ನಿಮ್ಮ ಡೇಟಾಗಳನ್ನು ಕಳವು ಮಾಡಲಾಗಿದೆ, ಹಿಂಪಡೆಯಲು ಹಣ ಪಾವತಿಸಿ: ಕೊಡಗು ಮೂಲದ ಐಟಿ ಸಂಸ್ಥೆಗೆ ಸೈಬರ್ ಕಳ್ಳರ ಕನ್ನ!

ಆತನ  ಸರ್ವರ್‌ನಲ್ಲಿ ಏನೋ ತಪ್ಪಾಗಿದ್ದು ಆತ ತನ್ನ ಫೋಲ್ಡರ್‌ಗಳನ್ನು ತೆರೆಯಲು ಸಾಧ್ಯವಾಗಿರಲಿಲ್ಲ. ಆದರೆ ಅದೊಂದು ಸಾಮಾನ್ಯ ‘ಸಿಸ್ಟಮ್ ಎರರ್’ ಮಾತ್ರವೇ ಆಗಿರಲಿಲ್ಲ. ಅದಾಗಿ ಕೆಲ ಸಮಯದಲ್ಲಿ ಅವರ ಕಂಪ್ಯೂಟರ್ ಪರದೆಯಲ್ಲಿ ಒಂದು ಸಂದೇಶ ಅಥವಾ ಎಚ್ಚರಿಕೆ ಕಾಣಿಸಿಕೊಂಡಿದೆ.
ನಿಮ್ಮ ಡೇಟಾಗಳನ್ನು ಕಳವು ಮಾಡಲಾಗಿದೆ, ಹಿಂಪಡೆಯಲು ಹಣ ಪಾವತಿಸಿ: ಕೊಡಗು ಮೂಲದ ಐಟಿ ಸಂಸ್ಥೆಗೆ ಸೈಬರ್ ಕಳ್ಳರ ಕನ್ನ!

ಮಡಿಕೇರಿ: ಆತನ  ಸರ್ವರ್‌ನಲ್ಲಿ ಏನೋ ತಪ್ಪಾಗಿದ್ದು ಆತ ತನ್ನ ಫೋಲ್ಡರ್‌ಗಳನ್ನು ತೆರೆಯಲು ಸಾಧ್ಯವಾಗಿರಲಿಲ್ಲ. ಆದರೆ ಅದೊಂದು ಸಾಮಾನ್ಯ  ‘ಸಿಸ್ಟಮ್ ಎರರ್’  ಮಾತ್ರವೇ ಆಗಿರಲಿಲ್ಲ. ಅದಾಗಿ ಕೆಲ ಸಮಯದಲ್ಲಿ ಅವರ ಕಂಪ್ಯೂಟರ್ ಪರದೆಯಲ್ಲಿ ಒಂದು ಸಂದೇಶ ಅಥವಾ ಎಚ್ಚರಿಕೆ ಕಾಣಿಸಿಕೊಂಡಿದೆ: “ನಿಮ್ಮ ಫೈಲ್‌ಗಳನ್ನು ಹಿಂಪಡೆಯಬಹುದು, ಆದರೆ ನೀವು ಪಾವತಿಸಬೇಕಾಗುತ್ತದೆ ...!”

ಮಡಿಕೇರಿಯ ಕುಶಾಲನಗರ 'ಸನ್ ಮೈಕ್ರೋ ಟೆಕ್ ಐಟಿ ಸೊಲ್ಯೂಷನ್ಸ್' ಕಂಪನಿಯ ಸಿಬ್ಬಂದಿ ತಮ್ಮ ಡೇಟಾ ಕಳವಾಗಿರುವುದನ್ನು ಕಂಡುಕೊಂಡಿದ್ದಾರೆ. ಸೈಬರ್ ಕಳ್ಳರು ಅವರ ಡೇತಾಗಳನ್ನು ಕಳವು ಮಾಡಿದ್ದಾರೆ ಎನ್ನುವುದು ಅವರ ಗಮನಕ್ಕೆ ಬಂದಿತ್ತು. ಹಾಗೂ ಫೋಲ್ಡರ್‌ಗಳನ್ನು ಅನ್ಲಾಕ್ ಮಾಡಲು ದುಬಾರಿ  "ಬೆಲೆ" ನೀಡುವಂತೆ ಕೇಳಲಾಗಿತ್ತು.

ಕೊಡಗು ಜಿಲ್ಲೆಯಲ್ಲಿ ಈ ಬಗೆಯ ಸೈಬರ್ ಕ್ರೈಂ ದೂರು ಇದು ಮೊದಲನೆಯದಾಗಿದೆ. . ಇದು ವಿಶ್ವದಾದ್ಯಂತ ಕಾರ್ಪೊರೇಟ್ ಭದ್ರತಾ ತಂಡಗಳನ್ನು ಕಾಡುವ ಹೊಸ ವಾಸ್ತವವಾಗಿದ್ದು ಕ್ರೆಡಿಟ್ ಕಾರ್ಡ್‌ಗಳು  ಡೇಟಾ ಸೈಬರ್ ಅಪರಾಧಿಗಳಿಗೆ ಸುಲಿಗೆಯ ಸಾಧನವಾಗಿ ಮಾರ್ಪಟ್ಟಿದೆ. ಕಂಪನಿಯ ಸಿಬ್ಬಂದಿ ಸರ್ವರ್ ಮೂಲಕ ಎಲ್ಲಾ ಸಿಸ್ಟಮ್ ಡೇಟಾವನ್ನು ಕದ್ದ ‘ರಾನ್ಸಮ್‌ವೇರ್.ಒಗ್ಡೊ(Ransomware.ogdo)’ ವೈರಸ್ ಅನ್ನು ಪತ್ತೆ ಮಾಡಿದ್ದಾರೆ. ಎಚ್ಚರಿಕೆ ಸಂದೇಶವು, “ಚಿಂತಿಸಬೇಡಿ, ನಿಮ್ಮ ಎಲ್ಲಾ ಫೈಲ್‌ಗಳನ್ನು ನೀವು ಹಿಂಪಡೆಯಬಹುದು! ನಿಮ್ಮ ಎಲ್ಲಾ ಫೈಲ್‌ಗಳು ಚಿತ್ರಗಳು, ಡೇಟಾಬೇಸ್‌ಗಳು, ಡಾಕ್ಯುಮೆಂಟ್‌ಗಳು ಮತ್ತು ಇತರ ದಾಖಲೆಗಳನ್ನು ಪ್ರಬಲ ಎನ್‌ಕ್ರಿಪ್ಶನ್ ಮತ್ತು ಯುನಿಕ್ ಕೀಗಳ ಮೂಲಕ ಎನ್‌ಕ್ರಿಪ್ಟ್ ಮಾಡಲಾಗಿದೆ ... ಫೈಲ್‌ಗಳನ್ನು ಮರುಪಡೆಯುವ ಏಕೈಕ ವಿಧಾನವೆಂದರೆ ಡೀಕ್ರಿಪ್ಟ್ ಟೂಲ್ ಮತ್ತು ನಿಮಗಾಗಿ ಯುನಿಕ್ ಕೀಯನ್ನು ಖರೀದಿಸುವುದು.  ಖಾಸಗಿ ಕೀಲಿಯ ಬೆಲೆ ಮತ್ತು ಡೀಕ್ರಿಪ್ಟ್ ಸಾಫ್ಟ್‌ವೇರ್ ಸೇರಿ  80 980 ಆಗಿದೆ!"  ಎಂದಿದೆ.

ಇದಲ್ಲದೆ ಕಂಪನಿಯು  72 ಗಂಟೆಗಳ ಒಳಗೆ ಇಮೇಲ್ ಮೂಲಕ ಹ್ಯಾಕರ್ ಅನ್ನು ಸಂಪರ್ಕಿಸಿದ್ದಾದರೆ ಕಂಪನಿಗೆ 50% ರಿಯಾಯಿತಿಯನ್ನು ನೀಡುವುದಾಗಿ ಸಹ ಸಂದೇಶದಲ್ಲಿ ಹೇಳಲಾಗಿದೆ. 

ನಾಲ್ಕು ಸಂಸ್ಥೆಗಳ ಡೇಟಾ ಅಪಾಯದಲ್ಲಿ!!

“ನೀವು ಪಾವತಿಸದೆ ನಿಮ್ಮ ಡೇಟಾವನ್ನು ಎಂದಿಗೂ ಮರುಪಡೆಯಲು ಸಾಧ್ಯವಿಲ್ಲ ಎನ್ನುವುದನ್ನು ಗಮನಿಸಿನಿಮಗೆ 6 ಗಂಟೆಗಳಿಗಿಂತ ಮುನ್ನ ಉತ್ತರ ಸಿಕ್ಕದಿದ್ದರೆ ನಿಮ್ಮ ಇಮೇಲ್ ‘ಸ್ಪ್ಯಾಮ್’ ಅಥವಾ ‘ಜಂಕ್’ ಫೋಲ್ಡರ್ ಪರಿಶೀಲಿಸಿ. ಈ ಸಾಫ್ಟ್‌ವೇರ್ ಪಡೆಯಲು ನಿಮಗೆಮ್ಮ ಇ-ಮೇಲ್: helpmanager@mail.ch ನಲ್ಲಿ ಬರೆಯಬೇಕು. ನಮ್ಮನ್ನು ಸಂಪರ್ಕಿಸಲು ಇಮೇಲ್ ವಿಳಾಸವನ್ನು ಕಾಯ್ದಿರಿಸಿ: restoremanager@airmail.cc, ”ಎಂಬ ಸಂದೇಶವನ್ನು ಸೈಬರ್ ಕಳ್ಳರು ಕಳುಹಿಸಿದ್ದಾರೆ. 

ಸೈಬರ್ ಫಿಶಿಂಗ್‌ಗೆ ಒಳಪಟ್ಟ ಸರ್ವರ್‌ನಲ್ಲಿ ಆದಾಯ ತೆರಿಗೆ ಮಾಹಿತಿ, ನಾಲ್ಕು ಕಂಪನಿಗಳ ಮಾರಾಟ ಮತ್ತು ಖರೀದಿ ದತ್ತಾಂಶಗಳು ಸೇರಿವೆ - ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್, ಸನ್ ಮೈಕ್ರೋ ಟೆಕ್ ಐಟಿ ಸೊಲ್ಯೂಷನ್,  ಸನ್ ಮೈಕ್ರೋ ಟೆಕ್ ಕಂಪ್ಯೂಟರ್ ಸರ್ವಿಸ್ ಮತ್ತು ಮೈಕ್ರೋ ಟೆಕ್ ಐಟಿ ಗೆ ಸೇರಿದ ದತ್ತಾಂಶಗಳಿದ್ದು ಅವೆಲ್ಲವೂ ಸೈಬರ್ ಕಳ್ಲರ ಪಾಲಾಗಿದೆ.

“ಅಜ್ಞಾತ ಇಮೇಲ್‌ಗಳ ಕ್ಲಿಕ್‌ಗಳು ಅಂತಹ ಹ್ಯಾಕಿಂಗ್‌ಗೆ ಕಾರಣವಾಗುತ್ತವೆ. ಜನರು ಅನುಮಾನಾಸ್ಪದ ಐಡಿಗಳು ಮತ್ತು ವ್ಯಕ್ತಿಗಳಿಂದ ಇಮೇಲ್‌ಗಳನ್ನು ಸ್ವೀಕರಿಸಿದ್ದಾದರೆ ಅಂತಹಾ ಮೇಲ್ ಓಪನ್ ಮಡಬಾರದು." ಕೊಡಗು ಜಿಲ್ಲಾ ಐಟಿ ಅಸೋಸಿಯೇಶನ್ ಅಧ್ಯಕ್ಷರೂ ಆಗಿರುವ ಚಂದ್ರಶೇಖರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com