ಮಂಡ್ಯ: ಗ್ರಾಮದ ಮಧ್ಯೆಯೇ ಯುವಕನ ಬರ್ಬರ ಹತ್ಯೆ!

ಗ್ರಾಮದ ಮಧ್ಯೆದಲ್ಲಿಯೇ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಹೊಡಾಘಟ್ಟ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ಗ್ರಾಮದ ಪೂಜಾರಿ ಮಂಜಣ್ಣ ಎಂಬುವರ ಮಗ ಅಭಿಷೇಕ್(೨೫) ಕೊಲೆಯಾದ ಯುವಕ.

Published: 20th September 2020 10:27 PM  |   Last Updated: 20th September 2020 10:28 PM   |  A+A-


Casual_image1

ಸಾಂದರ್ಭಿಕ ಚಿತ್ರ

Posted By : Nagaraja AB
Source : RC Network

ಮಂಡ್ಯ: ಗ್ರಾಮದ ಮಧ್ಯೆದಲ್ಲಿಯೇ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಹೊಡಾಘಟ್ಟ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ಗ್ರಾಮದ ಪೂಜಾರಿ ಮಂಜಣ್ಣ ಎಂಬುವರ ಮಗ ಅಭಿಷೇಕ್(೨೫) ಕೊಲೆಯಾದ ಯುವಕ.

ಶನಿವಾರ ರಾತ್ರಿ ೧೦ ಗಂಟೆಗೆ ಮನೆಗೆ ಬಂದ ಅಭಿಷೇಕ್‌ಗೆ ತಾಯಿ ಊಟ ಬಡಿಸಿದ್ದಾರೆ. ಊಟ ಮಾಡುತ್ತಿದಂತೆ ಯಾರೋ ಪೋನ್ ಮಾಡಿದ್ದಾರೆ. ಬಳಿಕ ಎಂದಿನಂತೆ  ರೇಷ್ಮೆ ಸಾಕಣೆ ಮನೆಯಲ್ಲಿ ಮಲಗುವುದಾಗಿ ಹೇಳಿ ಹೊರ ಹೋದವನನ್ನು ಯಾರೊ ದುಷ್ಕರ್ಮಿಗಳು ತಲೆಯ ಭಾಗಕ್ಕೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮುಂಜಾನೆ ಡೈರಿಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದವರಿಗೆ ಯುವಕನ  ಕೊಲೆಯಾಗಿರುವುದು ತಿಳಿದಿದೆ.

ಅಭಿಷೇಕ್ ಸದಾ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದ. ಹೆತ್ತವರು ಎಷ್ಟೇ ಬುದ್ಧಿವಾದ ಹೇಳಿದರೂ ಸ್ನೇಹಿತರ ಸಹವಾಸದಿಂದ ದೂರವಾಗಿರಲಿಲ್ಲ. ಶನಿವಾರವೂ ಬೆಳಗ್ಗೆ ಮನೆಯಿಂದ ಹೋದನು ರಾತ್ರಿ ೧೦ ಗಂಟೆಗೆ ಬಂದಿದ್ದ. ರೇಷ್ಮೆ ಸಾಕಾಣಿಕೆ ಮನೆಗೆ ಮಲಗಲು ಹೋದವನನ್ನು ಯಾರೋ ಸ್ನೇಹಿತರೇ ಕರೆಸಿಕೊಂಡು ಕೊಲೆ ಮಾಡಿರಬಹುದು ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಗ್ರಾಮದ ಮಧ್ಯ ಭಾಗದಲ್ಲೇ ನಡೆದ ಕೊಲೆಯಿಂದಾಗಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ಥಳಕೆ ಪಿಎಸ್‌ಐ ಮಹೇಶ್, ಸಬ್ ಇನ್ಸ್ಪೆಕ್ಟರ್ ಚಂದ್ರಹಾಸನ್ ನಾಯ್ಕ್  ನೇತೃತ್ವದ ಪೊಲೀಸರು ಭೇಟಿ ನೀಡಿ  ಪರಿಶೀಲನೆ ನಡೆಸಿದ್ದು  ಈ ಸಂಬಂಧ ಕೆರಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಹಂತಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Stay up to date on all the latest ರಾಜ್ಯ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp