ಶ್ರೀ ಗುರುರಾಘವೇಂದ್ರ ಬ್ಯಾಂಕ್ ಅಕ್ರಮ ಪ್ರಕರಣ: ರೂ.45.32 ಕೋಟಿ ಮೌಲ್ಯದ ಆಸ್ತಿ ಜಪ್ತಿ

ನಗರದ ಶ್ರೀಗುರುರಾಘವೇಂದ್ರ ಸಹಕಾರಿ ಬ್ಯಾಂಕ್'ನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಬ್ಯಾಂಕ್ ಅಧ್ಯಕ್ಷ ಸೇರಿದಂತೆ ನಾಲ್ವರಿಗೆ ಸೇರಿದ ರೂ.45.32 ಕೋಟಿ ಮೌಲ್ಯ ಸ್ಥಿರಾಸ್ಥಿ ಮತ್ತು ಚರಾಸ್ತಿಯನ್ನು ಜಪ್ತಿ ಮಾಡಿದೆ. 
ಬ್ಯಾಂಕ್ ಬಳಿ ನಿಂತಿರುವ ಖಾತೆದಾರರು
ಬ್ಯಾಂಕ್ ಬಳಿ ನಿಂತಿರುವ ಖಾತೆದಾರರು

ಬೆಂಗಳೂರು: ನಗರದ ಶ್ರೀಗುರುರಾಘವೇಂದ್ರ ಸಹಕಾರಿ ಬ್ಯಾಂಕ್'ನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಬ್ಯಾಂಕ್ ಅಧ್ಯಕ್ಷ ಸೇರಿದಂತೆ ನಾಲ್ವರಿಗೆ ಸೇರಿದ ರೂ.45.32 ಕೋಟಿ ಮೌಲ್ಯ ಸ್ಥಿರಾಸ್ಥಿ ಮತ್ತು ಚರಾಸ್ತಿಯನ್ನು ಜಪ್ತಿ ಮಾಡಿದೆ. 

ಬ್ಯಾಂಕ್'ನ ಅವ್ಯವಹಾರ ಪ್ರಕರಣದಲ್ಲಿ ಅಕ್ರಮವಾಗಿ ಹಣಕಾಸು ವರ್ಗಾವಣೆಯಾಗಿರುವ ವಿಚಾರ ತಿಳಿದ ಬಳಿದ ಇಡಿ ಅಧಿಕಾರಿಗಳು ಪಿಎಂಎಲ್ಎ ಕಾಯ್ದೆಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. 

ಬ್ಯಾಂಕ್'ನ ಅಧ್ಯಕ್ಷ ಕೆ.ರಾಮಕೃಷ್ಣ ಮೃತಪಟ್ಟ ಅಧಿಕಾರಿಗಳಾದ ಟಿಎಸ್ ಸತ್ಯ ನಾರಾಯಣ್, ಎಂವಿ.ಮಯ್ಯ, ಬ್ಯಾಂಕ್'ನ ಸಿಇಒ ಎ.ಸಂತೋಷ್ ಕುಮಾರ್ ಸೇರಿದಂತೆ ಇತರೆ ಸಿಬ್ಬಂದಿಗೆ ಸೇರಿದ ಕೃಷಿ ಭೂಮಿ, ಅಪಾರ್ಟ್'ಮೆಂಟ್, ಮನೆ ಸೇರಿದಂತೆ ರೂ.38.16 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ವಿವಿಧ ಬ್ಯಾಂಕ್ ಖಾತೆಯಲ್ಲಿದ್ದ ರೂ.7.16 ಕೋಟಿ ನಗದನ್ನು ಜಪ್ತಿ ಮಾಡಲಾಗಿದೆ. ಒಟ್ಟು ರೂ.45.32 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 

ಬ್ಯಾಂಕ್'ನ ಟಿಡಿಎಸ್ ತಪ್ಪಿಸುವ ಇದ್ದೇಶದಿಂದ 2015ರಲ್ಲಿ ರಾಮಕೃಷ್ಣ ಮತ್ತು ಟಿ.ಎಸ್.ಸತ್ಯನಾರಾಯಣ್ ಜೊತೆಗೂಡಿ ಶ್ರೀಗುರುಸರ್ವಭೌಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಾಪಿಸಿದ್ದರು. 2016ರಿಂದ 2019ರವರೆಗೆ ಟಿಡಿಎಸ್ ಸೇರಿ ಬ್ಯಾಂಕ್'ಗೆ ಸಂಬಂಧಿಸಿದಂತೆ ತೆರಿಗೆ ಪಾವತಿಸಿಲ್ಲ. ಶ್ರೀಗುರುಸರ್ವಭೌಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ ಶ್ರೀಗುರುರಾಘವೇಂದ್ರ ಸಹಕಾರಿ ಬ್ಯಾಂಕ್'ಗೆ ಕೋಟ್ಯಾಂತರ ರುಪಾಯಿ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಎನ್'ಪಿಎ ತಪ್ಪಿಸಲು ಈ ಕ್ರಮ ಅನುಸರಿಸಿದೆ. ರಾಮಕೃಷ್ಣ ಮತ್ತು ಎಂ.ವಿ.ಮಯ್ಯ ಅವ್ಯವಹಾರ ನಡೆಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com