ಚಿಕ್ಕಮಗಳೂರು: ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಆಸ್ಪತ್ರೆ ಬಿಲ್ 9.25 ಲಕ್ಷ; ಡಿಸಿಗೆ ದೂರು ನೀಡಿದ ಕುಟುಂಬ
ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ವ್ಯಕ್ತಿಯ ಖಾಸಗಿ ಆಸ್ಪತ್ರೆ ಬಿಲ್ ನೋಡಿ ಮೃತನ ಕುಟುಂಬಸ್ಥರು ದಂಗಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
Published: 19th September 2020 09:20 AM | Last Updated: 19th September 2020 12:44 PM | A+A A-

ಆಸ್ಪತ್ರೆ ಬಿಲ್
ಚಿಕ್ಕಮಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ವ್ಯಕ್ತಿಯ ಖಾಸಗಿ ಆಸ್ಪತ್ರೆ ಬಿಲ್ ನೋಡಿ ಮೃತನ ಕುಟುಂಬಸ್ಥರು ದಂಗಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಕೊರೊನಾ ವೈರಸ್ ಈಗ ಜನರನ್ನು ಭಯ ಬೀಳಿಸುತ್ತಿಲ್ಲ ಆದರೆ ಆಸ್ಪತ್ರೆಯ ಬಿಲ್‌ಗಳೇ ಕೊರೊನಾ ವೈರಸ್‌ಗಿಂತಲೂ ಡೇಂಜರ್ ಆಗಿದೆ.
ಕೊರೊನಾ ವೈರಸ್ ನಿಂದಾಗಿ ಮೃತಪಟ್ಟ ವ್ಯಕ್ತಿಯ ಖಾಸಗಿ ಆಸ್ಪತ್ರೆ ಬಿಲ್ ಬರೋಬ್ಬರಿ "ಒಂಬತ್ತು ಲಕ್ಷ ಇಪ್ಪತ್ತೈದು ಸಾವಿರದ ಆರು ನೂರಾ ಒಂದು' ರುಪಾಯಿ(9,25,601) ಆಗಿದೆ.
ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಗೆ ಸೇರಿದ್ದ ರೋಗಿಯು ಸಾವನ್ನಪ್ಪಿದ್ದಾನೆ. ಬದುಕುಳಿಯದಿದ್ದರೂ 9 ಲಕ್ಷಕ್ಕೂ ಹೆಚ್ಚು ಬಿಲ್ ಮಾಡಿದೆ.
ಸಖರಾಯಪಟ್ಟಣದ ಪಿಳ್ಳೆನಹಳ್ಳಿಯ 70 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೊಡ್ಡ ಮೊತ್ತದ ಬಿಲ್ ನಿಂದ ಕಂಗೆಟ್ಟಿರುವ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಆರೋಪಿಸಿ, ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.