ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕೋಲಾರ ಟೊಮೊಟೊಗೆ ಭಾರೀ ಬೇಡಿಕೆ

ಕೋಲಾರ ಟೊಮೊಟೊ ಬೆಳೆಗಾರರು ಅತ್ಯಂತ ಸಂತಸವಾಗಿದ್ದಾರೆ. ಅವರು ಬೆಳೆದ ಬೆಳೆಗೆ ಕೇವಲ ನೆರೆ ರಾಜ್ಯಗಳಲ್ಲದೇ ವಿದೇಶಗಳಲ್ಲೂ ಭಾರೀ ಬೇಡಿಕೆ ಸೃಷ್ಟಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲಾರ: ಕೋಲಾರ ಟೊಮೊಟೊ ಬೆಳೆಗಾರರು ಅತ್ಯಂತ ಸಂತಸವಾಗಿದ್ದಾರೆ. ಅವರು ಬೆಳೆದ ಬೆಳೆಗೆ ಕೇವಲ ನೆರೆ ರಾಜ್ಯಗಳಲ್ಲದೇ ವಿದೇಶಗಳಲ್ಲೂ ಭಾರೀ ಬೇಡಿಕೆ ಸೃಷ್ಟಿಯಾಗಿದೆ.

ಬಾಂಗ್ಲಾ ದೇಶದ ಗಡಿಯಲ್ಲೂ ಕೋಲಾರ ಟೊಮೊಟೊ ದರ್ಬಾರ್ ನಡೆಸುತ್ತಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿದಿನ 6 ಸಾವಿರ ಕ್ವಿಂಟಾಲ್ ಟೊಮೊಟೊ ಬರುತ್ತದೆ.  ಕೊರೋನಾ ಆರಂಭವಾಗುವ ಮುನ್ನ ವಾರ್ಷಿಕವಾಗಿ 400 ಕೋಟಿ ರು ವ್ಯಾಪಾರ
ವಹಿವಾಟು ನಡೆಯುವ ಮೂಲಕ ಏಷ್ಯಾದ ಅತಿ ದೊಡ್ಡ ಟೊಮೊಟೊ ಮಾರುಕಟ್ಟೆ ಎಂದು ಪ್ರಸಿದ್ಧವಾಗಿತ್ತು.

ಜಿಲ್ಲೆಯಲ್ಲಿ10 ಸಾವಿರ ಎಕರೆಗೂ ಮೇಲೆ ಟೊಮೊಟೋ ಬೆಳೆಯಲಾಗುತ್ತದೆ, ಆದರೆ ಕೊರೋನಾ ಕಾರಣದಿಂದ ಈ ವರ್ಷ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ, ಮುಳಬಾಗಲು ಮತ್ತು ಶ್ರೀನಿವಾಸಪುರ ತಾಲೂಕುಗಳಲ್ಲಿ ಅತಿ ಹೆಚ್ಚು ಬೆಳೆಯಲಾಗುತ್ತದೆ. 6 ಸಾವಿರ ಕ್ವಿಂಟಾಲ್ ಗೆ ಬದಲು 4 ಸಾವಿರ ಕ್ವಿಂಟಾಲ್ ಟೊಮೊಟೊ ಪ್ರತಿದಿನ ಮಾರುಕಟ್ಟೆಗೆ ಬರುತ್ತಿದೆ ಎಂದು ಕೋಲಾರ ಎಪಿಎಂಸಿ ಅಧ್ಯಕ್ಷ ಬಿ ವೆಂಕಟೇಶ್ ತಿಳಿಸಿದ್ದಾರೆ. 

ಕೋಲಾರ ಟೊಮೊಟೊ ಬೆಳೆಗಾರರು ಬಾಂಗ್ಲಾದೇಶ, ಪಾಕಿಸ್ತಾನ, ಆಪ್ಘಾನಿಸ್ತಾನ ಮತ್ತು ಚೀನಾ ಗಳಿಗೆ ರಪ್ತು ಮಾಡಲಾಗುತ್ತಿತ್ತು, ಲಾಕ್ ಡೌನ್ ತೆರವಿನ ನಂತರ ಕಳೆದ ಕೆಲವು ವಾರಗಳಿಂದ ಪ್ರತಿದಿನ 400 ಟನ್ ಟೊಮೊಟೊ ನೆರೆಯ ದೇಶಗಳಿಗೆ ರವಾನೆ ಮಾಡಲಾಗುತ್ತಿದೆ.

ಪ್ರತಿದಿನ 20 ಲಾರಿ ಟೊಮೊಟೊವನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗುತ್ತಿದೆ, ಈ ಲಾರಿಗಳು ಬಾಂಗ್ಲಾ ಗಡಿಗೆ ತಲುಪಲು ನಾಲ್ಕರಿಂದ ಐದು ದಿನ ತೆಗೆದುಕೊಳ್ಳುತ್ತವೆ, ವಿಮಾನ ಸಂಚಾರ ಪುನಾರಂಭ ಗೊಂಡ ಮೇಲೆ ಇತರ ದೇಶಗಳಿಗೂ ಟೊಮೊಟೊ ರಫ್ತು ಮಾಡಲಾಗುತ್ತದೆ ಎಂದು ವೆಂಕಟೇಶ್ ತಿಳಿಸಿದ್ದಾರೆ.

ಇನ್ನೂ ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಜಾರ್ಖಂಡ್, ತಮಿಳುನಾಡು, ಮಧ್ಯ ಪ್ರದೇಶ ಹಾಗೂ ಗುಜರಾತ್ ಗಳಲ್ಲೂ ಕೂಡ ಕೋಲಾರ ಟೊಮೊಟೊಗೆ ಉತ್ತಮ ಬೇಡಿಕೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com