ಅಪಘಾತ ನಡೆದ ಸ್ಥಳದಲ್ಲೇ ದತ್ತಾಂಶ ಸಂಗ್ರಹಣೆಗೆ ಮೊಬೈಲ್ ಅಪ್ಲಿಕೇಷನ್ ಶೀಘ್ರ

ಇಂಟಿಗ್ರೇಟೆಡ್ ರೋಡ್ ಆಕ್ಸಿಡೆಂಟ್ ಡೇಟಾಬೇಸ್ (ಐಆರ್ಎಡಿ) ಮೊಬೈಲ್ ಅಪ್ಲಿಕೇಶನ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು ಅಪಘಾತ ಪ್ರಕರಣದ ದತ್ತಾಂಶಗಳನ್ನು ಸ್ಥಳದಲ್ಲೇ ಸಂಗ್ರಹಿಸಲು ಸಾಧ್ಯವಾಗಲಿದೆ.
ಅಪಘಾತ ನಡೆದ ಸ್ಥಳದಲ್ಲೇ ದತ್ತಾಂಶ ಸಂಗ್ರಹಣೆಗೆ ಮೊಬೈಲ್ ಅಪ್ಲಿಕೇಷನ್ ಶೀಘ್ರ

ಬೆಂಗಳೂರು: ಇಂಟಿಗ್ರೇಟೆಡ್ ರೋಡ್ ಆಕ್ಸಿಡೆಂಟ್ ಡೇಟಾಬೇಸ್ (ಐಆರ್ಎಡಿ) ಮೊಬೈಲ್ ಅಪ್ಲಿಕೇಶನ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು ಅಪಘಾತ ಪ್ರಕರಣದ ದತ್ತಾಂಶಗಳನ್ನು ಸ್ಥಳದಲ್ಲೇ ಸಂಗ್ರಹಿಸಲು ಸಾಧ್ಯವಾಗಲಿದೆ.  ಇದು ರಸ್ತೆ ಅಪಘಾತಗಳ ಕಾರಣಗಳನ್ನು ವಿಶ್ಲೇಷಿಸಲು ಸಹಾಯ ಮಾಡುತ್ತದೆ ಮತ್ತು ಸಾವುನೋವುಗಳ ಪ್ರಮಾಣ ತಗ್ಗಿಸಲು ನೆರವಾಗುತ್ತದೆ. ಈ ಉಪಕ್ರಮದ ಉಸ್ತುವಾರಿ ಹೊಂದಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ (MORTH) ವಿಶ್ವಬ್ಯಾಂಕ್ ಬೆಂಬಲ ನೀಡಲಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರವು ಸಾಫ್ಟ್‌ವೇರ್ ಅನ್ನು ಒದಗಿಸಿದರೆ, ಐಐಟಿ-ಮದ್ರಾಸ್ ಬಳಕೆಗೆ ಯೋಗ್ಯವಾದ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸುತ್ತದೆ. ಪ್ರಾಯೋಗಿಕ ಯೋಜನೆಯನ್ನು ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ತಮಿಳುನಾಡು ಈ ಆರು ರಾಜ್ಯಗಳಲ್ಲಿ ಜಾರಿಗೆ ತರಲಾಗುವುದು. ಕರ್ನಾಟಕದಲ್ಲಿ ಬೆಳಗಾವಿ, ಬೀದರ್, ಮಂಡ್ಯ ಮತ್ತು ತುಮಕುರು ಈ ನಾಲ್ಕು ಜಿಲ್ಲೆಗಳನ್ನು ಇದರ ಪ್ರಾಯೋಗಿಕ ಯೋಜನೆಗೆ ಆಯ್ಕೆ ಮಾಡಲಾಗಿದೆ. 

ಸಂಗ್ರಹಿಸಿದ ದತ್ತಾಂಶವನ್ನು ಸಮನ್ವಯಗೊಳಿಸಲು ಪ್ರತಿ ಜಿಲ್ಲೆಯ ಪೊಲೀಸ್ ಅಧೀಕ್ಷಕರನ್ನು ನೋಡಲ್ ಅಧಿಕಾರಿಯಾಗಿ ಮಾಡಲಾಗುತ್ತದೆ. ಪೊಲೀಸ್, ಸಾರಿಗೆ, ಆರೋಗ್ಯ, ಪಿಡಬ್ಲ್ಯುಡಿ, ಎನ್‌ಎಚ್‌ಎಐನಂತಹ ಮಧ್ಯಸ್ಥಗಾರರಿಗೆ ತಮ್ಮ ಮೊಬೈಲ್ ಫೋನ್‌ ಮೂಲಕ ಸ್ಥಳದಲ್ಲೇ ಅಪಘಾತದ ಡೇಟಾವನ್ನು ಸಂಗ್ರಹಿಸಲು ಈ ಅಪ್ಲಿಕೇಶನ್ ಅನುವು ಮಾಡಿಕೊಡುತ್ತದೆ.

ಬಹು ಮುಖ್ಯವಾಗಿ, ಇದು ಪೊಲೀಸ್ ಸಿಬ್ಬಂದಿಗೆಅಪಘಾತದ ಬಗ್ಗೆ ಫೋಟೋಗಳು ಮತ್ತು ವೀಡಿಯೊಗಳ ಜೊತೆಗೆ ವಿವರಗಳನ್ನು ನಮೂದಿಸಲು ಅನುವು ಮಾಡಿಕೊಡುತ್ತದೆ, ಅದರ ನಂತರ ಘಟನೆಗೆ ವಿಶಿಷ್ಟವಾದ ಐಡಿ ರಚಿಸಲಾಗುವುದು. ತರುವಾಯ, ಲೋಕೋಪಯೋಗಿ ಇಲಾಖೆ ಅಥವಾ ಸ್ಥಳೀಯಎಂಜಿನಿಯರ್ ಅವರ ಮೊಬೈಲ್ ಸಾಧನದಲ್ಲಿ ಎಚ್ಚರಿಕೆಯನ್ನು ಸ್ವೀಕರಿಸುತ್ತಾರೆ. ನಂತರ ಅಧಿಕಾರಿ ಅಪಘಾತದ ಸ್ಥಳಕ್ಕೆ ಭೇಟಿ ನೀಡುತ್ತಾರೆ, ಅದನ್ನು ಪರಿಶೀಲಿಸುತ್ತಾರೆ ಮತ್ತು ರಸ್ತೆ ವಿನ್ಯಾಸದಲ್ಲಿನ ತೊಡಕುಗಳ ಬಗ್ಗೆ ವಿವರಗಳನ್ನು ನೀಡುತ್ತಾರೆ.

ಹೀಗೆ ಸಂಗ್ರಹಿಸಿದ ಡೇಟಾವನ್ನು ಐಐಟಿ-ಎಂ ತಂಡವು ವಿಶ್ಲೇಷಿಸುತ್ತದೆ, ನಂತರ ರಸ್ತೆ ವಿನ್ಯಾಸ ಸರಿಪಡಿಸುವ ವ ಕ್ರಮಗಳನ್ನು ತೆಗೆದುಕೊಳ್ಳಬೇಕಾದಲ್ಲಿ ಆ ಟೀಂ ಸೂಚನೆ ಕೊಡುತ್ತದೆ. ನಂತರ ರಸ್ತೆ ಸುರಕ್ಷತಾ ಪ್ರಾಧಿಕಾರವು ನೀಡಿದ ಸಲಹೆಗಳನ್ನು ಕಾರ್ಯಗತಗೊಳಿಸುತ್ತದೆ. ಐರಾಡ್ ಆ್ಯಪ್‌ನಲ್ಲಿ ಎರಡು ದಿನಗಳ ಒರಿಯಂಟೇಷನ್ ಮತ್ತು ತರಬೇತಿ ಕಾರ್ಯಕ್ರಮವನ್ನು ಈಗಾಗಲೇ ಸೆಪ್ಟೆಂಬರ್ 7-8 ರಂದು ಬೆಂಗಳೂರಿನಲ್ಲಿ ಆಯ್ದ ರಾಜ್ಯದ MORTH ಜಿಲ್ಲೆಗಳಿಗೆ ನಡೆಸಲಾಯಿತು.

ಐರಾಡ್ ಅನ್ನು ವಾಹನ್ 4 ಸರ್ವರ್ನೊಂದಿಗೆ ಸಂಯೋಜಿಸಬೇಕಾಗಿದೆ, ಅಲ್ಲಿ ಎಲ್ಲಾ ವಾಹನ ವಿವರಗಳು ಈಗಾಗಲೇ ಸಿದ್ದವಿದೆ. . ಚಾಲಕ ವಿವರಗಳನ್ನು ಪಡೆಯಲು ಇದನ್ನು ಲೈನ್  ಸರ್ವರ್‌ನೊಂದಿಗೆ ಸಂಯೋಜಿಸಲಾಗುವುದು. ಇದು ಎಫ್‌ಐಆರ್ ನೋಂದಣಿ ಮತ್ತು ವಿಮೆ ಸೇರಿದಂತೆ ಮತ್ತೊಂದು ದಾವೆ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಅಪಘಾತದ ನಂತರ ಆರೋಗ್ಯ ಇಲಾಖೆಯ 108 ಸಹ ಸಂತ್ರಸ್ತೆಯ ಸ್ಥಿತಿಯನ್ನು ಆ್ಯಪ್ ಮೂಲಕ ನವೀಕರಿಸುತ್ತದೆ ”ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ಶಿವರಾಜ್ ಪಾಟೀಲ್ (ಇ-ಆಡಳಿತ ಮತ್ತು ಪರಿಸರ) ಹೇಳಿದರು

ಬೆಂಗಳೂರು ಒಂದರಲ್ಲೇ ಆಗಸ್ಟ್ 31 ರ ಹೊತ್ತಿಗೆ 2,066 ರಸ್ತೆ ಅಪಘಾತಗಳು ಸಂಭವಿಸಿವೆ ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ, ಈ ಪೈಕಿ 390 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಮತ್ತು 409 ಜನರು ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com