ಒಂದು ಗಂಟೆ ಮುಂಚಿತವಾಗಿ ಮುಚ್ಚಲಿದೆ ಆರ್‌ವಿ ರಸ್ತೆ- ಯಲಚೇನಹಳ್ಳಿ ನಮ್ಮ ಮೆಟ್ರೋ

ಗ್ರೀನ್ ಲೈನ್‌ ನಲ್ಲಿರುವ ಆರ್‌ವಿ ರಸ್ತೆ-ಯಲಚೇನಹಳ್ಳಿ ವ್ಯಾಪ್ತಿಯ ಮೆಟ್ರೋ ಸೇವೆಗಳು ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಮುಚ್ಚಲಿವೆ,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗ್ರೀನ್ ಲೈನ್‌ ನಲ್ಲಿರುವ ಆರ್‌ವಿ ರಸ್ತೆ-ಯಲಚೇನಹಳ್ಳಿ ವ್ಯಾಪ್ತಿಯ ಮೆಟ್ರೋ ಸೇವೆಗಳು ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಮುಚ್ಚಲಿವೆ.

ಎರಡನೇ ಹಂತದ ವಿಸ್ತರಣೆ ಹಿನ್ನೆಲೆಯಲ್ಲಿ ರೈಲುಗಳು ಸಂಪರ್ಕ ಮತ್ತು ವ್ಯವಸ್ಥೆ ಪರೀಕ್ಷೆಗಾಗಿ ಒಂದು ಗಂಟೆ ಮೊದಲೇ ಮುಚ್ಚಲು ತೀರ್ಮಾನಿಸಲಾಗಿದೆ.

ಗ್ರೀನ್ ಲೈನ್ ನಲ್ಲಿ ಸಂಚರಿಸುವ ಯಲಚೇನಹಳ್ಳಿ-ನಾಗಸಂದ್ರ ಮಾರ್ಗದ ಮೆಟ್ರೋ ರೈಲು 8ಗಂಟೆಗೆ ಸ್ಟೇಷನ್ ನಿಂದ ಹೊರಡಲಿದ್ದು, ನಾಗಸಂದ್ರದಿಂದ ಯಲಚೇನಹಳ್ಳಿಗೆ ಸಂಜೆ 6.56 ನಿಮಿಷಕ್ಕೆ ಕೊನೆಯ ರೈಲು ಹೊರಡಲಿದೆ, ಆದರೆ ಬೆಳಗ್ಗಿನ ರೈಲು ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. 

ಪರ್ಪಲ್ ಲೈನ್ (ಬೈಯಪ್ಪನಹಳ್ಳಿ-ಮೈಸೂರು ರಸ್ತೆ) ರೈಲುಗಳು ಎಂದಿನಂತೆ ಚಲಿಸುತ್ತವೆ. ಈ ವಾರಾಂತ್ಯದಲ್ಲಿ ಕೆಂಪೇಗೌಡ ಇಂಟರ್ ಚೇಂಜ್ ನಿಂದ ಯಲಚೇನಹಳ್ಳಿಗೆ ತೆರಳುವವರು ಸಂಜೆ 6.55 ಕ್ಕೆ ಬೈಯಪ್ಪನಹಳ್ಳಿಯಿಂದ ಮತ್ತು ಸಂಜೆ 7 ಗಂಟೆಗೆ ಮೈಸೂರು ರಸ್ತೆಯಿಂದ ಹೊರಡುವ ನಿಲ್ದಾಣದ ಕಡೆಗೆ ಕೊನೆಯ ರೈಲು ಹತ್ತಬೇಕು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com