ಬಂಡೀಪುರದಲ್ಲಿ 1,600 ಆನೆಗಳು: ಆಂತರಿಕ ಸಮೀಕ್ಷೆಯಲ್ಲಿ ಬಹಿರಂಗ

1,600 ಕ್ಕೂ ಹೆಚ್ಚು ಆನೆಗಳು ಬಂಡೀಪುರ ಟೈಗರ್ ರಿಸರ್ವ್ (ಬಿಟಿಆರ್) ಮತ್ತು ಸುತ್ತಮುತ್ತ ಅಲೆದಾಡುತ್ತಿವೆ ಎಂದು ಮೀಸಲು ಅರಣ್ಯ ಅಧಿಕಾರಿಗಳು ನಡೆಸಿದ ಆಂತರಿಕ ಸಮೀಕ್ಷೆಯೊಂದು ತಿಳಿಸಿದೆ.
ಬಂಡೀಪುರದಲ್ಲಿ 1,600 ಆನೆಗಳು: ಆಂತರಿಕ ಸಮೀಕ್ಷೆಯಲ್ಲಿ ಬಹಿರಂಗ

ಬೆಂಗಳೂರು: 1,600 ಕ್ಕೂ ಹೆಚ್ಚು ಆನೆಗಳು ಬಂಡೀಪುರ ಟೈಗರ್ ರಿಸರ್ವ್ (ಬಿಟಿಆರ್) ಮತ್ತು ಸುತ್ತಮುತ್ತ ಅಲೆದಾಡುತ್ತಿವೆ ಎಂದು ಮೀಸಲು ಅರಣ್ಯ ಅಧಿಕಾರಿಗಳು ನಡೆಸಿದ ಆಂತರಿಕ ಸಮೀಕ್ಷೆಯೊಂದು ತಿಳಿಸಿದೆ. ಏಪ್ರಿಲ್ ನಿಂದ ನಾಲ್ಕು ತಿಂಗಳವರೆಗೆ ಲಾಕ್ ಡೌನ್ ಮತ್ತು  ಅನ್ ಲಾಕ್ ಅವಧಿಯಲ್ಲಿ  ಈ ಸಮೀಕ್ಷೆಯನ್ನು ನಡೆಸಲಾಯಿತು. ಅಖಿಲ ಭಾರತ ಆನೆ ಗಣತಿ ನಡೆಸಿದಾಗ ಬಳಸುವ ಎಲ್ಲಾ ನಿಯಮಾವಳಿಗಳನ್ನು ಅಧಿಕಾರಿಗಳು ಅನುಸರಿಸಿದ್ದಾರೆ. ನಿರ್ದಿಷ್ಟ ಅರಣ್ಯಕ್ಕಾಗಿ ತಂಡವು ಇದೇ ಮೊದಲ ಬಾರಿಗೆ ಆಂತರಿಕ ಇಂತಹಾ ಸಮೀಕ್ಷೆಯನ್ನು ನಡೆಸಿದೆ. ಕಳೆದ ಅಖಿಲ ಭಾರತ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ 8,500 ಆನೆಗಳಿದೆ.

“ನಾಲ್ಕು ತಿಂಗಳವರೆಗೆ ಪ್ರತಿ ತಿಂಗಳು ಎರಡು ದಿನಗಳ ಸಮೀಕ್ಷೆ ನಡೆಸಲಾಗಿದೆ. ಜೀವಿಗಳ ಪ್ರಬೇಧಗಳು ಹಗೂ  ಅರಣ್ಯ ಪ್ರದೇಶಆವಾಸಸ್ಥಾನವನ್ನು ಹೇಗೆ ಸುಧಾರಿಸಬೇಕೆಂಬುದರ ಬಗ್ಗೆ ಮಾಹಿತಿ ಪಡೆಯಲು ಇದನ್ನು ಮಾಡಲಾಗಿದೆ ”ಎಂದು ಬಿಟಿಆರ್ ನಿರ್ದೇಶಕ ಟಿ ಬಾಲಚಂದ್ರ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಗೆ ತಿಳಿಸಿದ್ದಾರೆ. 

ಡೇಟಾವನ್ನು ವಿಶ್ಲೇಷಿಸಲು ಇಲಾಖೆ ನಿವೃತ್ತ ಜೀವಶಾಸ್ತ್ರಜ್ಞರ ಸಹಾಯವನ್ನು ತೆಗೆದುಕೊಳ್ಳುತ್ತಿದೆ. ಮೈಸೂರು ಅರಣ್ಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಈ ಸಮೀಕ್ಷಾ ಕಾರ್ಯದಲ್ಲಿ  ಭಾಗಿಯಾಗಿದ್ದರು. ಕಾಡಿನ ಪರಿಸರದ ಮೇಲ್ವಿಚಾರಣೆಯನ್ನು ಸುಧಾರಿಸಲು ಇದು ಸಹಾಯ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

“ನಿರ್ದೇಶಕರಾಗಿ, ಉತ್ತಮ ನಿರ್ವಹಣೆಗಾಗಿ ಈ ಪ್ರದೇಶದ ಬಗ್ಗೆ ಅರಿತುಕೊಳ್ಳಲು ನಾನು ಉತ್ಸುಕನಾಗಿದ್ದೇನೆ. ಅರಣ್ಯ ಸಿಬ್ಬಂದಿಗೆ ಆನೆಗಳು ಮತ್ತು ಅವು ಸೇರುವ ತಾಣಗಳ ಬಗ್ಗೆ ಅರಿವಿದ್ದರೆ ನಾವದನ್ನು ಉತ್ತಮವಾಗಿ ನಿರ್ವಹಿಸಬಹುದು. ಕಾಂಕ್ರೀಟ್ ಕಾಡಿಗಿಂತ ನೈಸರ್ಗಿಕ ಕಾಡಿನ ಸೃಷ್ಟಿ ಅಗತ್ಯವಾಗಿದೆ ಎಂದು  ನಾವು ಕಂಡುಕೊಂಡಿದ್ದೇವೆ. ಮೀಸಲು ಪ್ರದೇಶದಲ್ಲಿ 1,600 ಕ್ಕೂ ಹೆಚ್ಚು ಆನೆಗಳು ಇರುವುದಾಗಿ  ಪ್ರಾಥಮಿಕ ಮಾಹಿತಿಯು ತೋರಿಸಿದೆ. ಇನ್ನೂ 20 ದಿನಗಳಲ್ಲಿ ಅಂತಿಮ ಮೌಲ್ಯಮಾಪನ ವರದಿ ಸಿದ್ಧವಾಗಲಿದೆ ”ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com