ಅರ್ಕೇಶ್ವರ ದೇವಾಲಯದಲ್ಲಿ ತ್ರಿವಳಿ ಕೊಲೆ, ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ

ಅರ್ಕೇಶ್ವರ ದೇವಾಲಯದಲ್ಲಿ ನಡೆದಿದ್ದ ಮೂವರು ಅರ್ಚಕರ ಹತ್ಯೆ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಮತ್ತೆ ೪ ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ ಒಟ್ಟು 9  ಮಂದಿಯನ್ನು ಬಂಧಿಸಿಲಾಗಿದೆ.ಇತ್ತೀಚೆಗಷ್ಟೇ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು.
ಬಂಧಿತ ಆರೋಪಿಗಳೊಂದಿಗೆ ಪೊಲೀಸರು
ಬಂಧಿತ ಆರೋಪಿಗಳೊಂದಿಗೆ ಪೊಲೀಸರು

ಮಂಡ್ಯ: ಅರ್ಕೇಶ್ವರ ದೇವಾಲಯದಲ್ಲಿ ನಡೆದಿದ್ದ ಮೂವರು ಅರ್ಚಕರ ಹತ್ಯೆ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಮತ್ತೆ ೪ ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ.ಇತ್ತೀಚೆಗಷ್ಟೇ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು.

ನಗರದ ಪೂರ್ವಠಾಣೆಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ್, ಬಂಧಿತರಿಂದ 4 ಲಕ್ಷದ 7 ಸಾವಿರದ 9935 ರೂ. ನಗದು, ಎರಡು ಮೊಬೈಲ್, ಒಂದು ಜ್ಯುಪಿಟರ್ ಸ್ಕೂಟರ್,ಎರಡು ಮೋಟಾರ್ ಬೈಕ್‌ಗಳು,ಹಾಗೂ ಒಂದು ಟಾಟಾಮ್ಯಾಜಿಕ್ ಪ್ಯಾಸೆಂಜರ್ ವಾಹನವನ್ನೂ ಸಹ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಳೆದ ಸೆ.೧೪ ರಂದು ತೊಪ್ಪನಹಳ್ಳಿಯ ಮಂಜು,ಕೆ.ಹೊನ್ನಲಗೆರೆಯಲ್ಲಿದ್ದ ಆಂಧ್ರದ ವಿಜಯ್, ಅರೇಕಲ್ ದೊಡ್ಡಿಯ ಚಂದ್ರ ಆಲಿಯಾಸ್ ಗಾಂಧಿ ಎಂಬುವವರನ್ನು ಪೈರಿಂಗ್ ಮಾಡಿ ಬಂಧಿಸಲಾಗಿತ್ತು, ಇವರ ಜೊತೆಗೆ ಗಾಮನಹಳ್ಳಿ ಸಂತೇಮಾಳದ ರಘು,ಅಭಿ ಅವರನ್ನು ಬಂಧಿಸಲಾಗಿತ್ತು.

ಇನ್ನುಳಿದ ಆರೋಪಿಗಳಾದ ಹಾಸನ ಬಳಿಯ ಬುವನಹಳ್ಳಿ ಶಿವರಾಜು,ಬಿ.ಎ ಆಲಿಯಾಸ್ ಶಿವು,ರಾಮನಗರ ಸಿದ್ದಬೋವಿ ಪಾಳ್ಯದ ಮಂಜ ಆಲಿಯಾಸ್ ಡಬಲ್ ಇಂಜಿನ್ ಮಂಜ,ಮದ್ದೂರು ತಾಲ್ಲೂಕಿನ ಸಾದೊಳಲಿನ  ಶಿವರಾಜ ಆಲಿಯಾಸ್ ಕುಳ್ಳಶಿವ,ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ಗಣೇಶ ಎಂಬುವವರನ್ನು ನಿನ್ನೆ ಬಂಧಿಸಲಾಗಿದೆ ಎಂದರು.

ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ನವೀನ್ ನೇತೃತ್ವದಲ್ಲಿ ತನಿಖಾತಂಡವನ್ನು ರಚಿಸಲಾಗಿತ್ತು,ಸಿಪಿಐಗಳಾದ ಕೆ.ಸಂತೋಷ್, ಎನ್.ವಿ.ಮಹೇಶ್, ಹರೀಶ್ ಬಾಬು,ಪಿಐಗಳಾದಆನಂದೇಗೌಡ,ಹರೀಶ್‌ಕುಮಾರ್ ಮತ್ತು ವಿವಿಧ ಠಾಣೆಯ ಸಿಬ್ಬಂದಿಗಳು ಆರೋಪಿಗಳ ಪತ್ತೆ ಕಾರ್ಯದ ತಂಡದಲ್ಲಿ ಪಾಲ್ಗೊಂಡಿದ್ದರು.

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯವನ್ನು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್,ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com