಸಿಯಿಂದ ಡಿಗ್ರಿಯವರೆಗೆ ಓದಿದ್ದರೂ ಆಟೋ ಡ್ರೈವರ್, ಕ್ಯಾಬ್ ಡ್ರೈವರ್, ಹೂ ಮಾರಾಟಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ಕೊರೋನಾ ಇವರ ಬದುಕನ್ನು ಕಂಗೆಡಿಸಿದೆ.

ಇದಕ್ಕಾಗಿ ಫೌಂಡೇಶನ್ ಮೂರು ಹಂತಗಳಲ್ಲಿ ಅವರಿಗೆ ಸಹಾಯ ಮಾಡಲು ಮುಂದಾಗಿದೆ. ರೇಷನ್ ಕಿಟ್ ಗಳನ್ನು ವಿತರಿಸುವುದು, ಕೋವಿಡ್ ನಿಂದ ಹೇಗೆ ರಕ್ಷಿಸಿಕೊಳ್ಳಬೇಕೆಂದು ಹೇಳಿಕೊಡುವುದು, ಶಾಲಾ ಮಕ್ಕಳಿಗೆ ಶಿಕ್ಷಣ ಒದಗಿಸುವುದು, ಪ್ರತಿ ಮನೆಯಲ್ಲಿ ಕನಿಷ್ಠ ಒಬ್ಬ ವಯಸ್ಕರಿಗೆ ಡಿಜಿಟಲ್ ಶಿಕ್ಷಣ ನೀಡುವುದನ್ನು ಒಳಗೊಂಡಿದೆ.ಅಲ್ಲದೆ ನಿವಾಸಿಗಳಿಗೆ ಜೀವನ ನಡೆಸಲು ಅನುಕೂಲವಾಗುವಂತೆ ಕೌಶಲ್ಯ ತರಬೇತಿ, ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹಗಳನ್ನು ನೀಡುವುದು,ಮಹಿಳಾ ಸ್ವಸಹಾಯ ಗುಂಪು ರಚನೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ನಾಸ್ಕಾಮ್ ಫೌಂಡೇಶನ್ ನ ಸಿಇಒ ಅಶೋಕ್ ಪಮಿದಿ, ಸದ್ಯ ನಾವು 18 ವರ್ಷಕ್ಕಿಂತ ಮೇಲ್ಪಟ್ಟವರ ಮೇಲೆ ಗಮನ ಹರಿಸುತ್ತಿದ್ದೇವೆ. ಇಲ್ಲಿರುವವರಲ್ಲಿ ಬಹುತೇಕರು ದಿನಗೂಲಿ ನೌಕರರು. ಪ್ರತಿ ಮನೆಯಲ್ಲಿ ತಲಾ ಒಬ್ಬರಿಗೆ ಉದ್ಯೋಗ ದೊರಕಿಸಿಕೊಡುವುದು ನಮ್ಮ ಉದ್ದೇಶವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com