ಎಂಜಿ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ ಸೇರಿದಂತೆ ನಗರದ 10 ರಸ್ತೆಗಳಲ್ಲಿ ಇಂದಿನಿಂದ ಸ್ಮಾರ್ಟ್ ಪಾರ್ಕಿಂಗ್ ಆರಂಭ

ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆಯನ್ನು ನಿವಾರಿಸಲು ಜಾರಿಗೆ ತರಲಾಗಿರುವ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯ ಮೊದಲ ಹಂತದ 10 ಪ್ರಮುಖ ರಸ್ತೆಗಳಲ್ಲಿ ಶನಿವಾರ ಚಾಲನೆ ನೀಡಲಾಗುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆಯನ್ನು ನಿವಾರಿಸಲು ಜಾರಿಗೆ ತರಲಾಗಿರುವ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯ ಮೊದಲ ಹಂತದ 10 ಪ್ರಮುಖ ರಸ್ತೆಗಳಲ್ಲಿ ಶನಿವಾರ ಚಾಲನೆ ನೀಡಲಾಗುತ್ತಿದೆ. 

ಕಸ್ತೂರಬಾ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ, ಎಂ.ಜಿ.ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಮ್ಯೂಸಿಯಂ ಕ್ರಾಸ್ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ಚರ್ಚ್ ಸ್ಟ್ರೀಟ್ ಅಲಿ ಅಸ್ಕರ್ ರಸ್ತೆಯಲ್ಲಿ ಸ್ಮಾರ್ಟ್ ಪಾರ್ಕಿಂಗ್ ಆರಂಭವಾಗುತ್ತಿದೆ. 

ನಗರದ     ಒಟ್ಟು 85 ರಸ್ತೆಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲು ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ 10 ರಸ್ತೆಗಳಲ್ಲಿ ಬಿಲ್ಡಿಂಗ್ ಕಂಟ್ರೋಲ್ ಸೆಲ್ಯೂಷನ್ ಇಂಡಿಯಾ ಸಂಸ್ಥೆ ವತಿಯಿಂದ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಹಿಂದೆ ಪ್ರಾಯೋಗಿಕವಾಗಿ ಕರ್ಸೂರ ಬಾ ರಸ್ತೆ ಮತ್ತು ಸೇಂಟ್ ಮಾರ್ಕ್ಸ್ ರಸ್ತೆಗಳಲ್ಲಿ ಯೋಜನೆ ಜಾರಿಗೊಳಿಸಲಾಗಿತ್ತು. 

ಪ್ರಸ್ತುತ ಚಾನೆ ನೀಡಲಾಗುತ್ತಿರುವ 10 ರಸ್ತೆಗಳಲ್ಲಿ 475 ಕಾರುಗಳು ಮತ್ತು 510 ದ್ವಿಚಕ್ರ ವಾಹನ ನೀಲುಗಡೆಗೆ ಅವಕಾಶ ನೀಡಲಾಗುತ್ತದೆ. ಮುಂದಿನ 10 ವರ್ಷಗಳವೆರೆಗೆ ವಾಹನ ನಿಲುಗಡೆಗೆ ಯಾವುದೇ ಸಮಸ್ಯೆಯಾಗದಂತೆ ವಿನ್ಯಾಸಗೊಳಿಸಲಾಗಿದೆ. ನಿರ್ವಹಣೆಯಲ್ಲಿ ಅದೇ ಗುತ್ತಿಗೆ ಸಂಸ್ಥೆ ಮಾಡಲಿದ್ದು, ಸಂಸ್ಥೆ ವಾಹನ ನಿಲುಗಡೆ ಶುಲ್ಕ ವಸೂಲಿ ಮಾಡಿಕೊಂಡು ಬಿಬಿಎಂಪಿಗೆ ವಾರ್ಷಿಕ ರೂ.31.56 ಕೋಟಿ ಶುಲ್ಕ ಪಾವತಿ ಮಾಡಲಿದೆ. 

ವಾಹನ ನಿಲುಗಡೆಗೆ ಸ್ಥಳಾವಕಾಶದ ಬಗ್ಗೆ ಮಾಹಿತಿ ಪಡೆಯುವವರು, ನಿಲುಗಡೆ ನಂತರ ಶುಲ್ಕ ಪಾವತಿಸಲು ಬೆಂಗಳೂರು ಸ್ಮಾರ್ಟ್ ಪಾರ್ಕಿಂಗ್ ಮೊಬೈಲ್ ಆ್ಯಪ್ ಬಳಸಬೇಕಿದೆ. ವಾಹನ ಮಾಲೀಕರು ಯುಪಿಐನಂತಹ ಡಿಜಿಟಲ್ ಪೇಮೆಂಟ್ ಆ್ಯಪ್, ಕ್ರೆಡಿಟ್, ಡೆಬಿಟ್ ಕಾರ್ಡ್ ಗಳಮೂಲಕ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಮೊದಲ 7 ದಿನಗಳ ಕಾಲ ವಾಹನ ನಿಲುಗಡೆ ಶುಕ್ಲ ಪಾವತಿಸುವವರಿಗೆ ಶೇ.100 ಕ್ಯಾಷ್ ಬ್ಯಾಕ್ ನೀಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com